"ಕೂದಲು ಕೆದರಿಕೊಂಡು, ಕಿತ್ತೋಗಿದ್ ಜೀನ್ಸ್ ಹಾಕೊಂಡು ಬಂದೆ.. ಉಪೇಂದ್ರ ಶಾಕ್ ಆಗ್ಬಿಟ್ರು" - ಶಿವಣ್ಣ ಹೇಳಿದ ಸೀನ್ ಯಾವುದು?
ಸ್ಯಾಂಡಲ್‌ವುಡ್‌ನ ರಿಯಲ್ ಟ್ರೆಂಡ್ ಸೆಟ್ಟರ್ ಯಾರು ಅಂತ ಕೇಳಿದರೆ ಅದು ಶಿವರಾಜ್‌ಕುಮಾರ್.ಅವರ ವೃತ್ತಿ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಒಂದಲ್ಲ ಒಂದು ಸಿನಿಮಾ ಮೂಲಕ ಟ್ರೆಂಡ್ ಸೆಟ್ ಮಾಡುತ್ತಲೇ ಬಂದಿದ್ದಾರೆ. ಪ್ರತಿ ಏಳೆಂಟು ವರ್ಷಕ್ಕೊಮ್ಮೆ ಒಂದೊಂದು ಸಿನಿಮಾ ಮೂಲಕ ಹೊಸ ಟ್ರೆಂಡ್ ಹುಟ್ಟಾಕಿದ್ದಾರೆ.
ಶಿವಣ್ಣ ಟ್ರೆಂಡ್ ಹುಟ್ಟಾಕಿದ ಸಿನಿಮಾಗಳಲ್ಲಿ 'ಓಂ' ಕೂಡ ಒಂದು. ಉಪ್ಪಿ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದ ಈ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಕನ್ನಡ ಚಿತ್ರರಂಗದಲ್ಲಿ ಗ್ಯಾಂಗ್‌ಸ್ಟರ್ ಸಿನಿಮಾಗಳ ಯುಗ ಆರಂಭ ಆಗಿದ್ದು 'ಓಂ' ಸಿನಿಮಾ ಮೂಲಕವೇ..

ಶಿವರಾಜ್‌ಕುಮಾರ್‌ಗೆ ಅಂದು ಉಪೇಂದ್ರ ಕಥೆ ಹೇಳಿದಾಗ ಥ್ರಿಲ್ ಆಗಿದ್ದರು. ಆಗ ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ 9 ವರ್ಷಗಳಾಗಿತ್ತು. ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ್ದ ಸಿನಿಮಾ ಒಪ್ಪಿಕೊಂಡಿದ್ದೇಗೆ? ಅನ್ನೋದನ್ನು ಶಿವಣ್ಣ ಗಲಾಟ ಪ್ಲಸ್ ಸಿನಿಮಾಗೆ ಕೊಟ್ಟ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲದೆ ಮೊದಲ ದಿನ ಕೂದಲು ಕೆದರಿಕೊಂಡು.. ಕಿತ್ತೋಗಿದ್ ಜೀನ್ಸ್ ಹಾಕೊಂಡು ಬಂದು, ಕೈಯಲ್ಲಿ ಲಾಂಗ್ ಹಿಡಿದಾಗ ಉಪ್ಪಿನೇ ಶಾಕ್ ಆಗಿದ್ದರಂತೆ. ಅದ್ಯಾಕೆ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
33 ವರ್ಷಕ್ಕೆ 'ಓಂ' ಸಿನಿಮಾ ಮಾಡಿದ್ದ ಶಿವಣ್ಣ
'ಓಂ' ಅಂತ ಇಂಡಸ್ಟ್ರಿ ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಮಾಡುವಾಗ ಶಿವಣ್ಣ ವಯಸ್ಸು ಕೇವಲ 33 ವರ್ಷ. ಆಗ 'ಓಂ' ಅಂತಹ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದೇಗೆ? ಅನ್ನೋದನ್ನು ಶಿವಣ್ಣ ಗಲಾಟ ಪ್ಲಸ್ ಸಂದರ್ಶನದಲ್ಲಿ ಹೇಳಿದ್ದಾರೆ. "ಓಂ ಸಿನಿಮಾ ಮಾಡುವಾಗ ನನಗೆ ಕೇವಲ 33 ವರ್ಷ ಅನಿಸುತ್ತೆ. ನಾನು 24 ವರ್ಷಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೆ. 9 ವರ್ಷಗಳಲ್ಲಿ ಆ ಮಟ್ಟಿಗೆ ಆಲೋಚನೆ ಮಾಡುವ ಲೆವೆಲ್‌ನಲ್ಲಿ ಏನೂ ಇರಲಿಲ್ಲ. ಆದರೆ, ಆ ಸಿನಿಮಾದಲ್ಲಿ ಕೆಲಸ ಮಾಡುವುದು ಖುಷಿ ಕೊಟ್ಟಿತ್ತು. ಉಪೇಂದ್ರ ಹೇಳಿದ ಸ್ಟೈಲ್ ನೋಡಿ ಹಿಂಗೂ ತಗೆಯುತ್ತಾರಾ ಸಿನಿಮಾ ಅಂತ ಅನಿಸಿತ್ತು.
ಕಾದಂಬರಿ ಆಧಾರಿತ ಸಿನಿಮಾ ಮಾಡಿದ್ದ ಶಿವಣ್ಣ
"ನಾನು ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಮುತ್ತಣ್ಣ, ರಣರಂಗ, ಇದರೊಂದಿಗೆ ಸಾಕಷ್ಟು ಕಾದಂಬರಿ ಆಧಾರಿತ ಸಿನಿಮಾ ಮಾಡಿದ್ದೆ. ಸಡನ್ ಆಗಿ ಒಂದು ಇಮೇಜ್ ಬದಲಾಯಿಸೋ ಒಂದು ಗ್ಯಾಂಗ್‌ಸ್ಟರ್ ಸಿನಿಮಾ ಸಿಗುತ್ತೆ. ಅಂಡರ್‌ವರ್ಲ್ಡ್, ಲವ್ ಸಬ್ಜೆಕ್ಟ್ ಸಿಗುತ್ತೆ. ಸಡನ್ ಆಗಿ ನನಗೆ ತೇಜಾಬ್ ಸಿನಿಮಾ ನೆನಪಿಗೆ ಬರುತ್ತೆ. ಆಗ ನನಗೆ ಓಕೆ.. ಒಳ್ಳೆ ಸಿನಿಮಾ ಅನ್ನೋ ಗುಂಗಿನಲ್ಲಿ ಇದ್ದೆವು." ಎಂದು ಶಿವಣ್ಣ ಸಂದರ್ಶನದ 'ಓಂ' ಬಗ್ಗೆ ಹೇಳಿದ್ದಾರೆ.

"ಕೂದಲು ಕೆದರಿಕೊಂಡು ಬಂದೆ"
'ಓಂ' ಸಿನಿಮಾದ ದೃಶ್ಯವೊಂದಕ್ಕೆ ಶಿವಣ್ಣ ಕೂದಲು ಕೆದರಿಕೊಂಡು, ಕಿತ್ತೋಗಿದ್ ಜೀನ್ಸ್ ಪ್ಯಾಂಟ್ ಹಾಕೊಂಡು. ಕೈಯಲ್ಲಿ ಲಾಂಗ್ ಹಿಡಿದು ನಿಂತಿದ್ದರಂತೆ. ಅದನ್ನು ಉಪೇಂದ್ರ ಶಾಕ್ ಆಗಿದ್ದರು. "ಫಸ್ಟ್ ಬರಬೇಕಾದರೆ, ಅವತ್ತು ಕೂದಲು ಕೆದರಿಕೊಂಡು ಬಂದೆ. ಯಾವುದೋ ಒಂದು ಕಿತ್ತೋಗಿರೋ ಜೀನ್ಸ್ ಪ್ಯಾಂಟ್, ಶರ್ಟ್ ಹಾಕೊಂಡು ಬಂದು ಸುಮ್ಮನೆ ಹಾಗೆ ನಿಂತು ಮಚ್ಚು ಹಿಡಿದುಕೊಂಡಾಗ ಉಪೇಂದ್ರ ಥ್ರಿಲ್ ಆಗಿಬಿಟ್ಟರು. ಅಲ್ಲೊಂದು ಆಟಿಟ್ಯೂಡ್ ಶುರುವಾಯ್ತು." ಎಂದು ಲಾಂಗ್ ಹಿಡಿದ ದೃಶ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
'ಓಂ' ರಿಲೀಸ್ ಬಳಿಕ ಹೇಗಿತ್ತು?
'ಓಂ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಅದಕ್ಕೆ ರೆಸ್ಪಾನ್ಸ್‌ಗೆ ಚಿತ್ರರಂಗವೇ ಶಾಕ್ ಆಗಿತ್ತು. ಆಗ ಸ್ಯಾಂಡಲ್‌ವುಡ್ ರಿಯಾಕ್ಷನ್ ಹೇಗಿತ್ತು? ಅನ್ನೋದನ್ನು ಹೇಳಿದ್ದಾರೆ. "ರಿಯಲ್ ರೌಡಿಗಳು ಇದ್ದರು ಆ ಎಕ್ಸ್‌ಪೆರಿಮೆಂಟ್ ಬೇರೆ. ಜನರಿಗೆ ಒಂದು ವಿಷನ್ ಬೇರೆನೇ ಸಿಕ್ಕಿಬಿಡ್ತು. ಸ್ಟೋರಿ ಹೀಗೆ ಮಾಡಬಹುದಾ ಅನ್ನೋದಕ್ಕಿಂತ ಇಂತಹ ಆಯಾಮದಲ್ಲಿ ಸಿನಿಮಾ ಮಾಡುವುದಕ್ಕೆ ದಾರಿ ಆಯ್ತು. ಸಿನಿಮಾದ ಕಲೆಕ್ಷನ್ ಬೇರೇನೆ ಆಗಿತ್ತು. ಅವಾಗ ತಲೆಯಲ್ಲಿ ಏನೂ ಇರಲಿಲ್ಲ. ನಾನು ಸಕ್ಸಸ್ ಅನ್ನು ಎಂಜಾಯ್ ಮಾಡಿದ್ದೆ." ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











