Amitabh Bachachan: 81ನೇ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಇಷ್ಟೊಂದು ಫಿಟ್ ಹೇಗೆ? ಅವರ ಆಹಾರ ಪದ್ಧತಿ ಹೇಗಿದೆ?

ಬಾಲಿವುಡ್‌ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇಂದು (ಅಕ್ಟೋಬರ್ 11) 81ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಮೇರು ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಅಮಿತಾಭ್ ಅಭಿಮಾನಿಗಳಿಗಂತೂ ಇಂದು ಹಬ್ಬವೇ ಸರಿ.

ವಯಸ್ಸು 81 ಆದರೂ ಯಾವುದೇ ಬಾಲಿವುಡ್‌ ಸೂಪರ್‌ಸ್ಟಾರ್‌ಗೂ ಕಮ್ಮಿಯಿಲ್ಲ. ಬಾಲಿವುಡ್‌ನಲ್ಲಿ ಜನಪ್ರಿಯರಾಗಿರುವ ಸ್ಟಾರ್‌ಗಳಿಗೆಲ್ಲ ಬಿಗ್ ಬಿನೇ ಮಾದರಿ. ನಟನೆಯಲ್ಲೂ ಅಮಿತಾಭ್ ಕಿಂಗ್, ಫಿಟ್ನೆಸ್‌ನಲ್ಲೂ ಕಿಂಗ್. ಈ ವಯಸ್ಸಿನಲ್ಲೂ ಬಿಗ್ ಬಿ ಇಷ್ಟೊಂದು ಫಿಟ್ ಹೇಗೆ? ಅಂತ ಆಶ್ಚರ್ಯ ಸೂಚಿಸಿದ್ದಾರೆ.

amitabh-food-habits-and-workouts

ಈ ಇಳಿ ವಯಸ್ಸಿನಲ್ಲೂ ಬಿಗ್ ಉತ್ಸಾಹದಲ್ಲೇನು ಕಮ್ಮಿಯಾಗಿಲ್ಲ. ಫಿಟ್ನೆಸ್, ಎನರ್ಜಿ ಎಲ್ಲವೂ ಹೈ ಇದೆ. ಹಾಗೇ ಇಂದಿನ ಯುವಕರಂತೆ ಅಮಿತಾಭ್ ಬಚ್ಚನ್ ತಂತ್ರಜ್ಞಾನ ಬಳಕೆಯಲ್ಲೂ ಹಿಂದೆ ಉಳಿದಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಈ ಎಲ್ಲಾ ಕಾರಣಕ್ಕೆ 81ರಲ್ಲೂ ಬಿಗ್ ಬಿ ಫಿಟ್ ಆಗಿರೋದೇಗೆ? ಇವರ ಆಹಾರ ಪದ್ಧತಿ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

81ರ ಹರೆಯದಲ್ಲೂ ಬಿಗ್ ಬಿ ಫಿಟ್ ಹೇಗೆ?

'ಕೂಲಿ' ಸಿನಿಮಾದ ವೇಳೆ ಆದ ಅಪಘಾತದಿಂದ ಅಮಿತಾಭ್ ಬಚ್ಚನ್ ಬದುಕಿ ಬಂದಿದ್ದೇ ಪವಾಡ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅಲ್ಲಿಂದ ಇಲ್ಲಿವರೆಗೂ ಅಮಿತಾಭ್ ಶಿಸ್ತಿನ ಜೀವನವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಸಿಗರೇಟ್, ಮಧ್ಯಪಾನ ಯಾವುದೂ ಇಲ್ಲ. ವರ್ಕ್‌ಔಟ್ ಅನ್ನು ತಪ್ಪಿಸುವುದಿಲ್ಲ. ಆಹಾರ ಸೇವನೆಯಲ್ಲೂ ಅಷ್ಟೇ ಅಟ್ಟು ನಿಟ್ಟು. ಈ ಕಾರಣಕ್ಕೆ ಅಮಿತಾಭ್ ಬಚ್ಚನ್ 81ರಲ್ಲೂ ಫುಲ್ ಆಕ್ಟೀವ್ ಆಗಿದ್ದಾರೆ.

ಬಿಗ್ ಬಿ ಸೇವಿಸುವ ಆಹಾರ ಪದಾರ್ಥಗಳೇನೇನು?

ಅಮಿತಾಭ್ ಬಚ್ಚನ್ ಆಹಾರದಲ್ಲಿ ಕಟ್ಟು ನಿಟ್ಟು. ಬಿಗ್ ಬಿ ಬೆಳಗಿನ ಉಪಹಾರಕ್ಕೆ ಸಾಮಾನ್ಯವಾಗಿ ಎಗ್‌ ಬುರ್ಜಿ ಹಾಗೂ ಹಾಲನ್ನು ಸೇವನೆ ಮಾಡುತ್ತಾರೆ. ಹಾಗೇ ಉತ್ತರ ಪ್ರದೇಶದವರಾಗಿದ್ದರಿಂದ ಅಲ್ಲಿನ ಜನಪ್ರಿಯ ತಿನಿಸು 'ಲಾಪ್ಸಿ' ಇವರ ಅಚ್ಚು ಮೆಚ್ಚು. ಗೋಧಿಯಿಂದ ಮಾಡಿದ ದಾಲಿಯ, ತುಪ್ಪ ಹಾಗೂ ಹಾಲು ಅಥವಾ ನೀರನ್ನು ಸೇವನೆ ಮಾಡುತ್ತಾರೆ. ಬೆಳಗಿನ ಉಪಹಾರದ ಮುಗಿಸಿದ ಕೆಲವು ಗಂಟೆಗಳ ಬಳಿಕ ಎಳನೀರು, ನಲ್ಲಿಕಾಯಿ ಜ್ಯೂಸ್, ಬಾಳೆ ಹಣ್ಣು, ತುಳಸಿ ಎಲೆ, ಬಾದಾಮಿಯನ್ನು ತಿನ್ನುತ್ತಾರೆ ಎಂದು ವರದಿಯಾಗಿದೆ.

amitabh-food-habits-and-workouts

ಮಧ್ಯಾಹ್ನ, ರಾತ್ರಿ ಊಟಕ್ಕೆ ಏನು?

ಅಮಿತಾಭ್ ಬಚ್ಚನ್ ಮಧ್ಯಾಹ್ನದ ಊಟಕ್ಕೆ ಮನೆಯಲ್ಲೇ ಮಾಡಿದ ರೋಟಿ, ದಾಲ್ ಹಾಗೂ ತರಕಾರಿ ಪಲ್ಯವನ್ನು ಸೇವನೆ ಮಾಡುತ್ತಾರೆ. ಸಂಜೆ ಹೊತ್ತಿಗೆ ಚಾಟ್ ತಿನ್ನಲು ಇಷ್ಟ ಪಡುತ್ತಾರೆ. ದೆಹಲಿಯ ಬೆಂಗಾಲಿ ಮಾರ್ಕೇಟ್‌ನಿಂದ ವಿಶೇಷವಾದ ಚಾಟ್ಸ್ ತರಿಸಿಕೊಂಡು ತಿನ್ನುತ್ತಾರೆ. ಇನ್ನೂ ರಾತ್ರಿ ಊಟಕ್ಕೆ ಸೂಪ್ ಹಾಗೂ ಪನ್ನೀರ್ ಬುರ್ಜಿಯನ್ನು ಸೇವಿಸುತ್ತಾರೆ. ಮಧ್ಯಪಾನ, ಕಾಫಿ, ಟೀ ಹಾಗೂ ಪೆಪ್ಸಿ, ಕೋಕ್ ಅಂತಹ ಪಾನೀಯಗಳನ್ನು ಸೇವಿಸುವುದಿಲ್ಲ.

ಪ್ರತಿದಿನದ ವರ್ಕ್‌ಔಟ್ ಏನು?

ಈಗಾಗಲೇ ಆಗಿರುವ ವರದಿಗಳ ಪ್ರಕಾರ, ಅಮಿತಾಭ್ ಬಚ್ಚನ್ ಪ್ರತಿದಿನ ತಪ್ಪಿಸದೆ ಜಿಮ್‌ಗೆ ಹೋಗುತ್ತಾರೆ. ಅದಕ್ಕೂ ಮುನ್ನ 20 ನಿಮಿಷಗಳ ಕಾಲ ವಾಕ್ ಮಾಡುತ್ತಾರೆ. ಈ ಮೂಲಕ ಅಮಿತಾಭ್ ಬಚ್ಚನ್ ರಕ್ತ ಚಲನೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಂತೆ ನೋಡಿಕೊಂಡಿದ್ದಾರೆ. ಹಾಗೇ ಎನರ್ಜಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯೋಗ ಮಾಡುತ್ತಾರೆ. ಇದರೊಂದಿಗೆ ನಿದ್ದೆಯನ್ನು ಮಾಡುವುದಕ್ಕೆ ಹಿಂದೇಟು ಹಾಕುವುದಿಲ್ಲ.

More from Filmibeat

English summary
Bollywood Mega Star Amitabh Bachachan 7 food habits at the age of 81
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X