Ghost: 'ಘೋಸ್ಟ್' ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿನೇ ಇಲ್ಲವೇ..? ಏನಿದು ಹೊಸ ಸುದ್ದಿ?

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಇದೇ ದಸರಾ ಹಬ್ಬಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿರುವ ಸಿನಿಮಾಗೆ ಈಗಾಗಲೇ ಭರ್ಜರಿ ಪ್ರಚಾರ ಆರಂಭ ಆಗಿದೆ. ಶಿವಣ್ಣ ಕೂಡ ಈಗಾಗಲೇ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ ಮೆಗಾ ಸಿನಿಮಾ 'ಜೈಲರ್' ಮೂಲಕ ಶಿವಣ್ಣ ತಮಿಳರ ಮನಗೆದ್ದಿದ್ದಾರೆ. ಹೀಗಾಗಿ 'ಘೋಸ್ಟ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವ ಎಲ್ಲಾ ಲಕ್ಷಣಗಳೂ ಇವೆ. ಈಗಾಗಲೇ ಹಿಂದಿ ಭಾಷೆಯ ಟ್ರೈಲರ್ ಕನ್ನಡಕ್ಕಿಂತ ಹೆಚ್ಚು ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ.

Buzz is that Shivarajkumar starrer Ghost movie has no heroine here is details

'ಘೋಸ್ಟ್' ರಿಲೀಸ್‌ಗೆ ಇನ್ನು 10 ದಿನ ಬಾಕಿ ಉಳಿದೆ. ಅಷ್ಟರೊಳಗೆ 'ಘೋಸ್ಟ್' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿಯೊಂದು ಓಡಾಡುತ್ತಿದೆ. ಈ ಸಿನಿಮಾದಲ್ಲಿ ನಾಯಕಿನೇ ಇಲ್ಲ ಸಿನಿಮಾ ಮಂದಿ ಚರ್ಚೆ ಮಾಡುತ್ತಿದ್ದಾರೆ. ನಿಜಕ್ಕೂ ಈ ಸಿನಿಮಾದಲ್ಲಿ ನಾಯಕಿನೇ ಇಲ್ಲವೇ? ಏನಿದು 'ಘೋಸ್ಟ್' ಕಥೆ?

ಮಧ್ಯರಾತ್ರಿಯಿಂದಲೇ ಫ್ಯಾನ್ಸ್ ಶೋ

'ಘೋಸ್ಟ್' ಸಿನಿಮಾ ಕ್ರೇಜ್ ಜೋರಾಗಿದೆ. ಪರಭಾಷೆಯ ನಟರೂ ಕೂಡ ಈ ಸಿನಿಮಾದಲ್ಲಿ ನಟಿಸಿರುವುದರಿಂದ 'ಘೋಸ್ಟ್' ಎಲ್ಲಾ ಭಾಷೆಯಲ್ಲೂ ಸದ್ದು ಮಾಡಬಹುದು ಅನ್ನೋ ನಿರೀಕ್ಷೆಯಿದೆ. ಇತ್ತ ಬೆಂಗಳೂರಿನ ಪ್ರಮುಖ ಚಿತ್ರಮಂದಿರದಲ್ಲಿ ಶಿವಣ್ಣ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಅನ್ನು ಅರೇಂಜ್ ಮಾಡಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಲ್ಲಿ ಮೊದಲ ಶೋ ಪ್ರದರ್ಶನ ಕಾಣಲಿದೆ.

ಶಿವಣ್ಣನೊಂದಿಗೆ ದಿಗ್ಗಜರ ಸಮಾಗಮ

'ಘೋಸ್ಟ್' ಸಿನಿಮಾ ಶಿವಣ್ಣ ಅಭಿಮಾನಿಗಳ ನಿದ್ದೆಯನ್ನೇ ಕದ್ದಿದೆ. ಸಿನಿಮಾ ರಿಲೀಸ್ ಆಗುವವರೆಗೂ ಸಮಾಧಾನವಿಲ್ಲ ಕಾರಣ ಸ್ಟಾರ್ ಕಾಸ್ಟ್. ಶಿವಣ್ಣನ ಜೊತೆ ಬಾಲಿವುಡ್ ನಟ ಅನುಪಮ್ ಖೇರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ನಿರ್ದೇಶಕ ಶ್ರೀನಿ ಕೂಡ 'ಘೋಸ್ಟ್' ಸಿನಿಮಾದಲ್ಲಿದ್ದಾರೆ. ಇದೇ ವೇಳೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಸಿನಿಮಾದಲ್ಲಿ ನಾಯಕಿಯನೇ ಇಲ್ಲ ಅನ್ನೋ ಸುದ್ದಿ ಓಡಾಡುತ್ತಿದೆ.

Buzz is that Shivarajkumar starrer Ghost movie has no heroine here is details

ಸಿನಿಮಾದಲ್ಲಿ ನಾಯಕಿ ಇಲ್ಲವೇ?

ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿನೇ ಇಲ್ಲ ಅನ್ನೋ ಸುದ್ದಿಯೊಂದಿ ಓಡಾಡುತ್ತಿದೆ. ಅರ್ಚನಾ ಜೋಯಿಸ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ನಾಯಕಿ ಅಲ್ಲ. ಹೀಗಾಗಿ ರೊಮ್ಯಾಂಟಿಕ್ ಹಾಡುಗಳು ಇರಲ್ಲ ಅನ್ನೋದು ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ, ನಿರ್ದೇಶಕ ಶ್ರೀನಿ ಸಿನಿಮಾದಲ್ಲಿ ಏನಾದರೂ ಟ್ವಿಸ್ಟ್ ಕೊಡಲಿಕ್ಕೂ ಸಾಧ್ಯತೆಯಿದೆ.

ನಾಯಕಿ ಯಾಕಿಲ್ಲ?

'ಘೋಸ್ಟ್' ಸಿನಿಮಾದಲ್ಲಿ ನಾಯಕಿ ಯಾಕಿಲ್ಲ ಅನ್ನೋ ಸುದ್ದಿಗೂ ಕಾರಣ ಕೊಡುತ್ತಿದ್ದಾರೆ. ಶ್ರೀನಿ ಪಕ್ಕಾ ಆಕ್ಷನ್ ಥ್ರಿಲ್ಲರ್ ಕಥೆಯೊಂದನ್ನು ಹೆಣೆದಿದ್ದಾರೆ. ಶಿವಣ್ಣನನ್ನು ಹಿಂದೆಂದೂ ನೋಡದ ಅವತಾರದಲ್ಲಿ ನೋಡಬಹುದು ಅನ್ನೋ ಮಾತುಗಳು ಕೂಡ ಕೇಳಿಬರುತ್ತಿದೆ. ಅಲ್ಲದೆ ಕಥೆ ರೋಚಕವಾಗಿರುವುದರಿಂದ ನಾಯಕಿಯ ಅವಶ್ಯಕತೆನೇ ಇಲ್ಲ ಅಂತಾನೂ ಹೇಳಲಾಗುತ್ತಿದೆ. ಏನೇ ಇದ್ದರೂ, 'ಘೋಸ್ಟ್' ರಿಲೀಸ್ ಆದಾಗಲೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

More from Filmibeat

English summary
Buzz is that Shivarajkumar starrer Ghost movie has no heroine here is details:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X