Su From So Box Office day 48: 50 ದಿನಕ್ಕೆ ಇನ್ನೆರಡು ದಿನ ಬಾಕಿ.. ಓಟಿಟಿಗೆ ಬಂದ್ಮೇಲೆ ಹೇಗಿದೆ ಕಲೆಕ್ಷನ್?
'ಸು ಫ್ರಮ್ ಸೋ' ಎರಡು ದಿನಗಳ ಹಿಂದಷ್ಟೇ ಓಟಿಟಿಗೆ ಲಗ್ಗೆ ಇಟ್ಟಿತ್ತು. ಥಿಯೇಟರ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಸದ ಈ ಸಿನಿಮಾಗೆ ಓಟಿಟಿಯಲ್ಲಿ ಯಾಕೋ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಿಳು ವೀಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿದ್ದರೆ, ತೆಲುಗಿನ ಕೆಲವು ಜನರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಕಮೆಂಟ್‌ಗಳೆಲ್ಲವೂ ಉದ್ದೇಶಪೂರಿತವೋ.. ಇಲ್ಲ ನಿಜಕ್ಕೂ ಇಷ್ಟ ಆಗಿಲ್ಲವೋ ಗೊತ್ತಿಲ್ಲ. ಆದರೆ, ಈ ಬಗ್ಗೆ ಪರ-ವಿರೋಧದ ಚರ್ಚೆಯಂತೂ ಶುರುವಾಗಿದೆ.
ರಾಜ್ ಬಿ ಶೆಟ್ಟಿ ಹಾಗೂ ಅವರ ಸ್ನೇಹಿತರು ಸೇರಿ ನಿರ್ಮಾಣ ಮಾಡಿರುವ 'ಸು ಫ್ರಮ್ ಸೋ' ಬಾಕ್ಸಾಫೀಸ್ ಅನ್ನೇ ಲೂಟಿ ಮಾಡಿತ್ತು. ಸುಮಾರು 44 ದಿನಗಳವರೆಗೂ ಬಾಕ್ಸಾಫೀಸ್‌ನಲ್ಲಿ ಜಬರ್ಧಸ್ತ್ ಆಗಿಯೇ ಇತ್ತು. ಅದ್ಯಾವಾಗ ಓಟಿಟಿಗೆ ಬರೋದು ಫಿಕ್ಸ್ ಆಯ್ತೋ? ಅಲ್ಲಿಂದ ಸಿನಿಮಾದ ಕಲೆಕ್ಷನ್‌ನಲ್ಲಿ ಸ್ವಲ್ಪ ಸ್ವಲ್ಪವೇ ಇಳಿಕೆಯಾಗುತ್ತಾ ಬಂತು. ಆದರೂ, ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ ಅಂತಲೇ ಹೇಳಬಹುದು.

'ಸು ಫ್ರಮ್ ಸೋ' ರಿಲೀಸ್ ಆಗಿ 49ನೇ ದಿನಕ್ಕೆ ಕಾಲಿಟ್ಟಿದೆ. ನಾಳೆ (ಸೆಪ್ಟೆಂಬರ್ 12) ಈ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಈ ಸಂಭ್ರಮದ ಮೂಡ್‌ನಲ್ಲಿ ಚಿತ್ರತಂಡವಿದೆ. ಹಾಗಿದ್ದರೆ, ಈ ಖುಷಿಯ ಸಮಯದಲ್ಲಿ 'ಸು ಫ್ರಮ್ ಸೋ' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ಓಟಿಟಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಮೇಲೆ ಸಿನಿಮಾ ಗಳಿಕೆಯಲ್ಲಿ ಹಿನ್ನೆಲೆ ಆಯ್ತಾ? ತಿಳಿಯುವುದಕ್ಕೆ ಮುಂದೆ ಓದಿ.
48ನೇ ದಿನದ 'ಸು ಫ್ರಮ್ ಸೋ' ಕಲೆಕ್ಷನ್
ರಾಜ್ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಾಗ ಸಿನಿಮಾ ಪ್ರಿಯರು ಥಿಯೇಟರ್‌ಗೆ ನುಗ್ಗಿದ್ದರು. ಅಲ್ಲಿಂದ ಬಾಕ್ಸಾಫೀಸ್ ಲೂಟಿ ಶುರುವಾಗಿದ್ದು ನಾಲ್ಕೈದು ದಿನಗಳವರೆಗೂ ನಡೆಯುತ್ತಲೇ ಇತ್ತು. ಪ್ರತಿ ದಿನ ಕೋಟಿಗಳ ಲೆಕ್ಕದಲ್ಲಿ ಸಿನಿಮಾದ ಕಲೆಕ್ಷನ್ ಆಗಿತ್ತು. ಸ್ಯಾಕ್ನಿಲ್ಕ್ ವರದಿ ಮಾಡಿರುವಂತೆ 'ಸು ಫ್ರಮ್ ಸೋ' 48ನೇ ದಿನ ಮೂರು ಭಾಷೆಗಳಿಂದ 7 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೆರಡು ದಿನಗಳಲ್ಲಿ 125 ಕೋಟಿ ದಾಟುತ್ತಾ ಅನ್ನೋ ಕುತೂಹಲ ಕೆರಳಿಸಿದೆ.
Su From So: ಓಟಿಟಿಗೆ ಲಗ್ಗೆ ಇಡುವುದಕ್ಕೂ ಮುನ್ನ 'ಸು ಫ್ರಮ್ ಸೋ' ಕಲೆಕ್ಷನ್ ಏನು? ಯಾವ್ಯಾವ ಥಿಯೇಟರ್‌ನಲ್ಲೆಷ್ಟು?
48 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಸು ಫ್ರಮ್ ಸೋ' ಕಲೆಕ್ಷನ್ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೈಲೆಂಟ್ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಷು ಕೊಟ್ಟಿದೆ. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕನ್ನಡ ಚಿತ್ರರಂಗ ಮತ್ತೆ ಗೆಲುವಿನ ನಗೆ ಬೀರಿದೆ. ಈ 48 ದಿನಗಳಲ್ಲಿ ಭಾರತದಾದ್ಯಂತ ಸುಮಾರು ₹91.91 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವದಾದ್ಯಂತ ₹122.39 ಕೋಟಿ ಕಲೆಕ್ಷನ್ ಆಗಿದೆ. ಕೇವಲ ಕನ್ನಡದಿಂದ ₹84.03 ಕೋಟಿ ಲೂಟಿ ಮಾಡಿದೆ. ಓಟಿಟಿಗೆ ಲಗ್ಗೆ ಇಟ್ಮೇಲೆ ಸಿನಿಮಾದ ಕಲೆಕ್ಷನ್ ಡ್ರಾಪ್ ಆಗಿದೆ. ಅಲ್ಲದೆ ಸ್ಕ್ರೀನ್‌ಗಳ ಸಂಖ್ಯೆ ಕೂಡ ಕಡಿಮೆ ಇರೋದ್ರಿಂದ ₹125 ಕೋಟಿ ದಾಟುತ್ತಾ ಅನ್ನೋ ಪ್ರಶ್ನೆನೂ ಕಾಡುತ್ತಿದೆ.

₹125 ಕೋಟಿ ಗಡಿ ದಾಟುತ್ತಾ?
ಕನ್ನಡದ ಮತ್ತೊಂದು ಸಿನಿಮಾ 125 ಕೋಟಿ ರೂಪಾಯಿಯ ಗಡಿ ದಾಟುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ, 50 ದಿನಗಳಲ್ಲಿ ಈ ಮೈಲಿಗಲ್ಲನ್ನು ತಲುಪುವುದು ಅನುಮಾನ. ಸದ್ಯ ₹122 ಕೋಟಿ ಗಳಿಸಿರುವ ಸಿನಿಮಾಗೆ ಇನ್ನೂ ಮೂರು ಕೋಟಿ ಬೇಕಿದೆ. ಆದರೆ, ಇನ್ನು ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಕಲೆಕ್ಷನ್ ಆಗುತ್ತೆ ಅನ್ನೋದು ಅನುಮಾನ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











