ಕಾರು ಅಪಘಾತದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಸನ್ಯಾಸಿಯಾಗಿದ್ದ ಈ ನಟಿ ಯಾರು ಗೊತ್ತೇ?

90ರ ದಶಕದಲ್ಲಿ ಸೂಪರ್ ಮಾಡಲ್ ಆಗಿದ್ದ ನಟಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಂದಿನ ಸ್ಟಾರ್ ಡೈರೆಕ್ಟರ್ ಮಹೇಶ್ ಭಟ್ ಈ ನಟಿಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ಮೊದಲ ಸಿನಿಮಾವೇ ಮೆಗಾ ಹಿಟ್ ಆಗಿತ್ತು. ಸಿನಿಮಾ ಹಾಡುಗಳಂತೂ ಸಂಗೀತ ಪ್ರಿಯರ ಹುಚ್ಚು ಹಿಡಿಸಿದ್ದವು. ಇದೇ ಸಿನಿಮಾ ಮೂಲಕ ಬಾಲಿವುಡ್ ಹೊಸ ಪ್ರತಿಭೆಗಳು ಸಿಕ್ಕಿದ್ದವು.

ಮಹೇಶ್ ಭಟ್ ನಿರ್ದೇಶಿಸಿದ ಆ ಸೂಪರ್ ಹಿಟ್ ಸಿನಿಮಾವೇ 'ಆಶಿಕಿ'. ಈ ಸಿನಿಮಾ ಮೂಲಕ ಬಾಲಿವುಡ್‌ಗೆ ನಾಯಕನಾಗಿ ರಾಹುಲ್ ರಾಯ್ ಹಾಗೂ ನಾಯಕಿಯಾಗಿ ಅನು ಅಗರ್ವಾಲ್ ಎಂಟ್ರಿ ಕೊಟ್ಟಿದ್ದರು. 'ಆಶಿಕಿ' ಸಿನಿಮಾ ಅನು ಅಗರ್ವಾಲ್ ರಾತ್ರೋ ರಾತ್ರಿ ಸೆನ್ಸೇಷನ್ ಆಗಿದ್ದರು. ಸಿನಿಮಾ ಹಿಟ್ ಆಗುತ್ತಿದ್ದಂತೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು.

Bollywood actress who met with a car accident gone coma lost memory Who is she

ಆದರೆ, ಅನು ಅಗರ್ವಾಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕೇವಲ 6 ವರ್ಷ ಅಷ್ಟೇ. ಆ ಬಳಿಕ ಸಿನಿಮಾದಿಂದ ದೂರವೇ ಉಳಿದು ಬಿಟ್ಟಿರು. ಎರಡು ವರ್ಷ ಕರ್ಮಯೋಗಿಯಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಯೋಗ ಕಲಿತ ಬಳಿಕ ಮುಂಬೈಗೆ ಹಿಂತಿರುಗಿದ್ದರು. 1999ರಲ್ಲಿ ಮುಂಬೈಗೆ ಮರಳಿದ್ದ ನಟಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು.

ಅನು ಅಗರ್ವಾಲ್ ಸುಮಾರು 29 ದಿನಗಳ ಕಾಲ ಕೋಮದಲ್ಲಿ ಇದ್ದರು. ಇವರ ದೇಹಕ್ಕೆ ಗಂಭೀರ ಗಾಯಗಾಗಿದ್ದವು. ಕೋಮದಿಂದ ಮರಳಿದ ಬಳಿಕ ಈಕೆಯ ಬಾಳಲ್ಲಿ ವಿಧಿ ಮತ್ತೊಂದು ಆಟ ಆಡಿತ್ತು. ಈ ಹಿಂದಿನ ಎಲ್ಲಾ ನೆನಪುಗಳನ್ನು ಅನು ಅಗರ್ವಾಲ್ ಕಳೆದುಕೊಂಡಿದ್ದರು. ಈ ನಟಿಗೆ ತನ್ನ ಹಿಂದಿನ ಜೀವನ ಏನೂ ನೆನಪಿರಲಿಲ್ಲ. ತನ್ನ ದೇಹದ ಅರ್ಧ ಭಾಗ ಶಕ್ತಿಯನ್ನೇ ಕಳೆದುಕೊಂಡಿತ್ತು. ಅದರಿಂದ ಹೊರ ಬರುವುದಕ್ಕೆ ವರ್ಷಗಳೇ ಹಿಡಿದಿತ್ತು.

Bollywood actress who met with a car accident gone coma lost memory Who is she

ಇಂತಹ ಭೀಕರ ಅಪಘಾತದಿಂದ ಹೊರ ಬಂದ ಅನು ಅಗರ್ವಾಲ್ ಮುಂಬೈನಲ್ಲೇ ಉಳಿದುಕೊಂಡರು. 2001ರಲ್ಲಿ ಈ ನಟಿ ಸನ್ಯಾಸಿಯಾಗುವುದಕ್ಕೆ ನಿರ್ಧರಿಸಿದ್ದರು. ಮುಂಬೈನಲ್ಲಿ ತೀರ ಸರಳ ಜೀವನ ನಡೆಸುತ್ತಿದ್ದರು. ಸುಮಾರು ಆರು ವರ್ಷಗಳ ಕಾಲ ಯೋಗ ಅಭ್ಯಾಸ ಮಾಡುವುದಕ್ಕೆ ಶುರು ಮಾಡಿದ್ದರು. ತನ್ನನ್ನು ತಾನೇ ಪ್ರೀತಿಸುವುದನ್ನು ಕಲಿತರು. ಹೀಗೆ ಬದುಕು ನಡೆಸುವುದನ್ನು ಕಲಿತರು.

ಅನು ಅಗರ್ವಾಲ್‌ಗೆ ತನ್ನ ಮೊದಲ ಸಿನಿಮಾ 'ಅಶಿಕಿ'ನೇ ನೆನಪು ಇರಲಿಲ್ಲ. ಈ ಸಿನಿಮಾ ರಿಲೀಸ್ ಆದ 20 ವರ್ಷಗಳ ಬಳಿಕ ತೆರೆಕಂಡ 'ಆಶಿಕಿ 2' ಬಗ್ಗೆ ಹೇಳಿದಾಗ '2' ಅಂದರೇನು? ಅಂತ ಪ್ರಶ್ನೆ ಮಾಡಿದ್ದರು. ಅವರಿಗೆ ಸಂಖ್ಯೆಗಳು ಸಹ ಮರೆತು ಹೋಗಿತ್ತು ಅಂತ ಕೆಲವು ವೆಬ್‌ ಸೈಟ್‌ಗಳಲ್ಲಿ ವರದಿ ಮಾಡಿವೆ.

ಇಂದು ಸ್ಟಾರ್ ಪಟ್ಟಕ್ಕೆ ಏರಿರುವ ಮಾಧುರಿ ದೀಕ್ಷಿತ್, ಶ್ರೀದೇವಿ, ಕಾಜಲ್, ಕರೀಶ್ಮಾ ಕಪೂರ್, ರವೀನಾ ಟಂಡನ್ ಇವರೆಲ್ಲರೂ ಅನು ಅಗರ್ವಾಲ್ ಎಂಟ್ರಿ ಕೊಟ್ಟ ಸಮಯದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, 'ಆಶಿಕಿ' ನಟಿಯ ಬದುಕಿನಲ್ಲಿ ವಿಧಿ ಬೇರೆಯದ್ದೇ ಆಟ ಆಡಿತ್ತು. ಸದ್ಯ ಈ ನಟಿಗೀಗ 55 ವರ್ಷ. ಮತ್ತೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಬಂದಿದೆ. ಸ್ಕ್ರಿಪ್ಟ್ ಕೇಳುವುದಕ್ಕೆ ಶುರು ಮಾಡಿರುವುದಾಗಿ ಸಂದರ್ಶನವೊಂದರಲ್ಲಿಯೂ ಹೇಳಿಕೊಂಡಿದ್ದಾರೆ. ಅವಕಾಶ ಸಿಗುತ್ತಾ? ಮತ್ತೆ ಸಿನಿಮಾಗೆ ಬರುತ್ತಾರಾ? ಅನ್ನೋದು ಸದ್ಯಕ್ಕಂತೂ ಕುತೂಹಲ.

More from Filmibeat

English summary
Do you know which Bollywood actress became a monk after memory loss?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X