"ನಮ್ಮಲ್ಲಿ ಕಮಲ್ ಹಾಸನ್ ತರ ಒಬ್ಬರು ಹುಟ್ಟಿಲ್ಲ"; ಕಿಚ್ಚ ಸುದೀಪ್ 'ಸ್ವಾತಿ ಮುತ್ತು' ಮಾಡೋಕೆ ಇದೇ ಕಾರಣ?

ಕಿಚ್ಚ ಸುದೀಪ್‌ಗೆ 'ಸ್ವಾತಿ ಮುತ್ತು' ಸಿನಿಮಾ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಕಿಚ್ಚನ ನಟನೆಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಾಣದೇ ಹೋದರೂ, ಸುದೀಪ್ ನಟನೆಯನ್ನು ಮೆಚ್ಚಿಕೊಂಡಿದ್ದರು. ಕಮಲ್‌ ಹಾಸನ್ ನಟಿಸಿದ ಸಿನಿಮಾದ ಚಾರ್ಮ್ ಅನ್ನು ಹಾಗೆ ಉಳಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿತ್ತು. ಇದೇ ಸಿನಿಮಾದ ನಟನೆಗಾಗಿ ಕಿಚ್ಚ ಸುದೀಪ್‌ಗೆ ಫಿಲ್ಮ್‌ ಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿತ್ತು.ಬಹುಭಾಷಾ ನಟ ಕಮಲ್ ಹಾಸನ್ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ. ಇವರು ನಟಿಸಿದ ಅದೆಷ್ಟೋ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿದೆ. ಆದರೆ, ಕಮಲ್ ಹಾಸನ್‌ ಲೆವೆಲ್‌ಗೆ ಹೋಗಿ ನಟಿಸುವುದು ತುಂಬಾನೇ ಕಷ್ಟ. ಇಂತಹ ಪ್ರಯತ್ನಕ್ಕೆ ಕೈ ಹಾಕುವುದಕ್ಕೆ ಬಹಳಷ್ಟು ಮಂದಿ ಸ್ಟಾರ್ ನಟರು ಹಿಂದೇಟು ಹಾಕುತ್ತಾರೆ. ಅಂತಹದ್ರಲ್ಲಿ ಧೈರ್ಯ ತೋರಿದ್ದು ಕಿಚ್ಚ ಸುದೀಪ್.

ಕಮಲ್ ಹಾಸನ್ ನಟಿಸಿದ 'ಸ್ವಾತಿ ಮುತ್ಯಂ' ಎನ್ನುವ ಸಿನಿಮಾವನ್ನು ಕಿಚ್ಚ ಸುದೀಪ್ ರಿಮೇಕ್ ಮಾಡುವುದಕ್ಕೆ ಮುಂದಾಗಿದ್ದರು. ಅದಕ್ಕೆ ಕಾರಣ ಸ್ನೇಹಿತರು, ನಿರ್ಮಾಪಕರು ಆಡಿದ ಒಂದು ಮಾತು. ಸುದೀಪ್ ಹೀಗೊಮ್ಮೆ ಕನ್ನಡ ಚಿತ್ರರಂಗದ ನಿರ್ಮಾಪಕರು, ಸ್ನೇಹಿತರೊಂದಿಗೆ ಇದ್ದಾಗ, ಕಮಲ್ ಹಾಸನ್ ತರ ನಮ್ಮಲ್ಲಿ ಯಾವ ನಟರೂ ಹುಟ್ಟಿಲ್ಲ ಎಂದಿದ್ದರು. ಅದು ಕಿಚ್ಚ ಸುದೀಪ್ ಅನ್ನು ರೊಚ್ಚಿಗೆಬ್ಬಿಸಿತ್ತು.

Kichcha Sudeep did Kamal Haasan remake Swathi Muthu Movie Just because of one sarcastic word

ಹೌದು, ಕಿಚ್ಚ ಸುದೀಪ್ ಮೆಟ್ರೋ ಸಾಗಾ ವ್ಲಾಗ್ಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸ್ವಾತಿ ಮುತ್ತು ಸಿನಿಮಾಗೆ ಶುರುವಾಗಿದ್ದು ಹೇಗೆ? ಅಂದು ಆತ್ಮೀಯರು ಆಡಿದ ಒಂದು ಮಾತು 'ಸ್ವಾತಿ ಮುತ್ತು' ಸಿನಿಮಾ ನಿರ್ಮಾಣ ಮಾಡುವುದಕ್ಕೆ ಹೇಗೆ ಕಾರಣವಾಯ್ತು? ಆರಂಭದಲ್ಲಿ ಈ ಸಿನಿಮಾದಲ್ಲಿ ನಟಿಸೋದು ಬೇಡ ಅಂತ ಯಾಕೆ ನಿರ್ಧರಿಸಿದ್ದರು? ಮತ್ತೆ ಸಿನಿಮಾ ಮಾಡುವುದಕ್ಕೆ ಕಾರಣವಾಗಿದ್ದು ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕಮಲ್ ಹಾಸನ್ ನಟಿಸಿದ 'ಸ್ವಾಮಿ ಮುತ್ಯಂ' ಭಾರತೀಯ ಚಿತ್ರರಂಗ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು. ಕೆ.ವಿಶ್ವನಾಥ್ ಅಂತಹ ದಿಗ್ಗಹರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಪಾತ್ರದಲ್ಲಿ ಕಮಲ್ ನಟಿಸಿದ್ದರು. ಆ ಸಿನಿಮಾವನ್ನು ಕಿಚ್ಚ ಸುದೀಪ್ ಅಷ್ಟೇ ಸೊಗಸಾಗಿ ಮಾಡಿ ಗೆದ್ದಿದ್ದರು. ಆದರೆ, ಈ ಸಿನಿಮಾ ಶುರುವಾಗಿದ್ದು ಒಂದೇ ಒಂದು ಮಾತಿನಿಂದ. ಅದನ್ನು ಕಿಚ್ಚ ನೆನಪಿಸಿಕೊಂಡಿದ್ದಾರೆ.

Kichcha Sudeep did Kamal Haasan remake Swathi Muthu Movie Just because of one sarcastic word

"ಸ್ವಾತಿಮುತ್ತು ಹೇಗಾಯ್ತು ಅಂದರೆ, ನಾವೆಲ್ಲ ಒಂದು ಕಡೆ ಸೇರಿದ್ವಿ. ಸ್ನೇಹಿತರು, ನಿರ್ಮಾಪಕರು ಎಲ್ಲಾ ಕೂತಿರಬೇಕಾದರೆ ಕಮಲ್ ಹಾಸನ್ ಅವರ ಟಾಪಿಕ್ ಬರುತ್ತೆ. ಅವರು ಹೊಗಳಿದಾಗ ಖುಷಿ ಆಗುತ್ತೆ. ನಾವು ಯಾರ ಬಗ್ಗೆ ಮಾತಾಡುತ್ತಿದ್ದೇವೆ. ನಾಯಗನ್ ಆ ಎಲ್ಲಾ ಸಿನಿಮಾಗಳ ಬಗ್ಗೆನೂ ಮಾತುಕತೆ ಆಗ್ತಿತ್ತು. ಆಗ ನಮ್ಮಲ್ಲಿ ಒಬ್ಬರೂ ಹುಟ್ಟಿಲ್ಲ ಅಂತ ಒಂದು ಲೈನ್ ಬಂದ್ಬಿಡ್ತು. ಆತರ ಸಿನಿಮಾ ಮಾಡೋರು ಯಾರೂ ಇಲ್ಲ ಅಂತ ಬಂತು. ಹಾಗೆಲ್ಲ ಹೇಳಬೇಡಿ, ನಮ್ಮಲ್ಲೂ ಇದ್ದಾರೆ. ನೀವ್ಯಾಕೆ ಹಾಗೆ ಕಥೆಗಳನ್ನು ಬರೆಯುವುದಿಲ್ಲ. ಈಗ ಅಲ್ಲಿ ಬರೆದಿರಲಿಲ್ಲ ಅಂದರೆ, ಅವರು ಮಾಡುತ್ತಿದ್ದರೇ? ಬರೀರಿ ಆಮೇಲೆ ಮಾತಾಡಿ ಅಂದಾಗ, ಬರೆದರೆ ಯಾರು ಮಾಡುತ್ತಾರೆ ಅಂತ ಶುರುವಾಯ್ತು. ನೀವು ಮಾಡುತ್ತೀರಾ? ನಿಮ್ಮ ಕೈಯಲ್ಲಿ ಆಗುತ್ತಾ ಅಂತ ಮಾತಾಡಿದರು" ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹಾಗಂತ ಅವರೇನು ನೋವು ಮಾಡಬೇಕು ಅಂತ ಮಾತಾಡಿರಲಿಲ್ಲ. ಹೀಗೆ ಮಾತಿಗೆ ಅಂತ ಕೂತಾಗ ಇಂತಹ ಮಾತುಗಳು ಬಂದಿದ್ದವು. ಕಿಚ್ಚ ಸುದೀಪ್ ನಾನು ಅಂತಹ ಸಿನಿಮಾ ಮಾಡುತ್ತೇನೆ ಹೇಳಿದ್ದರು. ಆಗ ನಾವು ಆಯ್ಕೆ ಮಾಡಿದ್ದನ್ನು ಮಾಡಿ ಅಂತ ಸವಾಲು ಹಾಕಿದ್ದರು. "ಸಾಗರ ಸಂಗಮ ಮಾಡಿ ಅಂದರು. ಸುಮ್ಮನೆ ಮಾತಾಡಬೇಡಿ. ಅವರು ಚಿಕ್ಕ ವಯಸ್ಸಿನಿಂದ ಡ್ಯಾನ್ಸ್ ಮಾಡಿಕೊಂಡು ಬಂದಿದ್ದಾರೆ. ಎಷ್ಟೋ ವರ್ಷದಿಂದ ಮಾಡಿದ್ದಾರೆ. ನೀವು ಇವತ್ತು ಹೇಳಿ ನಾಳೆ ಮಾಡು ಅಂದರೆ, ಅಷ್ಟು ಸುಲಭನಾ? ಅಂದಾಗ ಆಗ ಸ್ವಾತಿ ಮುತ್ತು ಬಂತು. ಈ ಸಿನಿಮಾ ಮಾಡುತ್ತೇನೆ ಅಂದೆ." ಎಂದು ಕಿಚ್ಚ ಸುದೀಪ್ ಮೆಟ್ರೋಸಾಗ ವ್ಲಾಗ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

ಇಂತಹ ಪ್ರಯೋಗಾತ್ಮಕ ಸಿನಿಮಾಗಳು ಓಡುವುದು ಕಡಿಮೆ. ಅದಕ್ಕೆ ಕಿಚ್ಚ ಸುದೀಪ್ ತನ್ನದೇ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. "ಯಾರದ್ದೋ ಸಿನಿಮಾ ತಂಡ ದುಡ್ಡು ಹೋಯ್ತು. ಸಿನಿಮಾ ಓಡಲಿಲ್ಲ ಅಂತೆಲ್ಲ ಹೇಳುವುದು ಬೇಡ. ದುಡ್ಡು ಹೋದರೆ ಹೋಗಲಿ ಬಿಡಿ. ಅಂದ್ಕೊಂಡು ಶುರು ಮಾಡಿದೆ. ನಮ್ಮ ತಂದೆಯೊಂದಿಗೆ ಚರ್ಚೆ ಮಾಡಿ ಮಾಡಿದೆ. ಅದು ಸರೋವರ್ ಪ್ರೊಡಕ್ಷನ್‌ನದ್ದು ಕೊನೆಯ ಸಿನಿಮಾ." ಎಂದಿದ್ದಾರೆ.

ಇಲ್ಲಿಂದ ಅಸಲಿ ಸವಾಲು ಎದುರಾಗಿತ್ತು. ಕಿಚ್ಚ ಸುದೀಪ್ ಜೋಷ್‌ನಲ್ಲಿ ಸಿನಿಮಾ ಮಾಡುತ್ತೇನೆ ಎಂದು ಸವಾಲು ಹಾಕಿ ಶುರು ಮಾಡಿದ್ದರು. ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಆದರೆ, ನಾಲ್ಕೈದು ದಿನ ಶೂಟಿಂಗ್ ಶುರುವಾಗಿತ್ತಷ್ಟೇ. ಕಿಚ್ಚ ಸುದೀಪ್‌ಗೆ ಇದ್ಯಾಕೋ ಆಗುತ್ತಿಲ್ಲ. ಶೂಟಿಂಗ್ ಇಲ್ಲಿಗೆ ನಿಲ್ಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು.

"ಮೊದಲ ನಾಲ್ಕೈದು ದಿನ ನನಗೆ ಕ್ಯಾರೆಕ್ಟರ್ ಗ್ರಿಪ್ ಬರುತ್ತಿಲ್ಲ. ಚಿಕ್ಕ ಚಿಕ್ಕ ಸೀನ್ ಮಾಡುತ್ತಿದ್ವಿ. ಆಗ ಡೈರೆಕ್ಟರ್ ಅವರನ್ನು ಕರೆದು, ಸರ್ ಯಾಕೋ ನಾನು ಅಂದ್ಕೊಂಡು ಸಿನಿಮಾ ಮಾಡುವುದಕ್ಕೆ ಆಗುತ್ತೆ ಅಂತ. ಆದರೆ, ಯಾಕೋ ಮಾಡುವುದಕ್ಕೆ ಆಗುತ್ತಿಲ್ಲ. ಕ್ಯಾರೆಕ್ಟರ್ ಗ್ರಿಪ್ ಸಿಗುತ್ತಿಲ್ಲ. ಆಗ ನಿರ್ದೇಶಕರು ಮಾಡುತ್ತಿದ್ದೀರಿ. ಚೆನ್ನಾಗಿದೆಯಲ್ಲ ಶಾಟ್ಸ್ ಅಂದರು. ನನಗೆ ಒಳಗಿಂದ ಫೀಲ್ ಆಗುತ್ತಿಲ್ಲ. ಆಕ್ಟ್ ಮಾಡುತ್ತಿದ್ದೇನೆ ಅಂತ ಅನಿಸುತ್ತಿದೆ. ಬಿಟ್ಟು ಬಿಡೋಣ. ಈ ಸಿನಿಮಾವನ್ನು ನಿಲ್ಲಿಸಿ ಬಿಡೋಣ. ಈ ಸಿನಿಮಾ ಆಗುತ್ತಿಲ್ಲ ಅಂದೆ." ಸ್ವಾತಿ ಮುತ್ತು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.

ಕಿಚ್ಚನ ಈ ಮಾತನ್ನು ಹೇಳಿದ ಕೂಡಲೇ ಡಿ.ರಾಜೇಂದ್ರ ಬಾಬು ಹುರಿದುಂಬಿಸುವ ಪ್ರಯತ್ನ ಮಾಡಿದ್ದರು. " ಇಲ್ಲ ಸುದೀಪ್ ನೀವು ಟೈಮ್ ತಗೊಳ್ಳಿ. ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡುತ್ತಿದ್ದೀರ ಅಂತ ರಾಜೇಂದ್ರ ಬಾಬು ಅವರು ನನಗೆ ಪ್ರೋತ್ಸಾಹ ಕೊಟ್ಟು ಮನೆಗೆ ಕಳುಹಿಸಿದ್ದರು." ಎನ್ನುತ್ತಾರೆ ಕಿಚ್ಚ ಸುದೀಪ್.

ಕಿಚ್ಚ ಸುದೀಪ್‌ಗೆ ಯಾಕೋ ಸರಿ ಹೋಗುತ್ತಿಲ್ಲ ಅಂತ ಅನಿಸಿತ್ತು. ಅಂದುಕೊಂಡಂತೆ ತನ್ನ ಪಾತ್ರ ಬರುತ್ತಿಲ್ಲ ಅಂತ ಅನಿಸಿತ್ತು. ಅಷ್ಟೊತ್ತಿಗೆ ಕಿಚ್ಚ ಸುದೀಪ್ ಕಣ್ಣಿಗೆ ಅವರ ಅಕ್ಕನ ಮಗ ಬಿದ್ದಿದ್ದರು. ಅಲ್ಲಿಂದ ಕಿಚ್ಚ ಸುದೀಪ್ ಪಾತ್ರಕ್ಕೆ ಮ್ಯಾನರಿಸಂ ಸಿಕ್ಕಿಬಿಟ್ಟಿತ್ತು.

"ತಲೆ ಕೆಡಿಸಿಕೊಂಡು ಸುಮ್ಮನೆ ಕೂತಿರುವಾಗ ನಮ್ಮ ಅಕ್ಕನ ಮಗ ಸಂಚಿತ್ ನೋಡಿದೆ. ಚಿಕ್ಕ ಹುಡುಗ. ಅವನದ್ದು ಒಂದು ಬಿಹೇವಿಯರ್ ಇತ್ತು. ಕೋಪ ಮಾಡಿಕೊಂಡರೆ, ತಳ್ಳೋದು ಎಲ್ಲಾ ಮಾಡುತ್ತಿದ್ದ. ಅದಿತ್ತು ತಲೆಯಲ್ಲಿ. ಅದು ಅಟೋಮ್ಯಾಟಿಕ್ ಆಗಿ ತಲೆಯೊಳಗೆ ಹೋಗಿದೆ. ಒಂದು ಸಾಂಗ್ ಬಂದರೂ ಹಾಗೇ ಆಕ್ಟ್ ಮಾಡುತ್ತಿದ್ದೆ. ಅದು ಬಂದ್ಬಿಡ್ತಿತ್ತು. ಎಫರ್ಟ್ ಹೇಗಿರುತ್ತೆ ಅಂದರೆ, ನಾನು ಶಾಟ್‌ನಲ್ಲಿ ಇಲ್ಲದೆ ಇದ್ದರೂ ನಾನು ಯಾರೊಂದಿಗೂ ಮಾತಾಡುತ್ತಿರಲಿಲ್ಲ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಕಿಚ್ಚ ಸುದೀಪ್‌ಗೆ 'ಸ್ವಾತಿ ಮುತ್ತು' ಸಿನಿಮಾ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಕಿಚ್ಚನ ನಟನೆಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಾಣದೇ ಹೋದರೂ, ಸುದೀಪ್ ನಟನೆಯನ್ನು ಮೆಚ್ಚಿಕೊಂಡಿದ್ದರು. ಕಮಲ್‌ ಹಾಸನ್ ನಟಿಸಿದ ಸಿನಿಮಾದ ಚಾರ್ಮ್ ಅನ್ನು ಹಾಗೆ ಉಳಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿತ್ತು. ಇದೇ ಸಿನಿಮಾದ ನಟನೆಗಾಗಿ ಕಿಚ್ಚ ಸುದೀಪ್‌ಗೆ ಫಿಲ್ಮ್‌ ಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿತ್ತು.

More from Filmibeat

English summary
Kichcha Sudeep did Kamal Haasan's remake Swathi Muthu Movie Just because of one sarcastic word.
Read more about: sudeep kamal haasan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X