Dhuarandhar 2; 50 ದಿನ ಪೂರೈಸಿದ 'ಧುರಂಧರ್ 2'; ಕರ್ನಾಟಕದಲ್ಲಿ ಗಳಿಸಿದ್ದು ದಾಖಲೆ ಕಲೆಕ್ಷನ್
ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ಗಲ್ಲಾಪೆಟ್ಟಿಗೆಯ ಒಂದೊಂದೇ ದಾಖಲೆಗಳನ್ನು ಅಳಿಸಿ ಹಾಕುತ್ತಾ ಮುನ್ನುಗ್ಗುತ್ತಿದೆ. ಆದಿತ್ಯ ಧರ್ ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾಗೆ ಕ್ರೇಜಿ ರೆಸ್ಪಾನ್ಸ್ ಸಿಕ್ಕಿತ್ತು. ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು.
'ಧುರಂಧರ್' ಕೂಡ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕ್ಲಬ್ ಸೇರಿತ್ತು. ಆದರೆ, 'ಧುರಂಧರ್ 2'ಗೆ ಮೊದಲ ಪಾರ್ಟ್‌ಗಿಂತಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಭಾರತದ ಬಾಕ್ಸಾಫೀಸ್ ದಾಖಲೆಗಳನ್ನು ಹೊಡೆದು ಹಾಕುತ್ತಾ ಮುನ್ನುಗ್ಗುತ್ತಿದೆ. ಭಾರತದ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಈ ಸಿನಿಮಾ ಈಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

'ಧುರಂಧರ್ 2' ವಿಶೇಷತೆ ಅಂದರೆ, ಈ ಸಿನಿಮಾ ದಕ್ಷಿಣ ಭಾರತದಲ್ಲಿಯೇ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಈ 50 ದಿನಗಳಲ್ಲಿ 'ಧುರಂಧರ್ 2' ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳಂನಲ್ಲಿ ಈ ಸಿನಿಮಾದ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್ 2' ಕರ್ನಾಟಕ ಕಲೆಕ್ಷನ್
'ಧುರಂಧರ್ 2' ವಿಶ್ವದಾದ್ಯಂತ ಉತ್ತಮ ಕಲೆಕ್ಷನ್ ಆಗಿತ್ತು. ಅದರಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಆಗಿತ್ತು. ಸಹಜವಾಗಿ ಉತ್ತರ ಭಾರತದಲ್ಲಿ ಈ ಬಾಲಿವುಡ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ ದಕ್ಷಿಣ ಭಾರತದಲ್ಲಿಯೂ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಬಾಕ್ಸಾಫೀಸ್ ಟ್ರ್ಯಾಕರ್ ಜೆರಿನ್ ಜಾರ್ಕ್ ಕುಟ್ಟಿ ತಮ್ಮ ಎಕ್ಸ್ ಖಾತೆಯಲ್ಲಿ ಈ 50 ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಈ ಸಿನಿಮಾ ಗಳಿಸಿದ ಕಲೆಕ್ಷನ್‌ನ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ 141.03 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
Ek Din Box Office ; ಆಮಿರ್ ಖಾನ್ ಮಗನಿಗೆ ಕ್ಯಾರೇ ಎನ್ನದ ಪ್ರೇಕ್ಷಕರು - ಆರು ದಿನವಾದರೂ ಚಿತ್ರ ಗಳಿಸಿದ್ದು ಇಷ್ಟೇ
ದಕ್ಷಿಣ ಭಾರತದ ಕಲೆಕ್ಷನ್
ಕೇವಲ ಉತ್ತರ ಭಾರತದಲ್ಲಿ ಅಷ್ಟೇ ಅಲ್ಲ. 'ಧುರಂಧರ್ 2' ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಅದ್ಬುತ ಕಲೆಕ್ಷನ್ ಮಾಡಿದೆ. ಈ 50 ದಿನಗಳಲ್ಲಿ, ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳಂನ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
'ಧುರಂಧರ್ 2' ದಕ್ಷಿಣ ಭಾರತದ ಕಲೆಕ್ಷನ್
ಕರ್ನಾಟಕ ₹141.03 ಕೋಟಿ
ತೆಲಂಗಾಣ ₹71.99 ಕೋಟಿ
ಆಂಧ್ರ ಪ್ರದೇಶ ₹28.38 ಕೋಟಿ
ತಮಿಳುನಾಡು ₹38.93 ಕೋಟಿ
ಕೇರಳ ₹19.51 ಕೋಟಿ

ಯಾವ ಭಾಷೆಯಿಂದ ಎಷ್ಟು ಕಲೆಕ್ಷನ್?
'ಧುರಂಧರ್ 2' ಕೇವಲ ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್ ಸೇರಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಭಾಷಾವಾರು ಲೆಕ್ಕಾಚಾರ ಹೀಗಿದೆ.
ಹಿಂದಿ ₹223.15 ಕೋಟಿ
ತೆಲುಗು ₹47.30 ಕೋಟಿ
ತಮಿಳು ₹22.87 ಕೋಟಿ
ಕನ್ನಡ ₹4.63 ಕೋಟಿ
ಮಲಯಾಳಂ ₹1.89 ಕೋಟಿ
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳು
ಇನ್ನು ದಕ್ಷಿಣ ಭಾರತದಲ್ಲಿ ಬಾಲಿವುಡ್ ಸಿನಿಮಾಗಳು ಕಲೆಕ್ಷನ್ ಅಷ್ಟಕ್ಕಷ್ಟೇ. ಒಂದು ವೇಳೆ ಬಿಗ್ ಸಿನಿಮಾಗಳು ಬಂದರೇ ನೂರಾರು ಕೋಟಿಯಲ್ಲಿ ಕಲೆಕ್ಷನ್ ಆಗುತ್ತವೆ. ಹೀಗೆ ದಕ್ಷಿಣ ಭಾರತದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳ ಪಟ್ಟಿ ಹೀಗಿದೆ.
ಧುರಂಧರ್ 2 ₹299.84 ಕೋಟಿ
ಅವತಾರ್ 2 ₹296.90 ಕೋಟಿ
ಜವಾನ್ ₹188.13 ಕೋಟಿ
ಧುರಂಧರ್ ₹153.05 ಕೋಟಿ
ಪಠಾಣ್ ₹135.05 ಕೋಟಿ
ಅನಿಮಲ್ ₹134.12 ಕೋಟಿ
ಅವೆಂಜರ್ಸ್ ಎಂಡ್‌ಗೇಮ್ ₹125.75 ಕೋಟಿ
ಸ್ಪೈಡರ್‌ಮ್ಯಾನ್ ₹112.14 ಕೋಟಿ
ಅವತಾರ್ 3 ₹107.95 ಕೋಟಿ
ದಂಗಲ್ ₹89.70 ಕೋಟಿ


Click it and Unblock the Notifications