BBK 10: ಬಿಗ್ ಬಾಸ್ ಮನೆಗೆ ಹೋಗಲು ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು? ಮನೆಯೊಳಗೆ ಇದ್ದಿದ್ದೆಷ್ಟು ಗಂಟೆ?

ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಗೆದ್ದು ಬಂದಿದ್ದರು. ಡಾ. ಕೆ ಸುಧಾಕರ್ ಅನ್ನು ಚುನಾವಣೆಯಲ್ಲಿ ಮಣಿಸಿ ಬಂದಿದ್ದ ಪ್ರದೀಶ್ ಈಶ್ವರ್ ಅನ್ನು ಕನ್ನಡದ ಜನತೆ ಬೆರಗು ಕಣ್ಣುಗಳಿಂದ ಎದುರು ನೋಡುತ್ತಿತ್ತು.

ಎಂಎಲ್‌ಎ ಆಗಿದ್ದರೂ ತಮ್ಮ ಸ್ಪೂರ್ತಿದಾಯಕ ಭಾಷಣದಿಂದ ಪ್ರದೀಶ್ ಈಶ್ವರ್ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದಾರೆ. ಅಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಗಾಗ ಸುತ್ತಾಡಿ ಜನರ ಸಂಕಷ್ಟಗಳನ್ನು ಆಲಿಸುವ ಹೊಸ ಎಂಎಲ್‌ಎ ಕಾರ್ಯ ವೈಖರಿಯನ್ನು ಜನರು ಸೂಕ್ಷ್ಮ ಕಣ್ಣುಗಳಿಂದ ನೋಡುತ್ತಿದ್ದಾರೆ.

pradeep-eshwar-remunearation-bigg-boss

ಆಗಾಗ ಟ್ರೋಲ್ ಹಾಗೂ ವಿವಾದಗಳಲ್ಲಿ ಸಿಕ್ಕಿಕೊಳ್ಳುವ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಹಾಗಿದ್ದರೆ, ಬಿಗ್ ಬಾಸ್ ಮನೆಯೊಳಗೆ ಹೋಗಲು ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು? ಎಷ್ಟು ಗಂಟೆ ಮನೆಯೊಳಗೆ ಇದ್ದರು? ಬಿಗ್ ಬಾಸ್ ಮನೆಗೆ ಹೋಗಿದ್ದು ಏಕೆ? ತಿಳಿಯಲು ಮುಂದೆ ಓದಿ.

ವಿವಾದಕ್ಕೆ ಸಿಕ್ಕಿಕೊಂಡ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಮೊದಲ ಎಂಎಲ್‌ಎ. ಈ ಹಿಂದೆ ರಾಜಕೀಯ ಮುಖಂಡರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರಲಿಲ್ಲ. ಈ ಕಾರಣಕ್ಕೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ವಿರೋಧ ಪಕ್ಷಗಳು ಕೂಡ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿವೆ. ಈ ಮಧ್ಯೆ ಪ್ರದೀಶ್ ಈಶ್ವರ್ ಪಡೆದ ಸಂಭಾವನೆ ಎಷ್ಟು? ಅಂತಾನೂ ಚರ್ಚೆಯಾಗುತ್ತಿದೆ.

ಪ್ರದೀಪ್ ಈಶ್ವರ್ ಪಡೆದ ಸಂಭಾವನೆ ಎಷ್ಟು?

ಬಿಗ್ ಬಾಸ್ ಮನೆಯೊಳಗೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದೂ ಆಗಿದೆ. ಹೊರಗೆ ಬಂದಿದ್ದೂ ಆಗಿದೆ. ಆದರೆ, ಬಿಗ್ ಬಾಸ್ ಮನೆಗೆ ಹೋದ ಪ್ರತಿಯೊಬ್ಬ ಸ್ಪರ್ಧಿಗೂ ಇಂತಿಷ್ಟು ಸಂಭಾವನೆ ಅಂತ ಕೊಟ್ಟೇ ಕೊಡುತ್ತೆ. ಹಾಗೇ ಪ್ರದೀಶ್ ಈಶ್ವರ್‌ಗೆ ಎಷ್ಟು ಸಂಭಾವನೆ ಕೊಟ್ಟಿರಬಹುದು ಅನ್ನೋ ಚರ್ಚೆ ಸಹಜ. ಆದರೆ, ಮೂಲಗಳ ಪ್ರಕಾರ ಪ್ರದೀಶ್ ಈಶ್ವರ್‌ಗೆ ಒಂದು ರೂಪಾಯಿ ಸಂಭಾವನೆಯನ್ನು ನೀಡಿಲ್ಲ ಎಂದು ಬಲ್ಲ ಮೂಲಗಳು ಮಾಹಿತಿಯನ್ನು ಹೊರ ಹಾಕಿವೆ.

pradeep-eshwar-remunearation-bigg-boss

ಬಿಗ್ ಬಾಸ್ ಮನೆಗೆ ಹೋಗಿದ್ದೇಕೆ?

ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯದಿದ್ದ ಮೇಲೆ ಚಿಕ್ಕಬಳ್ಳಾಪುರ ಎಂಎಲ್‌ಎ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದೇಕೆ? ಈ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಬಿಗ್‌ ಬಾಸ್ ಟೀಮ್ ಒಳಗಿರುವ ಸ್ಪರ್ಧಿಗಳಿಗೆ ತಮ್ಮ ಸ್ಪೂರ್ತಿಯ ಮಾತುಗಳನ್ನು ಹೇಳುವಂತೆ ಕೇಳಿಕೊಂಡಿದ್ದರು. ಅದಕ್ಕೆ ಪ್ರದೀಶ್ ಈಶ್ವರ್ ಒಪ್ಪಿ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರು. ಸುಮಾರು ಮೂರು ಗಂಟೆಗಳ ಕಾಲ ಪ್ರದೀಶ್ ಈಶ್ವರ್ ಮನೆಯೊಳಗಿದ್ದರು ಎಂದು ಮೂಲಗಳು ಹೇಳಿವೆ.

ಪ್ರದೀಪ್ ಈಶ್ವರ್‌ಗೆ ಏನು ಲಾಭ ?

ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಫೇಮಸ್ ಆಗಿದ್ದಾರೆ. ಚಿಕ್ಕಬಳ್ಳಾಪುರ ಮಂದಿಗೆ ತಮ್ಮ ಎಂಎಲ್‌ಎ ಪರಿಚಯವಿದೆ. ಆದರೆ, ಇಡೀ ಕರ್ನಾಟಕದ ಬೇರೆ ಬೇರೆ ಕಡೆ ಇರುವ ಸಾಮಾನ್ಯ ಜನರಿಗೆ ಇವರ ಬಗ್ಗೆ ಮಾಹಿತಿಯಿಲ್ಲ. ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ಇಡೀ ಕರ್ನಾಟಕದ ಮನೆಗೆ ಮನೆಗೆ ತಲುಪಿದಂತಾಗಿದೆ. ಈ ಮೂಲಕ ರಾಜಕೀಯವಾಗಿ ಬೆಳೆಯಲು ಅನುಕೂಲವಾಗಿದೆ ಎಂದು ರಾಜಕೀಯ ವಲಯದಲ್ಲಿ ಆಗುತ್ತಿರುವ ಚರ್ಚೆ.

More from Filmibeat

English summary
Bigg Boss Kannada Season 10: How Much Money Did Pradeep Eshwar Get from the Show?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X