ಮಹೇಶ್ ಬಾಬು ಜೊತೆ ಟಾಲಿವುಡ್ ಮಾಸ್ ಹೀರೊ ಫೈಟ್.. ರಾಜಮೌಳಿ ಅಂದ್ರೆ ಸುಮ್ನೆನಾ?
RRR ಬಳಿಕ ರಾಜಮೌಳಿ ಗ್ಲೋಬಲ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ. ಮುಂದಿನ ಸಿನಿಮಾ ಯಾವಾಗ ಶುರುವಾಗುತ್ತೆ ಅಂತ ಸಿನಿಪ್ರಿಯರ ಎದುರು ನೋಡುತ್ತಿದ್ದಾರೆ. ಈಗಾಗಲೇ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುವುದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳನ್ನೂ ರಾಜಮೌಳಿ ಮಾಡಿಕೊಳ್ಳುತ್ತಿದ್ದಾರೆ.
ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ನಿರ್ದೇಶಿಸುತ್ತಿರುವ 'ಗುಂಟೂರು ಖಾರಂ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ ಸಿನಿಮಾಗಾಗಿ ಇಡೀ ದೇಶವೇ ಕಾದು ಕೂತಿದೆ.

ಇವರಿಬ್ಬರೂ ಜೊತೆಗೆ ಸೇರಿಕೊಂಡಿದ್ದಾರೆ ಅಂದ್ಮೇಲೆ ಸಿನಿಮಾದ ಮೇಲೆ ನಿರೀಕ್ಷೆಗಳು ಇರೋದು ಸಹಜ. ಇದೇ ವೇಳೆ ಟಾಲಿವುಡ್‌ನಲ್ಲಿ ಮಹೇಶ್ ಬಾಬು ಹಾಗೂ ರಾಜಮೌಳಿ ಜೋಡಿಯ ಸಿನಿಮಾ ಬಗ್ಗೆ ಮತ್ತೊಂದು ಅಪ್‌ಡೇಟ್ ಕೊಟ್ಟಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಮಹೇಶ್ ಬಾಬುಗೆ ಟಕ್ಕರ್ ಕೊಡುವುದಕ್ಕೆ ಟಾಲಿವುಡ್ ಮಾಸ್ ಹೀರೊ ಅಖಾಡಕ್ಕೆ ಇಳಿಯುತ್ತಿದ್ದಾರಂತೆ. ಹಾಗಿದ್ದರೆ, ಆ ಹೀರೊ ಯಾರು? ತಿಳಿಯಲು ಮುಂದೆ ಓದಿ.
ನಿರ್ದೇಶಕ ರಾಜಮೌಳಿ ಯಾವ ಹೀರೊಗೂ ಕಮ್ಮಿಯಿಲ್ಲ. ಸಿನಿಮಾದಲ್ಲಿ ಸ್ಟಾರ್ ಹೀರೋ ಇಲ್ಲದೇ ಇದ್ದರೂ ರಾಜಮೌಳಿ ಅನ್ನೋ ಹೆಸರಿನಿಂದಲೇ ಸಿನಿಮಾ ಓಡುತ್ತೆ. ರಾಜಮೌಳಿ ಹೆಸರು ಅನ್ನೋದು ಒಂದು ಬ್ರ್ಯಾಂಡ್ ಆಗಿಬಿಟ್ಟಿದೆ. ಟಾಲಿವುಡ್ ಹಾಗೂ ಭಾರತೀಯ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಿರ್ದೇಶಕ. ಹೀಗಾಗಿ ಮುಂದಿನ ಸಿನಿಮಾ ಮೇಲೂ ಅದೇ ನಂಬಿಕೆ ಇದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಇಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಸೆಟ್ಟೇರುತ್ತೆ ಅನ್ನೋದನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದು ಕೂತಿದ್ದಾರೆ. ಆದರೆ, ತ್ರಿಕ್ರಮ್ ಹಾಗೂ ಮಹೇಶ್ ಬಾಬು ಸಿನಿಮಾ ರಿಲೀಸ್ ಆಗುವವರೆಗೂ ರಾಜಮೌಳಿ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡೋದು ಡೌಟ್ ಇದೆ. ಇತ್ತ 'ಗುಂಟೂರು ಖಾರಂ' ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಿಡುಗಡೆವರೆಗೂ ಅಧಿಕೃತ ಅಪ್‌ಡೇಟ್ ಸಿಗೋದು ಅನುಮಾನ. ಆದರೂ, ಇಷ್ಟೆಲ್ಲ ಕಟ್ಟುಪಾಡುಗಳ ಮಧ್ಯೆ ಹೊಸದೊಂದು ಸುದ್ದಿ ಹೊರಬಿದ್ದಿದೆ.

ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು ಎದುರು ಖಳನಾಯಕನಾಗಿ ಟಾಲಿವುಡ್ ಮಾಸ್ ಹೀರೊ ಅಖಾಡಕ್ಕೆ ಇಳಿಯುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ವೈರಲ್ ಆಗಿದೆ. ರಾಜಮೌಳಿ ಮಾಸ್ಟರ್ ಪ್ಲ್ಯಾನ್ ಇದು ಎಂದು ನೆಟ್ಟಿಗರು ಹೊಗಳಿಕೊಂಡಾಡುತ್ತಿದ್ದಾರೆ.
ರಾಜಮೌಳಿ ಸಿನಿಮಾ ಹೀರೊ ಎಷ್ಟು ಪವರ್‌ಫುಲ್ ಆಗಿರುತ್ತಾನೋ.. ವಿಲನ್ ಕೂಡ ಅಷ್ಟೇ ಪವರ್‌ಫುಲ್ ಆಗಿರುತ್ತಾನೆ. ಇಬ್ಬರೂ ಸೆಣೆಸಾಡುವುದಕ್ಕೆ ನಿಂತರೆ, ಚಿತ್ರಮಂದಿರದಲ್ಲಿ ಕೂತಿದ್ದ ಪ್ರೇಕ್ಷಕರೇ ಕಳೆದೇ ಹೋಗುತ್ತಾರೆ. ಹಾಗೇ ಮತ್ತೊಂದು ಪವರ್‌ಫುಲ್ ಜೋಡಿಯನ್ನು ರೆಡಿಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಹೇಶ್ ಬಾಬು ಎದುರು ಟಾಲಿವುಡ್‌ನ ಮಾಸ್ ಮಹಾರಾಜ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ರಾಜಮೌಳಿ ಈ ಹಿಂದೆ ರವಿತೇಜಾಗೆ ಒಂದು ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಸಿನಿಮಾ ಕನ್ನಡ, ಹಿಂದಿ ಭಾಷೆಗೂ ರಿಮೇಕ್ ಆಗಿ ಸೂಪರ್ ಹಿಟ್ ಆಗಿತ್ತು. ಅದುವೇ 'ವಿಕ್ರಮಾರ್ಕುಡು'. ಅಲ್ಲಿಂದ ಈ ಜೋಡಿ ಮತ್ತೆ ಒಂದಾಗಿರಲಿಲ್ಲ. ಈಗ ಮಹೇಶ್ ಬಾಬು ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅತ್ಯಂತ ಕ್ರೌರ್ಯದ ಪಾತ್ರದಲ್ಲಿ ರವಿತೇಜ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ.


Click it and Unblock the Notifications











