Aamir Khan: ಬ್ರೇಕ್ ಮುಗೀತು.. ರೂಮರ್ ಗರ್ಲ್‌ಫ್ರೆಂಡ್ ಜೊತೆ ಸಿನಿಮಾ ಮಾಡಲು ಹೊರಟ ಆಮಿರ್ ಖಾನ್?

'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಖಾನ್ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಕುಟುಂಬದೊಂದಿಗೆ ಕೆಲ ಕಾಲ ಕಳೆಯುವುದಕ್ಕೆ ನಿರ್ಧರಿಸಿದ್ದರು. ಆದ್ರೀಗ ಒಂದಿಷ್ಟು ತಿಂಗಳ ವಿಶ್ರಾಂತಿ ಬಳಿಕ ಆಮಿರ್ ಖಾನ್ ಮತ್ತೆ ನಟನೆಗೆ ಮರಳುವುದಕ್ಕೆ ನಿರ್ಧರಿಸಿದ್ದಾರೆ.

ಜನವರಿ, 2024ರಂದು ಆಮಿರ್ ಖಾನ್ ಹೊಸ ಸಿನಿಮಾ ಸೆಟ್ಟೇರಲಿದೆ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿಯೇ ಓಡಾಡುತ್ತಿದೆ. ಈ ಸಿನಿಮಾ ಸ್ವತ: ಆಮಿರ್ ಖಾನ್ ಅವರೇ ನಿರ್ಮಾಣ ಮಾಡುತ್ತಾರೆ ಅನ್ನೋದು ವಿಶೇಷ. ಇದೇ ಸಿನಿಮಾದಲ್ಲಿ ಆಮಿರ್ ಖಾನ್‌ಗೆ ನಾಯಕಿಯಾಗಿ ಫಾತಿಮಾ ಸನಾ ಶೇಕ್ ನಟಿಸುತ್ತಾರೆ ಅನ್ನೋದು ಮತ್ತೊಂದು ವಿಶೇಷ.

Buzz: After dating rumours about Fatima Sana Shaikh Aamir Khan doing a film with her

ಎರಡನೇ ಪತ್ನಿ ಕಿರಣ್ ರಾವ್‌ಗೆ ಆಮಿರ್ ಖಾನ್ ವಿಚ್ಛೇದನ ನೀಡಿದ ಕೆಲವೇ ದಿನಗಳ ಬಳಿಕ ಬಾಲಿವುಡ್‌ ನಟಿಯ ಹೆಸರು ತಳುಕು ಹಾಕಿಕೊಂಡಿತ್ತು. 'ದಂಗಲ್' ಹಾಗೂ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾಗಳಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಕ್‌ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈಗ ಅದೇ ನಟಿಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಸಲಿಗೆ ಆಮಿರ್ ಫಾತಿಮಾ ಸನಾ ಶೇಕ್ ಮ್ಯಾಟರ್ ಏನು?

ಆಮಿರ್ ಖಾನ್-ಫಾತಿಮಾ ಡೇಟಿಂಗ್

ಕಿರಣ್ ರಾವ್‌ ಹಾಗೂ ಆಮಿರ್ ಖಾನ್ ಇಬ್ಬರೂ ದಾಂಪತ್ಯ ಜೀವನವನ್ನು ಮುರಿದುಕೊಂಡಿದ್ದಾರೆ. ಈ ವಿಷಯವನ್ನುಇಬ್ಬರೂ ಪ್ರಬುದ್ಧತೆಯಿಂದ ವ್ಯಕ್ತ ಪಡಿಸಿದ್ದರು. ವಿಚ್ಛೇದನದ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಆಮಿರ್ ಖಾನ್ ಹೆಸರು ಬಾಲಿವುಡ್ ನಟಿ ಫಾತಿಮಾ ಸನಾ ಶೇಕ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ಜೋಡಿ ಈ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಈಗ ಮತ್ತೆ ಆಮಿರ್ ಖಾನ್‌ ಜೊತೆ ಫಾತಿಮಾ ಹೆಸರು ತಳುಕು ಹಾಕಿಕೊಂಡಿದೆ.

Buzz: After dating rumours about Fatima Sana Shaikh Aamir Khan doing a film with her

ಆಮಿರ್ ಹೊಸ ಸಿನಿಮಾ 'ಸಿತಾರೆ ಜಮೀನ್ ಪರ್'

ಆಮಿರ್ ಖಾನ್ ಜನವರಿ, 2024ಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ಸಿನಿಮಾದ ಹೆಸರು 'ಸಿತಾರೆ ಜಮೀನ್ ಪರ್'. ಈ ಸಿನಿಮಾವನ್ನು ಸ್ವತ: ಆಮಿರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಇದೇ ಸಿನಿಮಾದಲ್ಲಿ ಫಾತಿಮಾ ಸನಾ ಶೇಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಫಾತಿಮಾಗಾಗಿ ಸಿನಿಮಾ ಮಾಡಬೇಕಿತ್ತು

ಆಮಿರ್ ಖಾನ್ ಈ ಹಿಂದೆನೇ ಫಾತಿಮಾ ಸನಾ ಶೇಕ್‌ಗೆ ಬೇರೊಂದು ಸಿನಿಮಾಗೆ ಆಫರ್ ಕೊಟ್ಟಿದ್ದರು. ಮಲಯಾಳಂ ಸಿನಿಮಾ 'ಜಯ ಜಯ ಜಯ ಜಯ ಹೇ' ಸಿನಿಮಾದ ರಿಮೇಕ್ ಮಾಡಲು ಹೊರಟಿದ್ದರು. ಆ ಸಿನಿಮಾದಲ್ಲಿ ನಟಿಸುವಂತೆ ಫಾತಿಮಾ ಸನಾ ಶೇಕ್‌ಗೆ ನಟ ಆಮಿರ್ ಖಾನ್ ಆಫರ್ ಕೊಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಟೇಕ್ ಆಫ್ ಆಗಲಿಲ್ಲ. ಈಗ 'ಸಿತಾರೆ ಜಮೀನ್ ಪರ್' ಸಿನಿಮಾದಲ್ಲಿ ಫಾತಿಮಾ ಆಯ್ಕೆಯಾಗಿದ್ದಾರೆಂದು ಹಿಂದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಆರು ಸಿನಿಮಾ ನಿರ್ಮಾಣ ಮಾಡಲಿರೋ ಆಮಿರ್

ಆಮಿರ್ ಖಾನ್ ಸಿನಿಮಾದಲ್ಲಿ ನಟಿಸದಿದ್ದರೆ ಏನಂತೆ ಆರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲೊಂದು ಅವರೇ ನಟಿಸುತ್ತಿರುವ 'ಸಿತಾರೆ ಜಮೀನ್ ಪರ್' ಕೂಡ ಒಂದು. ಇದರೊಂದಿಗೆ 'ಮಿಸ್ಸಿಂಗ್ ಲೇಡೀಸ್', 'ಪ್ರೀತಂ ಪ್ಯಾರೇ', 'ಲಾಹೋರ್ 1947', ಸ್ಪಾನಿಷ್ ಸಿನಿಮಾ 'ಒನ್‌ ಡೇ' ರಿಮೇಕ್ ಮಾಡುತ್ತಿದ್ದಾರೆ. ಈ ಎಲ್ಲಾ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

More from Filmibeat

English summary
Aamir Khan film with Fatima Sana Shaikh after 5 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X