ಹಠಕ್ಕೆ ಬಿದ್ದು 'ಥಗ್ ಲೈಫ್' ರಿಲೀಸ್ ಮಾಡದ ಕಮಲ್ ಹಾಸನ್ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಕಳೆದುಕೊಂಡಿದ್ದೆಷ್ಟು?
ಕಮಲ್ ಹಾಸನ್ ಅಹಂಗೆ ತಕ್ಕ ಉತ್ತರ ಸಿಕ್ಕಿದೆ. ಕಮಲ್ ಹಾಗೂ ಮಣಿರತ್ನಂ ಕಾಂಬಿನೇಷನ್ ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳು ನಾಡಿನಲ್ಲಿಯೇ ಜನರು ಕಮಲ್ ಸಿನಿಮಾ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಕೆಲವರು ಸಿನಿಮಾ ನಿಧಾನಗತಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಮತ್ತೆ ಕೆಲವರು ಇದು ಮಣಿರತ್ನಂ ಸಿನಿಮಾ ಅಲ್ಲವೇ ಅಲ್ಲ ಎಂದು ಹೇಳುತ್ತಿದ್ದಾರೆ.
ಬಾರೀ ನಿರೀಕ್ಷೆಯೊಂದಿಗೆ ರಿಲೀಸ್ ಆಗಿದ್ದ 'ಥಗ್ ಲೈಫ್' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುವ ಎಲ್ಲಾ ಸೂಚನೆಗಳೂ ಸಿಕ್ಕಿವೆ. ಈ ವೇಳೆ ಕನ್ನಡಿಗರೊಂದಿಗೆ ವಿವಾದ ಮಾಡಿಕೊಂಡು ಬೆಳೆಕಾಳು ಬೇಯಿಸಿಕೊಳ್ಳುವ ಕಮಲ್ ಹಾಸನ್ ತಂತ್ರ ಅವರಿಗೆ ಉಲ್ಟಾ ಹೊಡೆದಿದೆ. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಗಳಿಸಬಹುದಾಗಿದ್ದ ಹಣ ಕೂಡ ಕೈ ತಪ್ಪಿ ಹೋಗಿದೆ. ಈಗಾಗಲೇ ವಿಮರ್ಶೆಗಳು ಹೊರಬಿದ್ದಿದ್ದರಿಂದ ಜೂನ್ 10ರ ಬಳಿಕ ರಿಲೀಸ್ ಆದರೂ ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದು ಅಷ್ಟಕ್ಕಷ್ಟೇ.

ಒಂದು ವೇಳೆ ಕರ್ನಾಟಕದಲ್ಲಿ ರಿಲೀಸ್ ಆಗಿದ್ದರೆ, ಇಲ್ಲಿಂದಲೇ ಅವರಿಗೆ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗುತ್ತಿತ್ತು. ಕನ್ನಡಕ್ಕಿಂತ ಪರಭಾಷೆಯ ಸಿನಿಮಾ ಕೋಟಿ ಲೆಕ್ಕದಲ್ಲಿ ಲೂಟಿ ಮಾಡಿಕೊಂಡು ಹೋಗುತ್ತಿರುವಾಗ 'ಥಗ್ ಲೈಫ್' ಮೊದಲ ದಿನವಂತೂ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕೆಲಕ್ಷನ್ ಮಾಡುತ್ತಿತ್ತು ಎಂದು ವಿತರಕರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ, ಮೊದಲ ದಿನ ಈ ಸಿನಿಮಾ ಕರ್ನಾಟಕ ಎಷ್ಟು ಕಲೆಕ್ಷನ್ ಮಾಡಿತ್ತಿತ್ತು? ವಿತರಕರ ಅಭಿಪ್ರಾಯವೇನು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅಹಂನಿಂದ ಕೋಟಿಗಳನ್ನು ಕಳೆದುಕೊಂಡ ಕಮಲ್
ಕಮಲ್ ಹಾಸನ್‌ಗೆ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ ಇರುವ ತಮಿಳು ಭಾಷಿಗರಿಂದಲೇ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಕೋಟಿ ಕಲೆಕ್ಷನ್ ಮಾಡಬಹುದಿತ್ತು. ಆದರೆ, ತಾನೇ ವಿವಾದವನ್ನು ಸೃಷ್ಟಿಸಿ, ಕ್ಷಮೆ ಕೇಳುವುದಕ್ಕೆ ಅವರ ಅಹಂ ಅಡ್ಡ ಬಂದಿದ್ದರಿಂದ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದರು. ಇದರಿಂದ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್‌ಗೆ ಕೋಟಿ ಲೆಕ್ಕದಲ್ಲಿ ನಷ್ಟ ಆಗಿದೆ ಎಂದು ಕರ್ನಾಟಕದಲ್ಲಿ ವಿತರಕರು ಲೆಕ್ಕ ಹಾಕುತ್ತಿದ್ದಾರೆ.
ಕರ್ನಾಟಕ ಬ್ಯುಸಿನೆಸ್ ಎಷ್ಟಾಗಿತ್ತು?
'ಥಗ್ ಲೈಫ್' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಕರ್ನಾಟಕದ ವಿತರಕರು ನಿರ್ಧರಿಸಿದ್ದರು. "ಈ ಸಿನಿಮಾವನ್ನು ಕರ್ನಾಟಕದ ವಿತರಕ ವೆಂಕಟೇಶ್ ಎಂಬುವವರು ಸುಮಾರು 8.10 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಪ್ಲಾನ್ ಮಾಡಿದ್ದರು ಎಂದು ವಿತರಕರ ವಲಯದಲ್ಲಿ ಓಡಾಡುತ್ತಿರುವ ಸುದ್ದಿ. ಕಮಲ್ ವಿವಾದದಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ಈ ಘಟನೆಯಿಂದ ಕರ್ನಾಟಕದ ವಿತರಕರಿಗೆ ಒಳ್ಳೆಯದೇ ಆಯ್ತು. ನಷ್ಟದಿಂದ ಪಾರಾಗಿದ್ದಾರೆ" ಎಂಬ ಅಭಿಪ್ರಾಯವನ್ನು ಹೆಸರು ಹೇಳಲು ಇಚ್ಛಿಸದ ವಿತರಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮೊದಲ ದಿನ ಎಷ್ಟು ಕಲೆಕ್ಷನ್ ಆಗುತ್ತಿತ್ತು?
ಕಮಲ್ ಹಾಸನ್ ವಿವಾದ ಸದ್ಯ ಹೈಕೋರ್ಟ್‌ನಲ್ಲಿದೆ. ಆದರೆ, ಈ ವಿವಾದಗಳು ಇರದೇ ಹೋಗಿದ್ದರೆ, ಕರ್ನಾಟಕದಲ್ಲಿ ಎಷ್ಟು ಬ್ಯುಸಿನೆಸ್ ಮಾಡುತ್ತಿತ್ತು ಎಂದು ಲೆಕ್ಕಾ ಹಾಕಲಾಗಿದೆ. "ಒಂದ್ಮೇಳೆ ಮೊದಲ ದಿನವೇ ಕಮಲ್ ಹಾಸನ್ ಸಿನಿಮಾ ಬ್ಲಾಕ್‌ಬಸ್ಟರ್ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಸುಲಭವಾಗಿ 4 ರಿಂದ 5 ಕೋಟಿ ಕಲೆಕ್ಷನ್ ಆಗುತ್ತಿತ್ತು. ಆದ್ರೀಗ ಫಸ್ಟ್ ಡೇ ರೆಸ್ಪಾನ್ಸ್ ನೆಗೆಟಿವ್ ಇರುವುದರಿಂದ ಕರ್ನಾಟಕದಲ್ಲಿ ₹1.5 ಕೋಟಿಯಿಂದ ₹2 ಕೋಟಿ ಹತ್ತಿರ ಆಗುತ್ತಿತ್ತು. ಇನ್ನುಎರಡನೇ ದಿನದಿಂದ ದೊಡ್ಡ ಮಟ್ಟಕ್ಕೆ ಡ್ರಾಪ್ ಆಗುತ್ತಿತ್ತು" ಎಂದು ವಿತರಕರೊಬ್ಬರು ಲೆಕ್ಕ ಹಾಕಿದ್ದಾರೆ.
ಮುಂದೆ ಬಿಡುಗಡೆಯಾದರೆ ಹೇಗೆ?
ಕಮಲ್ ಹಾಸನ್ ಸಿನಿಮಾ 'ಥಗ್ ಲೈಫ್'ಗೆ ತಮಿಳುನಾಡಿನಲ್ಲಿಯೇ ನಿರಸ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಒಂದು ವಾರ ಬಿಟ್ಟು ಕರ್ನಾಟಕದಲ್ಲಿ 'ಥಗ್ ಲೈಫ್' ರಿಲೀಸ್ ಆದರೆ, ದೊಡ್ಡ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟಕ್ಕೆ ಹೊಡೆತ ಬೀಳುತ್ತೆ. ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗುವುದಿಲ್ಲ. ಯಾಕಂದ್ರೆ, ಈಗಾಗಲೇ ಸಿನಿಮಾ ರಿಪೋರ್ಟ್ ಹೊರಬಿದ್ದಿದ್ದು, ಮುಂದಿನ ದಿನಗಳಲ್ಲಿ ರಿಲೀಸ್ ಆದರೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಚಮತ್ಕಾರ ಆಗುವುದು ಅನುಮಾನ ಎನ್ನಲಾಗುತ್ತಿದೆ.


Click it and Unblock the Notifications











