Rajamouli: ಪ್ರಭಾಸ್ ಸಿನಿಮಾ 'ಕಲ್ಕಿ'ಯಲ್ಲಿ ರಾಜಮೌಳಿ ಪಾತ್ರ ಇದೇ ಅಂತೆ.. ಏನಿದು ಹೊಸ ಸುದ್ದಿ?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ನಾಗ್ ಅಶ್ವಿನ್ ಕಾಂಬಿನೇಷನ್‌ನಲ್ಲಿ ದುಬಾರಿ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದು ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಅಂತ ಈಗಾಗಲೇ ಡಾರ್ಲಿಂಗ್ ಫ್ಯಾನ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆ ಸಿನಿಮಾನೇ 'ಕಲ್ಕಿ 2898AD'.

ಇದೇ ಸಿನಿಮಾದಲ್ಲಿ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಡೈರೆಕ್ಟರ್ ಪ್ರಭಾಸ್ ಕೂಡ ನಟಿಸುತ್ತಿರೋ ಸುದ್ದಿ ಕೆಲವು ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಇದು ಸದ್ದು ಮಾಡುತ್ತಿದ್ದಂತೆ ಪ್ರಭಾಸ್ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಯ್ತು. ಸಿನಿಮಾದಲ್ಲಿ ಅದೆಷ್ಟು ಸರ್ಪ್ರೈಸ್ ಕೊಡುವುದಕ್ಕೆ ಹೊರಟಿದ್ದಾರೆ ಅಂತೆಲ್ಲ ಸುದ್ದಿಯಾಗಿತ್ತು.

Buzz is that SS Rajamouli is playing scientist in Prabhas starrer Pan India Movie Kalki

ರಾಜಮೌಳಿ 'ಕಲ್ಕಿ' ಸಿನಿಮಾ ಯಾವ ಪಾತ್ರದಲ್ಲಿ ನಟಿಸುತ್ತಿರಬಹುದು ಎಂಬ ಕುತೂಹಲ ಮೂಡಿತ್ತು. ಅಷ್ಟರಲ್ಲೇ ರಾಜಮೌಳಿ ಪಾತ್ರದ ಬಗ್ಗೆ ಕುತೂಹಲಕಾರಿ ಅಂಶವೊಂದು ಹೊರಬಿದ್ದಿದೆ. ರಾಜಮೌಳಿ ಪಾತ್ರದ ಬಗ್ಗೆ ಟಾಲಿವುಡ್‌ನಲ್ಲಿ ಹೊಸದಾಗಿ ಚರ್ಚೆಯಾಗುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ..

'ಕಲ್ಕಿ'ಯಲ್ಲಿ ಪೌರಾಣಿಕ ಪಾತ್ರಗಳ ಸಂಗಮ

'ಕಲ್ಕಿ' ಸಿನಿಮಾದ ಕೆಲವು ತುಣುಕುಗಳು ಈಗಾಗಲೇ ಹೊರಬಿದ್ದಿವೆ. ಇದನ್ನು ನೋಡುತ್ತಿದ್ದರೆ. ನಾಗಾ ಅಶ್ವಿನ್ ತೆರೆಮೇಲೆ ದೃಶ್ಯ ವೈಭವವನ್ನು ಕಟ್ಟುಕೊಡಲು ಹೊರಟಿದ್ದಾರೆ ಅನ್ನೋದು ಅರವಿಗೆ ಬರುತ್ತೆ. ಭಾರತದ ಮಹಾಗ್ರಂಥಗಳಲ್ಲಿ ಬರುವ ಪೌರಾಣಿಕ ಪಾತ್ರಗಳನ್ನು ಇಟ್ಟುಕೊಂಡು ತೆರೆಮೇಲೆ ಅದ್ಭುತವನ್ನು ಸೃಷ್ಟಿಸಲು ಹೊರಟಿದ್ದಾರೆ. ಇದಕ್ಕಾಗಿ ಹೊಸ ಪ್ರಪಂಚವನ್ನು ಸೃಷ್ಟಿಸಿದ್ದಾರೆ ಅನ್ನೋದು ಸುದ್ದಿ. ವಿಶೇಷ ಅಂದರೆ, ಪೌರಾಣಿಕ ಪಾತ್ರಗಳ ಮಹಾ ಸಂಗವೇ ಈ ಸಿನಿಮಾದಲ್ಲಿ ಆಗಲಿದೆ ಎಂಬುದು ಸುದ್ದಿ.

ಯಾರಿಗೆ ಯಾವ ಪಾತ್ರ

'ಕಲ್ಕಿ' ಸಿನಿಮಾದಲ್ಲಿ ಅಮಿತಾ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿದಂತೆ ಹಲವರು ಕಲಾವಿದರು ನಟಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಭಾಸ್ ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಭ್ ಬಚ್ಚನ್ ಪರಶುರಾಮನ ಪಾತ್ರದಲ್ಲಿ, ಕಮಲ್ ಹಾಸನ್ ಖಳನಾಯಕನಾಗಿ ನಟಿಸುತ್ತಿದ್ದಾರೆ ಅಂತ ಈಗಾಗಲೇ ವದಂತಿಗಳು ಹಬ್ಬಿವೆ. ಈ ಮಧ್ಯೆ ಮೂವಿ ಮಾಂತ್ರಿಕ ರಾಜಮೌಳಿ ಪಾತ್ರದ ಬಗ್ಗೆನೂ ಗುಲ್ಲೆದ್ದಿದೆ.

Buzz is that SS Rajamouli is playing scientist in Prabhas starrer Pan India Movie Kalki

ರಾಜಮೌಳಿಯ ಪಾತ್ರವೇನು?

ಭಾರತೀಯ ಚಿತ್ರರಂಗದ ಲೆಜೆಂಡರಿ ಡೈರೆಕ್ಟರ್ ರಾಜಮೌಳಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಜಕ್ಕಣ್ಣ 'ಕಲ್ಕಿ' ಸಿನಿಮಾದಲ್ಲಿ ವಿಜ್ಞಾನಿಯ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಈ ಪಾತ್ರ ಕಲ್ಕಿ ಸಿನಿಮಾದ ನಿರ್ಣಾಯಕ ಪಾತ್ರವೆಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿ ಎಷ್ಟು ನಿಜವೋ ಚಿತ್ರತಂಡವೇ ಹೇಳಬೇಕು. ಟಾಲಿವುಡ್‌ನಲ್ಲಿ ರಾಜಮೌಳಿ 'ಕಲ್ಕಿ'ಯಲ್ಲಿ ಸೈಂಟಿಸ್ಟ್ ಅಂತ ಪುಕಾರು ಹಬ್ಬಿದೆ.

'ಕಲ್ಕಿ' ರಿಲೀಸ್ ಯಾವಾಗ?

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಿರಿಯ ನಿರ್ಮಾಪಕ ಅಶ್ವಿನಿದತ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಕಲ್ಕಿ' ಬಜೆಟ್ ಸುಮಾರು 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೃಹತ್ ಬಜೆಟ್‌ನಲ್ಲಿ ಪ್ಯಾನ್-ವರ್ಲ್ಡ್ ಲೆವೆಲ್‌ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದೆ. ಸಿನಿಮಾದ ಶೂಟಿಂಗ್ ತಡವಾಗಿದ್ದರಿಂದ 2024ರ ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಸಿನಿಮಾ ಮಾರ್ಚ್, ಏಪ್ರಿಲ್ ಹೊತ್ತಿಗೆ ತೆರೆಕಾಣುವ ಸಾಧ್ಯತೆ ಇದೆ.

More from Filmibeat

English summary
SS Rajamouli role in Kalki is a scientist:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X