"ಮನೆಯಲ್ಲಿ ಒಬ್ಬ ಗಂಡಸು ಇರಬೇಕು, ಹಾಗಿದ್ರೆ ಎದುರಿಸೋಕೆ ಸಾಧ್ಯ ಅನ್ನೋ ಪ್ರಶ್ನೆನೇ ಇಲ್ಲ"; ಸಾನ್ಯಾ ಅಯ್ಯರ್!

ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಬಂದಿದ್ದರು. ಬಳಿಕ ಇಂದ್ರಜಿತ್ ಲಂಕೇಶ್ ತಮ್ಮ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ 'ಗೌರಿ'ಯ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಗಟ್ಟಿಯಾಗಿ ನೆಲೆಯೂರುವ ಎಲ್ಲಾ ಸಾಮರ್ಥ್ಯ ಇದೆ. ಇನ್ನು ಕನ್ನಡದ ಯುವ ನಟರಿಗೆ ಸಾನ್ಯಾ ಅಯ್ಯರ್ ಒಳ್ಳೆಯ ಜೋಡಿಯಾಗಬಲ್ಲರು.

ಕಿರುತೆರೆಯಲ್ಲಿ ಮಿಂಚಿದ ಬಳಿಕ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಗ ರಿಚ್ ಕಿಡ್ ಅಂತ ಅನಿಸುವ ಈಕೆ ಬಾಲ್ಯ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಸಾನ್ಯಾಗಿಂತ ಹೆಚ್ಚಾಗಿ ಅವರ ಅಮ್ಮ ಕಷ್ಟ ಪಟ್ಟಿದ್ದಾರೆ. ಪತಿ ದೂರವಾದ ಮೇಲೆ ಸಾನ್ಯಾ ಅವರ ತಾಯಿ ಮಗಳನ್ನು ಹೇಗೆ ಬೆಳೆಸಿದರು? ಅನ್ನೋದನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

Bigg Boss fame Sanya Iyer talks about her mother struggle and father

ನಟಿ ಸಾನ್ಯಾ ಅಯ್ಯರ್ ಮೂರು ವರ್ಷವಿರುಗಲೇ ಅವರ ತಂದೆ ದೂರವಾದರು. ಅಲ್ಲಿಂದ ಸಾನ್ಯಾ ಅಯ್ಯರ್‌ ಅನ್ನು ಬೆಳೆಸಿದ್ದು ಅವರ ಅಮ್ಮನೇ. ಕಷ್ಟ ಆಗುತ್ತಿದ್ದರೂ, ಮಗಳನ್ನು ಖುಷಿ ಖುಷಿಯಿಂದಲೇ ಬೆಳೆಸಿದ್ದರು ಎನ್ನುವುದನ್ನು ಈ ಸಂದರ್ಶನದಲ್ಲಿ ನೆನೆಪಿಸಿಕೊಂಡಿದ್ದಾರೆ. ಸ್ಕೂಲ್‌ನಲ್ಲಿ ಪೇರೆಂಟ್ಸ್ ಟೀಚರ್ ಮೀಟ್‌ನಲ್ಲಿ ಅಪ್ಪ ಅಮ್ಮ ಒಟ್ಟಿಗೆ ಬಂದರೆ, ಇತ್ತ ತಾಯಿ ಮಾತ್ರ ಬರುತ್ತಿದ್ದರು. ಆಗಲೂ ತನಗೆ ಏನೂ ಅನಿಸಲಿಲ್ಲ ಎಂದಿದ್ದಾರೆ.

ಸೀರೆಯಲ್ಲಿ ಸಾನ್ಯಾ ಅಯ್ಯರ್ ಫೋಟೋಶೂಟ್, 'ಗೌರಿ'ಯ ನೆಕ್ಲೆಸ್ ಮೇಲೆ ಫ್ಯಾನ್ಸ್ ಕಣ್ಣು!
"ನಮ್ಮ ಅಮ್ಮ ಖುಷಿಯಾಗಿದ್ದಾರೆ. ನನಗೆ ಅದಷ್ಟೇ ಸಾಕು. ನನ್ನ ಮುಂದೆ ಖುಷಿಯನ್ನು ವ್ಯಕ್ತಪಡಿಸುವುದಕ್ಕೆ ಆಗುತ್ತಿಲ್ವಾ? ಅಥವಾ ಬೇಜಾರಾಗುತ್ತಿದೆಯಾ? ನನಗೆ ಆಗ ಅರ್ಥ ಆಗುತ್ತಿರಲಿಲ್ಲ. ನನ್ನ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಿದ್ದಾರಾ? ನನಗೆ ಅಷ್ಟೇ ಗೊತ್ತಾಗುತ್ತಿತ್ತು. ಹೆಚ್ಚಾಗಿ ನಾನು ಏನು ಕೆದಕುವುದಕ್ಕೂ ಹೋಗಲಿಲ್ಲ. ನನಗೆ ಏನೂ ಅನಿಸುತ್ತಿರಲಿಲ್ಲ. ಸ್ಕೂಲ್‌ಗೆ ಹೋಗುತ್ತಿರುವಾಗ ಪೆರೇಂಟ್ಸ್ ಟೀಚರ್ ಮೀಟಿಂಗ್‌ನಲ್ಲಿ ಅವರ ಅಪ್ಪ ಅಮ್ಮ ಬರೋರು. ನನಗೆ ಬರೀ ಅಮ್ಮ ಬರೋರು. ಆಗಲೂ ನನಗೆ ಏನೂ ಅನಿಸುತ್ತಿರಲಿಲ್ಲ. ನನ್ನ ಅಮ್ಮನ ಬಗ್ಗೆ ನನಗೆ ಹೆಮ್ಮೆಯಿತ್ತು. ಅವರ ಖುಷಿ ಅಷ್ಟೇ ಬೇಕಾಗಿತ್ತು" ಎನ್ನುತ್ತಾರೆ ಸಾನ್ಯಾ ಅಯ್ಯರ್.

ಇನ್ನು ಅಪ್ಪ ಇಲ್ವಾ? ಅಂತ ಯಾರೇ ಕೇಳಿದರೂ ಇಲ್ಲಾ ಅಂತ ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಸ್ಕೂಲ್‌ನಲ್ಲಿ ಫ್ರೆಂಡ್ಸ್ ಕೇಳಿದರೂ ಅಪ್ಪ ಇಲ್ಲ ಅಷ್ಟೇ. ಅಮ್ಮ ಮಾತ್ರ ಹೀಗೆ ಹೇಳಿಕೊಂಡು ಬಂದಿರೋದು. ನಮ್ಮ ಅಮ್ಮನೂ ನಮ್ಮನ್ನು ಹಾಗೇ ಬೆಳೆಸಿರೋದು. ಅದರಲ್ಲಿ ನಾಚಿಕೆ ಪಡುವಂತಹ ವಿಚಾರವಿಲ್ಲ. ಕಾಲ ಹೇಗೆ ಬದಲಾಗಿದೆ ಅಂದರೆ, ಗಂಡನ ಕೈಯಲ್ಲಿ ಕೂಸಿರಲ್ಲ, ಹೆಂಗಸಿನ ಕೈಯಲ್ಲಿ ಕಾಸಿರಲ್ಲ ಅನ್ನೋತರ ಅಲ್ಲ ಇವಾಗ. ನಮ್ಮ ಮನೆಯಲ್ಲಿ ಎಲ್ಲರೂ ಸ್ವಾವಲಂಬಿಗಳೇ. ಅವರನ್ನು ನೋಡಿಕೊಂಡು ಬೆಳೆದಿದ್ದರಿಂದ, ಮನೆಯಲ್ಲಿ ಒಬ್ಬ ಗಂಡಸು ಇರಬೇಕು. ಹಾಗಿದ್ದರೆ ಮಾತ್ರ ಸಮಾಜವನ್ನು ಎದುರಿಸುವುದಕ್ಕೆ ಆಗೋದು, ಗಂಡಸು ಇಲ್ಲ ಅಂದರೆ ಏನಂತಾರೆ ಅನ್ನೋ ಪ್ರಶ್ನೆನೇ ಇರಲಿಲ್ಲ ನಮ್ಮ ಮನೆಯಲ್ಲಿ." ಎಂದಿದ್ದಾರೆ.

Bigg Boss fame Sanya Iyer talks about her mother struggle and father

ಸಾನ್ಯಾ ಅಯ್ಯರ್ ಅಮ್ಮ ಕೂಡ ಕಿರುತೆರೆಯಲ್ಲಿ ನಟಿಸಿದ್ದಾರೆ. ಹಾಗೇ ಅವರು ಬ್ಯೂಟಿಷಿಯನ್ ಕೂಡ ಆಗಿದ್ದರು. ಈ ದುಡಿಮೆಯಲ್ಲಿಯೇ ಪುಟ್ಟದೊಂದು ಮನೆಯನ್ನು ಕಟ್ಟಿದ್ದರು. "ನಮ್ಮ ನಟಿಯಾಗುವುದಕ್ಕಿಂತ ಮುನ್ನ ಬ್ಯೂಟಿಷಿಯನ್ ಆಗಿದ್ದರು. ಇಸ್ರೋ ಲೇಔಟ್‌ನಲ್ಲಿ ನಮ್ಮವೊಂದು ಪುಟಾಣಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ದಿನಾ ಒಂದೇ ಊಟ ತಿನ್ನುತ್ತಿದ್ದಿದ್ದು. ದಿನಾ ಕಿಚಿಡಿ ಮಾಡೋರು. ಇಲ್ಲ ಚಿತ್ರಾನ್ನ ಮಾಡೋರು. ದುಡ್ಡು ಕೂಡಿ ಹಾಕಿ, ಬ್ಯಾಂಕ್‌ನಿಂದ ಲೋನ್ ತೆಗೆದುಕೊಂಡು ಸ್ವಂತ ಮನೆ ಕಟ್ಟಿಸಿದರು." ಎಂದು ಹೇಳುತ್ತಾರೆ.

ಬಿಗ್‌ಬಾಸ್‌ನಿಂದ ಹೊರ ಬಂದ್ಮೇಲೆ ಅವರ ಮನೆಯ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದನ್ನು ವಿವರಿಸಿದ್ದಾರೆ. "ನಾನು ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ನಮ್ಮ ಅಮ್ಮನ ಪರಿಸ್ಥಿತಿಯನ್ನು ನೋಡಿದೆ. ನಾನು ಮನೆಯೊಳಗೆ ಹೋಗುವುದಕ್ಕಿಂತ ಮುಂಚೆ ಇದ್ದ ಪರಿಸ್ಥಿತಿ ಇದ್ದ ಹಾಗೆ ಇರಲಿಲ್ಲ. ಒಂದಿಷ್ಟು ಘಟನೆಗಳು ನಡೆದ ಮೇಲೂ ಅವರು ನನಗೋಸ್ಕರ ನಿಂತಿದ್ದಾರೆ. ನನಗೋಸ್ಕರ ಸಪೋರ್ಟ್ ಮಾಡುತ್ತಿದ್ದಾರೆ. ಅವರು ಅಷ್ಟು ಸ್ಟ್ರಾಂಗ್ ಲೇಡಿ. ಅವರಿಗೋಸ್ಕರ ಏನಾದರೂ ಮಾಡಲೇಬೇಕು. ಅವರ ಖುಷಿಗೋಸ್ಕರ ನನ್ನ ಮುಂದಿನ ಜೀವನ ಕಳೆಯಬೇಕು ಅಂತ ಆಸೆ ಹುಟ್ಟಿಕೊಳ್ತು." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Bigg Boss fame Sanya Iyer talks about her mother struggle and father;
Read more about: sanya iyer actress bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X