Darshan:ದರ್ಶನ್-ಸುಮಲತಾ ನಡುವೆ ಕಿತ್ತಾಟ ಆಗಿದ್ದು ಸತ್ಯ; ಇನ್ಮುಂದೆ ಒಂದಾಗೋದಿಲ್ವಾ? ಏನಿದೆ ಟ್ಯಾರೋ ಕಾರ್ಡ್ ಭವಿಷ್ಯ?

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಅಲ್ಲಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ತಮ್ಮ ಸಿನಿಮಾ ಕೆಲಸಗಳಲ್ಲಿ ಮತ್ತೆ ಭಾಗಿಯಾಗಿದ್ದಾರೆ. ಇನ್ನೇನು ಎಲ್ಲವೂ ಸರಿ ಹೋಗುವಂತೆ ಕಾಣುತ್ತಿದೆ ಎನ್ನುವಾಗಲೇ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಸುಮಲತಾ ಅಂಬರೀಶ್ ಅವರನ್ನು ಅನ್‌ಫಾಲೋ ಮಾಡಿದ್ದರು.

ಸುಮಲತಾ ಅಂಬರೀಶ್ ಅವರನ್ನು ಅನ್‌ಫಾಲೋ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ತಾಯಿ ಮಗನಂತೆ ಇದ್ದ ದರ್ಶನ್ ಹಾಗೂ ಸುಮಲತಾ ಇಬ್ಬರೂ ಯಾಕೆ ಬೇರೆಯಾದರು? ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡಿತ್ತು. ಆದರೆ, ಸುಮಲತಾ ಅವರನ್ನು ಅನ್‌ಫಾಲೋ ಮಾಡಿ ದರ್ಶನ್ ಸೈಲೆಂಟ್ ಆಗಿದ್ದರು. ಇತ್ತ ಸುಮಲತಾ ಸೋಶಿಯಲ್ ಮೀಡಿಯಾದಲ್ಲಿಯೇ ಮಾರ್ಮಿಕ ಪ್ರತಿಕ್ರಿಯೆ ನೀಡಿದ ಸುಮ್ಮನಾಗಿದ್ದಾರೆ.

Tarot card reader Neelam predicted about Darshan and Sumalatha Ambareesh rift

ಇತ್ತೀಚೆಗೆ ಟ್ಯಾರೋ ಕಾರ್ಡ್ ಭವಿಷ್ಯ ಸಿಕ್ಕಾಪಟ್ಟೆ ಜನಪ್ರಿಯವಾಗುತ್ತಿದೆ. ಈ ಟ್ಯಾರೋ ಕಾರ್ಡ್‌ಗಳನ್ನು ಇಟ್ಟುಕೊಂಡು ಭವಿಷ್ಯವನ್ನು ಲೆಕ್ಕ ಹಾಕುವ ನೀಲಂ ಅವರು ದರ್ಶನ್ ಸುಮಲತಾ ಸಂಬಂಧದ ಬಗ್ಗೆ, ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ದರ್ಶನ್ ಹಾಗೂ ಸುಮಲತಾ ಇಬ್ಬರ ನಡುವೆ ಕಿತ್ತಾಟ ಆಗಿದ್ದು ಸತ್ಯ. ಭವಿಷ್ಯದಲ್ಲಿ ಇಬ್ಬರು ಒಂದಾಗುತ್ತಾರಾ? ದರ್ಶನ್ ಯಾವ ಪಕ್ಷದಿಂದ ಕಣಕ್ಕೆ ಇಳಿಯುತ್ತಾರೆ? ಎನ್ನುವ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಡಿಕ್ಟ್ ಮಾಡಿದ್ದಾರೆ.

ಆಶ್ರಮ ಸೇರಿಕೊಂಡ ಕನ್ನಡದ ಹಿರಿಯ ನಟಿ ಶೈಲಶ್ರೀ ಸುದರ್ಶನ್; ನೆರವಿಗೆ ನಿಂತ ದರ್ಶನ್
ದರ್ಶನ್ ಬೆಳೆವಣಿಗೆ ತುಂಬಾನೇ ಕಷ್ಟವಾಗಿತ್ತು. ಇಲ್ಲಿವರೆಗೂ ಅವರ ಹಾದಿ ಅಷ್ಟೊಂದು ಸುಲಭ ಆಗಿರಲಿಲ್ಲ. ಅವರು ಬೆಳೆದು ನಿಂತಿರುವಾಗಲೇ ಒಂದು ಸಮಸ್ಯೆ ಬಂದು ನಿಂತಿತ್ತು. ಈಗ ದರ್ಶನ್ ರಾಜಕೀಯಕ್ಕೆ ಹೋಗುತ್ತಾರಾ? ಎನ್ನುವ ಪ್ರಶ್ನೆ ಎದ್ದಿದೆ. ಖಂಡಿತವಾಗಿಯೂ ದರ್ಶನ್ ಪಾಲಿಟಿಕ್ಸ್‌ಗೆ ಹೋಗಿಯೇ ಹೋಗುತ್ತಾರೆ. ಏಕೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ? ಯಾವ ವಯಸ್ಸಿನಲ್ಲಿ ಪಾಲಿಟಿಕ್ಸ್‌ಗೆ ಬರುತ್ತಾರೆ ಎನ್ನುವುದನ್ನು ಹೇಳಿದ್ದಾರೆ.

"ಸುಮಲತಾ ವಿರುದ್ಧವಾಗಿ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಜೆಪಿ ಪರವಾಗಿಯೇ ನಿಲ್ಲುತ್ತಾರೆ. ಅವರು ನನಗೆ ಆಸಕ್ತಿ ಇಲ್ಲ ಅಂತ ಹೇಳಿಕೊಳ್ಳಬಹುದು. ಆದರೆ, ಅವರ ಹಿಂದಿನ ಜೀವನ ಅಂತ ನೋಡಿದಾಗ ಅವರು ತಮ್ಮ ಜೀವನದಲ್ಲಿ ಏನೆಲ್ಲ ಆಗಿದೆಯಲ್ಲ. ಅದನ್ನು ಸರಿ ಮಾಡಿಕೊಳ್ಳಬೇಕು ಅಂತ ರಾಜಕಿಯಕ್ಕೆ ಬರುತ್ತಾರೆ. ಹೀಗಾಗಿ ಪಾಲಿಟಿಕ್ಸ್ ಬರೋದು ಗ್ಯಾರಂಟಿ. ಈಗ ರಾಜಕೀಯಕ್ಕೆ ಬರಲಿಲ್ಲ ಅಂದರೆ, 53 ಅಥವಾ 56ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಬರುತ್ತಾರೆ. ಆ ಚುನಾವಣೆಯನ್ನು ಶೇ.100ರಷ್ಟು ಗೆಲ್ಲುತ್ತಾರೆ." ಎಂದಿದ್ದಾರೆ.

Tarot card reader Neelam predicted about Darshan and Sumalatha Ambareesh rift

ಕಾರ್ಡ್‌ ನೋಡಿ ಹೇಗೆ ಲೆಕ್ಕಾ ಹಾಕುತ್ತಾರೆ? ಆ ಕಾರ್ಡ್‌ನಲ್ಲಿ ಇರುವುದನ್ನು ರೀಡ್ ಮಾಡುವುದು ಹೇಗೆ ಅನ್ನೋದು ಕೂಡ ಟ್ಯಾರೋ ಕಾರ್ಡ್ ರೀಡರ್ ನೀಲಂ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಬಿಜೆಪಿನೇ ಯಾಕೆ? ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ. ಅವರು ತೆಗೆದ ಎರಡು ಕಾರ್ಡ್ ಕೂಡ ದರ್ಶನ್‌ ಬಿಜೆಪಿಗೆ ಬರುತ್ತಾರೆ ಅನ್ನೋದನ್ನು ಸೂಚಿಸುತ್ತೆ ಅಂತ ಹೇಳಿಕೊಂಡಿದ್ದಾರೆ.

"ಎರಡು ಕಾರ್ಡ್‌ನಲ್ಲೂ ಮಹಿಳೆಯ ಚಿತ್ರಗಳು ಬಂದಿವೆ. ಹಾಗೇ ಎಮೋಷನ್ ಇದೆ. ಅವರಿಗೆ ಸಹಾಯ ಮಾಡಿರುವವರು, ಅವರಿಗೆ ಧೈರ್ಯ ತುಂಬಿರುವವರು, ವುಮನ್ ಪವರ್ ಅಂತಾನೂ ಹೇಳಬಹುದು. ಜೊತೆಗೆ ಮಹಿಳೆಯಿಂದಲೇ ರಾಜಕೀಯಕ್ಕೆ ಬರಬಹುದು. ಆ ಮೇಲೆ ಅವರು ನೋಡುವುದಕ್ಕೆ ರಫ್‌ ಇದ್ದಾರೆ ಅಷ್ಟೇ. ಆದರೆ, ಅವರದ್ದು ತುಂಬಾನೇ ಮೃಧು ಸ್ವಭಾವ. ಅದಕ್ಕೆ ಅವರಿಗೆ ಬೇಗ ಕೋಪ ಬರುತ್ತೆ. ಬೇಗನೇ ಸಿಟ್ಟಾಗುತ್ತಾರೆ. ಕಂಟ್ರೋಲ್ ಮಾಡುವುದಕ್ಕೆ ಆಗುದಿಲ್ಲ." ಎಂದಿದ್ದಾರೆ.

ಇನ್ನು ಟ್ಯಾರೋ ಕಾರ್ಡ್ ರೀಡರ್ ದರ್ಶನ್ ಹಾಗೂ ಸುಮಲತಾ ಸಂಬಂಧದ ಬಗ್ಗೆನೂ ಮಾತಾಡಿದ್ದಾರೆ. ಮುಂದೆ ದರ್ಶನ್ ಹಾಗೂ ಸುಮಲತಾ ಇಬ್ಬರೂ ಒಂದಾಗುತ್ತಾರಾ? ಅವರ ಸಂಬಂಧ ಹಾಳಾಗಿರುವುದು ನಿಜವೇ? ಅನ್ನೋದನ್ನು ಕಾರ್ಡ್ ರೀಡ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ. ಈಗ ಕಿತ್ತಾಡಿಕೊಂಡವರು ಭವಿಷ್ಯದಲ್ಲಿ ಒಂದಾಗುತ್ತಾರೋ? ಇಲ್ಲವೋ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ದರ್ಶನ್‌ಗೆ ಯಾವಾಗ ಅವಶ್ಯಕತೆ ಇತ್ತೋ ಆಗ ಅವರು ಒಂದಿಷ್ಟು ದಿನ ಅವರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದರು. ಮೇಡಂ ಕೈಗೆ ಸಿಕ್ಕಿರಲಿಲ್ಲ. ಇಲ್ಲಿ ಹಾಗೇ ಇರೋದು. ನಾನು ಸಹಾಯವನ್ನು ಬಯಸಿದಾಗ ನನಗೆ ಅವರು ಸಿಕ್ಕಿಲ್ಲ ಅನ್ನೋದು ಒಂದು. ಇನ್ನೊಂದು ಈಗ ಅವರು ಯಾವ ಪರಿಸ್ಥಿತಿಯಲ್ಲಿ ಇದ್ದಾರೋ ಆ ಕಾರಣಕ್ಕೆ ಅವರು ಎಲ್ಲರನ್ನೂ ದೂರ ಇಡುತ್ತಿದ್ದಾರೆ. ನನ್ನಿಂದಲೂ ಯಾರಿಗೂ ತೊಂದರೆ ಆಗುವುದು ಬೇಡ. ಅವರಿಂದಲೂ ನನಗೆ ತೊಂದರೆ ಆಗುವುದು ಬೇಡ ಎನ್ನುವ ರೀತಿ ಇದೆ" ಎಂದು ಟ್ಯಾರೋ ಕಾರ್ಡ್ ರೀಡರ್ ನೀಲಂ ಹೇಳಿದ್ದಾರೆ.

ಒಂದು ವ್ಯಕ್ತಿ ಇಲ್ಲಿ ಕೂತಿದ್ದಾರೆ. ಇಲ್ಲಿ ಅವರು ಕಡ್ಡಿಯನ್ನು ಸಪೋರ್ಟ್‌ಗೆ ಹಿಡಿದುಕೊಂಡಿದ್ದಾರೆ. ಅಂದರೆ, ನನಗೆ ಯಾರೂ ಬೇಡ. ಅವರು ಟ್ರಾವೆಲ್ ಮಾಡಬಹುದು. ಇನ್ನೊಬ್ಬರನ್ನು ಕರೆಯಬಹುದು. ಆದರೆ, ಇಲ್ಲಿ ವಿಷಯವೇ ಬೇರೆಯಿದೆ. ಈಗ ಅವರು ಅನ್‌ಫಾಲೋ ಮಾಡಿದ್ದಾರೆ. ಮಾತಾಡಿಸುತ್ತಿಲ್ಲ ಏನೇ ಇದ್ದರೂ, ಅಲ್ಲೊಂದು ಫ್ಯೂಚರ್ ಪ್ಲ್ಯಾನ್ ಇದೆ. ಬಿಗ್ ಪ್ಲ್ಯಾನ್ ಇದೆ. ಇಲ್ಲಿ ಗ್ಲೋಬ್ ಅನ್ನೋದು ಇದೆ. ಅದು ಸೋಶಿಯಲ್ ಮೀಡಿಯಾ ಅಂತಾನೂ ಬರುತ್ತೆ. ಇನ್ನೂ ಎರಡು ವರ್ಷ ಹೀಗೆ ಇರುತ್ತೆ. ಅವರಿಬ್ಬರ ಮಧ್ಯೆ ಮನಸ್ತಾಪ ಇರುತ್ತೆ. ಹೆಚ್ಚು ಮಾತಾಡುವುದಿಲ್ಲ. ಇಬ್ಬರೂ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ." ಎನ್ನುತ್ತಾರೆ.

ಸದ್ಯ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಅನ್ನೋದನ್ನು ಟ್ಯಾರೋ ಕಾರ್ಡ್ ಮೂಲಕ ನೀಲಂ ತಿಳಿಸಿದ್ದಾರೆ. ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದರೆ, ಈ ಟ್ಯಾರೋ ಕಾರ್ಟ್ ಭವಿಷ್ಯವನ್ನು ನಂಬುವವರಿಗೆ ಇದು ಇಂಟ್ರೆಸ್ಟಿಂಗ್ ಆಗಿಯೇ ಇರುತ್ತೆ. ಅದರಲ್ಲೂ ದರ್ಶನ್ ಅಭಿಮಾನಿಗಳಿಗೆ ಈ ಪ್ರಿಡಿಕ್ಷನ್ ಹೆಚ್ಚು ಕುತೂಹಲ ಕೆರಳಿಸಿರಬಹುದು.

ದರ್ಶನ್ ರಾಜಕೀಯಕ್ಕೆ ಬಂದೇ ಬರುತ್ತಾರೆ ಎನ್ನುವ ಟ್ಯಾರೋ ರೀಡಿಂಗ್ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿರುತ್ತೆ. ಆದರೆ, ದರ್ಶನ್ ಹಾಗೂ ಸುಮಲತಾ ನಡುವಿನ ಮುನಿಸು ಇನ್ನೂ ಎರಡು ವರ್ಷ ಹೀಗೆ ಮುಂದುವರೆಯುತ್ತೆ ಎಂದು ಹೇಳಿರುವುದು ಬೇಸರ ತರಿಸಿರಬಹುದು. ಎರಡು ವಿಷಯಗಳ ಬಗ್ಗೆ ಟ್ಯಾರೋ ರೀಡರ್ ನೀಲಂ ಸೂಕ್ತ ಕಾರಣಗಳನ್ನು ಕೊಟ್ಟಿದ್ದಾರೆ.

ಇನ್ನು ಸಿನಿಮಾ ವಿಷಯಕ್ಕೆ ಬರೋದಾರೆ ದರ್ಶನ್ ಸೈಲೆಂಟ್ ಆಗಿ 'ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜಾಮೀನು ಸಿಕ್ಕಿದ ಬಳಿಕ ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ಪ್ರಮುಖ ಟಾಕಿ ಪೋಷನ್ ಶೂಟಿಂಗ್ ನಡೆದಿತ್ತು. ಅದರ ಹಿಂದೆನೇ ರಾಜಸ್ತಾನದಲ್ಲಿ ಇನ್ನೊಂದು ಹಂತದ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ.

ಮತ್ತೊಂದು ಕಡೆ ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ಅರ್ಜಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು 20 ದಿನಗಳ ಕಾಲ ಮುಂದೂಡಲಾಗಿದೆ. ಹೀಗಾಗಿ ದರ್ಶನ್‌ಗೆ ಇನ್ನೂ 20 ದಿನಗಳ ಕಾಲ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ. ಈ 20 ದಿನಗಳಲ್ಲಿ ಮತ್ತೊಂದು ಹಂತದ ಶೂಟಿಂಗ್ ನಡೆಯುವ ನಿರೀಕ್ಷೆಯಿದೆ. ಒಟ್ನಲ್ಲಿ 'ಡೆವಿಲ್' ಸಿನಿಮಾವನ್ನು ಇದೇ ವರ್ಷ ಬಿಡುಗಡೆ ಮಾಡುವ ತರಾತುರಿಯಲ್ಲಿ ಚಿತ್ರತಂಡವಿದೆ.

More from Filmibeat

English summary
Tarot card reader Neelam predicted about Darshan and Sumalatha Ambareesh rift
Read more about: darshan sumalatha sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X