"ಸುಳ್ಳು ಸುಳ್ಳು ಸುಳ್ಳು.. ರಾಜ್‌ಕುಮಾರ್-ಶಂಕರ್‌ನಾಗ್ ಸಂಬಂಧ ಹೇಗಿತ್ತು ಗೊತ್ತೇ"; ಹಿರಿಯ ನಟಿ ಸುಂದರಶ್ರೀ ಗುಬ್ಬಿ
ಕನ್ನಡ ಚಿತ್ರರಂಗ ಕಂಡ ಇಬ್ಬರು ಲೆಜೆಂಡ್‌ಗಳು ಡಾ.ರಾಜ್‌ಕುಮಾರ್ ಹಾಗೂ ಶಂಕರ್‌ನಾಗ್. ಈ ಜೋಡಿಯ ಒಟ್ಟಿಗೆ ಕೆಲಸ ಮಾಡಿದ್ದ 'ಒಂದು ಮುತ್ತಿನ ಕಥೆ' ಇಂದಿಗೂ ಸಿನಿಪ್ರೇಮಿಗಳ ಫೇವರಿಟ್. ಅಣ್ಣಾವ್ರ ನಟನೆ, ಶಂಕರ್‌ನಾಗ್ ನಿರ್ದೇಶನ ಎವರ್‌ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರಿಸಿಬಿಟ್ಟಿತ್ತು. ಅಂದು ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡದೇ ಹೋದರೂ, ಹಲವು ವರ್ಷ ನೆನೆಪಿನಲ್ಲಿ ಉಳಿಯುವಂತಹ ಸಿನಿಮಾ ಆಯ್ತು.
ಇಬ್ಬರೂ ದಿಗ್ಗಜರು ಕೂಡ ಸಿನಿಮಾ ಮಾಡಿದರೂ, ಗಾಸಿಪ್‌ಗಳಿಗೇನು ಕಮ್ಮಿಯಿಲ್ಲ. ಅಣ್ಣಾವ್ರು ಹಾಗೂ ಶಂಕರಣ್ಣನ ಮಧ್ಯೆ ಪ್ರೊಫೆಷನಲ್ ಜಲಸ್ಸಿ ಇತ್ತು ಅನ್ನೋ ಮಾತುಕೇಳಿ ಬಂದಿತ್ತು. ಇವರಿಬ್ಬರ ಬಗ್ಗೆ ನೂರಾರು ಗಾಸಿಪ್‌ಗಳು ಓಡಾಡಿದ್ದವು. ಅಂದಿನಿಂದ ಇಂದಿನವರೆಗೂ ಯಾರು ಅದೆಷ್ಟೇ ಸ್ಪಷ್ಟತೆ ಕೊಟ್ಟರೂ, ಜನಮಾನಸದಲ್ಲಿ ಇನ್ನೂ ಹಾಗೆಯೇ ಉಳಿದು ಬಿಟ್ಟಿದೆ.

ರಾಜ್‌ಕುಮಾರ್ ಹಾಗೂ ಶಂಕರ್ ನಾಗ್ ಇಬ್ಬರನ್ನೂ ಹತ್ತಿರದಿಂದ ನೋಡಿ ಹಿರಿಯ ನಟಿ ಸುಂದರಶ್ರೀ ಗುಬ್ಬಿ ಈ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನ್ಯೂಸ್ ಹಂಟ್ ಕರ್ನಾಟಕ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ದಿಗ್ಗಜರ ನಡುವಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಏನು? ಹೇಳಿದ್ದಾರೆ ತಿಳಿಯಲು ಮುಂದೆ ಓದಿ.
"ಸುಳ್ಳು ಸುಳ್ಳು ಸುಳ್ಳು"
ಡಾ.ರಾಜ್‌ಕುಮಾರ್ ಹಾಗೂ ಶಂಕರ್‌ನಾಗ್ ನಡುವೆ ಸಂಬಂಧದ ಬಗ್ಗೆ ಹರಿದಾಡಿದ ಸುದ್ದಿಗಳೆಲ್ಲವೂ ಸುಳ್ಳು ಎಂದಿದ್ದಾರೆ. ಇಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಗೌರವ ಇಟ್ಟುಕೊಂಡಿದ್ದರು ಎನ್ನುತ್ತಾರೆ. "ಸುಳ್ಳು ಸುಳ್ಳು ಸುಳ್ಳು.. ರಾಜ್‌ಕುಮಾರ್ ಅವರು ಶಂಕರನ್ನ ಎಷ್ಟು ಇಷ್ಟ ಪಡುತ್ತಿದ್ದರು ಗೊತ್ತೇ. ಒಂದು ಮುತ್ತಿನ ಕಥೆ ಮಾಡಿದ್ದಾರಲ್ಲಪ್ಪ. ರಾಜ್‌ಕುಮಾರ್ ಅವರಿಗೆ ಶಂಕರ್‌ನಾಗ್ ಮೇಲೆ ತುಂಬಾನೇ ಗೌರವವಿತ್ತು. ಹಾಗೇ ಶಂಕರ್‌ನಾಗ್ ಅವರಿಗೂ ಅಷ್ಟೇ ರಾಜ್‌ಕುಮಾರ್ ಅಂದರೆ, ತುಂಬಾನೇ ಗೌರವವಿತ್ತು." ಎಂದಿದ್ದಾರೆ.
"ತಲೆ ಇಲ್ಲದವರು ಮಾತಾಡೋದಷ್ಟೇ"
ಕನ್ನಡ ಚಿತ್ರರಂಗದ ಇಬ್ಬರು ಲೆಜೆಂಡ್‌ಗಳ ಬಗ್ಗೆ ತಲೆ ಇಲ್ಲದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. "ಆ ಎಲ್ಲಾ ಗಾಸಿಪ್‌ಗಳೂ ಸುಳ್ಳು. ಅವರೆಲ್ಲ ತಲೆ ಇಲ್ಲದವರು ಮಾತಾಡೋದಷ್ಟೇ. ಯಾಕಂದ್ರೆ, ನಾನು ಒಂದು ಮುತ್ತಿನ ಕಥೆಗೆ ಕಾಸ್ಟ್ಯೂಮ್ ಮಾಡಬೇಕಿತ್ತು. ನನ್ನ ಮಗಳು ಚಿಕ್ಕವಳು ಇದ್ದಳು ಅನ್ನುವ ಕಾರಣಕ್ಕೆ ನಾನು ಹೋಗುವುದಕ್ಕೆ ಆಗಲಿಲ್ಲ. ನಾನು ನೋಡಿದ ಹಾಗೆ ಶಂಕರ್ ಮತ್ತು ಅಣ್ಣ ತುಂಬಾನೇ ಕ್ಲೋಸ್. ಅಂದರೆ, ಒಬ್ಬರನ್ನು ಕಂಡರೆ ಒಬ್ಬರಿಗೆ ಗೌರವವಿತ್ತು." ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

"ಇಬ್ಬರಿಗೂ ಗೌರವಿತ್ತು"
ಅಣ್ಣಾವ್ರ ಮೇಲೆ ಶಂಕರ್‌ನಾಗ್‌ಗೂ ಅದೇ ರೀತಿ ಶಂಕರ್ ನಾಗ್ ಮೇಲೆ ಅಣ್ಣಾವ್ರಿಗೂ ತುಂಬಾನೇ ಗೌರವವಿತ್ತು ಎನ್ನುತ್ತಾರೆ ಹಿರಿಯ ನಟಿ ಸುಂದರಶ್ರೀ ಗುಬ್ಬಿ. "ಶಂಕರ್‌ನಾಗ್ ಬುದ್ದಿವಂತಿಗೆ ಬಗ್ಗೆ ಅಣ್ಣಾವ್ರು ತುಂಬಾ ಇಷ್ಟ ಪಡುತ್ತಿದ್ದರು. ಅಣ್ಣಾವ್ರ ಸಮಯಪ್ರಜ್ಞೆ, ಅವರು ಕೆಲಸ ಮಾಡುವ ಸ್ಟೈಲ್ ಬಗ್ಗೆ, ಅಣ್ಣಾವ್ರ ಶ್ರದ್ಧೆ ಬಗ್ಗೆ ತುಂಬಾನೇ ಗೌರವ ಕೊಡುತ್ತಿದ್ದರು. ಒಂದು ಕನಸಿನ ಕಥೆಯನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದೀನಿ. ನನ್ನ ಮಗಳು ತುಂಬಾನೇ ಚಿಕ್ಕವಳು ಇದ್ದಳು. ಆ ಕಡೆಗೆ ಗಮನಕೊಡಲೇಬೇಕಿತ್ತು." ಎನ್ನುತ್ತಾರೆ.
"ಶಂಕರ್ ನಾಗ್‌ರಿಂದ ಕೆಲಸ ಕಲಿತಿದ್ದೀನಿ"
ಇದೇ ಸಂದರ್ಭದಲ್ಲಿ "ಶಂಕರ್‌ನಾಗ್ ಜೊತೆ ಕೆಲಸ ಮಾಡಿದ್ದು ತೃಪ್ತಿ ಇದೆ ನನಗೆ. ನಾನು ಎಷ್ಟೋ ಚಾನೆಲ್‌ಗಳಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದೀನಿ. ಶೆಡ್ಯೂಲ್ ಪ್ಲಾನ್ ಮಾಡುತ್ತೇನೆ. ಎಷ್ಟೋ ಜನ ಹೇಳುತ್ತಾರೆ. ನೀವು ಪ್ಲಾನ್ ಮಾಡಿದ ಹಾಗೆ ಮಾಡುವುದಿಲ್ಲ ಅಂತಾನೂ ಹೇಳುತ್ತಾರೆ. ಇದೆಲ್ಲವನ್ನು ನಾನು ಶಂಕರ್ ಹಾಗೂ ರಮೇಶ್ ಭಟ್ ಅವರಿಂದಾನೇ ಕಲಿತಿರೋದು." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications










