Maa Inti Bangaram Box office: ಮೊದಲ ದಿನವೇ ಗೆದ್ದ ಸಮಂತಾ; 'ಮಾ ಇಂಟಿ ಬಂಗಾರಂ' ಗಳಿಸಿದ್ದೆಷ್ಟು?
ಬಹಳ ದಿನಗಳ ಬಳಿಕ ಸಮಂತಾ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ನಿರ್ಮಿಸಿ, ನಟಿಸಿರುವ 'ಮಾ ಇಂಟಿ ಬಂಗಾರಂ' ಈ ವಾರ ರಿಲೀಸ್ ಆಗಿದೆ. ಬಹಳ ದಿನಗಳ ಬಳಿಕ ಸಮಂತಾ ಸಿನಿಮಾ ರಿಲೀಸ್ ಆಗಿದ್ದರಿಂದ ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣು ಇದ್ದೇ ಇತ್ತು. ಅಲ್ಲದೇ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರರಂಗದಲ್ಲಿ ಬಜ್ ಕ್ರಿಯೇಟ್ ಆಗಿತ್ತು. ಇದು ಅಡ್ವಾನ್ಸ್ ಬುಕಿಂಗ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವುದಕ್ಕೆ ಸಹಾಯ ಮಾಡಿತ್ತು.
ನಿನ್ನೆ (ಜೂನ್ 19) 'ಮಾ ಇಂಟಿ ಬಂಗಾರಂ' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಈ ಸಿನಿಮಾ ಭಾರತದಾದ್ಯಂತ ಸುಮಾರು 2,658ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ದಿನ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡಿದೆ. ಅಧಿಕೃತ ಅಂಕಿ-ಅಂಶಗಳನ್ನು ಸಮಂತಾ ಸ್ವತ: ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಕಮ್ ಬ್ಯಾಕ್ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಡೀ ಚಿತ್ರತಂಡ ಮೊದಲ ದಿನದ ಕಲೆಕ್ಷನ್ ಅನ್ನು ಸಂಭ್ರಮಿಸಿದೆ. ವೀಕೆಂಡ್‌ನಲ್ಲೂ ಉತ್ತಮ ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಗೂ ಚಿತ್ರತಂಡದ ನೀಡಿದ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೀಗಿದೆ.
ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್
'ಮಾ ಇಂಟಿ ಬಂಗಾರಂ' ಸಮಂತಾ ಕಮ್ ಬ್ಯಾಕ್ ಮಾಡಿದ ಸಿನಿಮಾ. ಪತಿ ರಾಜ್ ನಿಡಿಮೋರು ಕಥೆ ಬರೆದಿದ್ದು, ನಂದಿನಿ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ನೀಡಿದೆ. ಭಾರತದಾದ್ಯಂತ ಈ ಸಿನಿಮಾ 6.20 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದ್ದು, 5.35 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ. ರಾತ್ರಿ ಶೋಗಳಿಗೆ ಶೇ.51.38 ರಷ್ಟು ಆಕ್ಯೂಪೆನ್ಸಿ ಇದೆ.
ಸಮಂತಾ ಲೆಕ್ಕಾಚಾರವೇನು?
ಈ ಸಿನಿಮಾಗೆ ಸಮಂತಾ ನಟಿಸಿದ್ದಷ್ಟೇ ಅಲ್ಲ, ನಿರ್ಮಾಪಕಿ ಕೂಡ ಹೌದು. ಅಲ್ಲದೇ ಪತಿ ರಾಜ್ ನಿಡಿಮೋರು ಕೂಡ ಸಹ ನಿರ್ಮಾಪಕರಾಗಿದ್ದಾರೆ. ಹೀಗಾಗಿ ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆ ಅಧಿಕೃತ ಅಂಕಿ-ಅಂಶಗಳನ್ನು ಹೊರ ಹಾಕಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾದ ಮೊದಲ ದಿನದ ಕಲೆಕ್ಷನ್ ಅನ್ನು ಸಮಂತಾ ಖುದ್ದಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡಂತೆ ವಿಶ್ವದಾದ್ಯಂತ 13.15 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ?
ಸಮಂತಾ 'ಮಾ ಇಂಟಿ ಬಂಗಾರಂ' ಸಿನಿಮಾಗೆ ವಿಶ್ವದಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಭಾರತ ಹಾಗೂ ವಿಶ್ವದ ಹಲವೆಡೆ ಈ ಸಿನಿಮಾ ರಿಲೀಸ್ ಆಗಿತ್ತು. ಸ್ಯಾಕ್ನಿಲ್ಕ್ ಹಂಚಿಕೊಂಡ ಲೆಕ್ಕಾಚಾರದ ಪ್ರಕಾರ 'ಮಾ ಇಂಟಿ ಬಂಗಾರಂ' ವಿಶ್ವದಾದ್ಯಂತ 12.80 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ. ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ. 'ಓ ಬೇಬಿ', 'ಶಾಕುಂತಲಾ' ಸಿನಿಮಾಗಳಿಂತ 'ಮಾ ಇಂಟಿ ಬಂಗಾರಂ' ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ.
ಭಾರತದ ಕಲೆಕ್ಷನ್ - ₹6.20 ಕೋಟಿ (Gross)
ಓವರ್‌ಸೀಸ್ ಕಲೆಕ್ಷನ್- ₹6.60 ಕೋಟಿ (Gross)
ವಿಶ್ವದಾದ್ಯಂತ ಕಲೆಕ್ಷನ್- ₹12.80 ಕೋಟಿ (Gross)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
