ರುಕ್ಮಿಣಿಗೆ ಸಿಗಬೇಕಿದ್ದ ಒಳ್ಳೆ ಅವಕಾಶ 'ಕಣ್ಣಪ್ಪ' ಸಿನಿಮಾ ನಟಿಯ ಪಾಲಾಯ್ತು?

ಚಿತ್ರರಂಗದಲ್ಲಿ ಒಂದು ಮಾಡಬೇಕಿದ್ದ ಪಾತ್ರವನ್ನು ಬೇರೊಬ್ಬರು ಮಾಡುವುದು ಹೊಸದೇನು ಅಲ್ಲ. ಒಂದು ಕಥೆಗೆ ಸಾಕಷ್ಟು ನಟ, ನಟಿಯರ ಹೆಸರು ಕೇಳಿಬರುತ್ತದೆ. ಅಂತಿಮವಾಗಿ ಯಾರೋ ನಟಿಸುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಇಂತಹ ಊಪಾಪೋಹ ಹೆಚ್ಚಾಗುತ್ತಲೇ ಇದೆ. ಧನುಷ್ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಾರೆ ಎನ್ನುವ ಸುದ್ದಿ 4 ತಿಂಗಳ ಹಿಂದೆ ಕೇಳಿಬಂದಿತ್ತು.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಧನುಷ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಸುಬ್ರಮಣ್ಯಂ ಸ್ವಾಮಿ ಹಿನ್ನೆಲೆಯಲ್ಲಿ ಧನುಷ್ ನಟಿಸುವ ಹೊಸ ಸಿನಿಮಾ ಘೋಷಣೆ ಆಗಿತ್ತು. 'ಓಂ' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ ಧನುಷ್ ನಟನೆಯ 56ನೇ ಸಿನಿಮಾ ನಾಯಕಿ ಯಾರು ಎನ್ನುವ ಚರ್ಚೆ ಜೋರಾಗಿದೆ. ಬೆಂಗಳೂರು ಬೆಡಗಿ ರುಕ್ಮಿಣಿ ವಸಂತ್ ಕ್ರೇಜ್ ಸೌತ್ ಸಿನಿದುನಿಯಾದಲ್ಲಿ ಜೋರಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಧರ್ಮನ್' ಚಿತ್ರದಲ್ಲಿ ರುಕ್ಕು ನಟಿಸುತ್ತಾರೆ ಎಂದು ಗುಲ್ಲಾಗಿದೆ.

Buzz Preity Mukhundhan To Replace Rukmini Vasanth in Dhanush next

ತಮಿಳರಸನ್ ಪಚಮುತ್ತು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಪುಷ್ಪ' ರೀತಿಯ ಸಿನಿಮಾ ಇದು ಎನ್ನಲಾಗ್ತಿದೆ. ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿತ್ತು. ರುಕ್ಮಣಿ ವಸಂತ್ ಅಥವಾ 'ಧುರಂಧರ್' ಸಿನಿಮಾ ಖ್ಯಾತಿಯ ಸಾರಾ ಅರ್ಜುನ್ ಹೆಸರು ಚರ್ಚೆಯಲ್ಲಿತ್ತು. ಇದೀಗ ಪ್ರೀತಿ ಮುಕುಂದನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

Also Read
ವಾರೆವ್ಹಾ.. ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ?
ವಾರೆವ್ಹಾ.. ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ?

ತಮಿಳು ನಟಿ ಪ್ರೀತಿ ಮುಕುಂದನ್ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ನೆಮಲಿ ಪಾತ್ರದಲ್ಲಿ ಮಂಚು ವಿಷ್ಣು ಜೋಡಿಯಾಗಿ ಮಿಂಚಿದ್ದರು. ಸಿಕ್ಕಾಪಟ್ಟೆ ಬಿಂದಾಸ್ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದರು. ರುಕ್ಮಿಣಿ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಡೇಟ್ಸ್ ಸಮಸ್ಯೆ ಎದುರಾಗಿದೆ. ಹಾಗಾಗಿ ಅವಕಾಶ ಪ್ರೀತಿ ಪಾಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.

Buzz Preity Mukhundhan To Replace Rukmini Vasanth in Dhanush next

ರುಕ್ಕು ಫುಲ್ ಬ್ಯುಸಿ

'ಸಪ್ತಸಾಗರದಾಚೆ ಎಲ್ಲೊ' ಸರಣಿ ಹಾಗೂ 'ಕಾಂತಾರ- 1' ಚಿತ್ರದಲ್ಲಿ ನಟಿಸಿ ರುಕ್ಮಿಣಿ ಮೋಡಿ ಮಾಡಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲೂ ರುಕ್ಕು ಕ್ರೇಜ್ ಶುರುವಾಗಿದೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳಿಗೆ ಆಕೆಯ ಹೆಸರು ಕೇಳಿಬರ್ತಿದೆ. ಸದ್ಯ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ ಕೊನೆ ವಾರ ಸಿನಿಮಾ ತೆರೆಗೆ ಬರಲಿದೆ. ಇನ್ನು ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಜೋಡಿಯ 'ಡ್ರ್ಯಾಗನ್' ಚಿತ್ರಕ್ಕೂ ನಾಯಕಿಯಾಗಿದ್ದಾರೆ.

Recommended For You
ರುಕ್ಮಿಣಿ ವಸಂತ್ ಡೀಪ್ ಫೇಕ್ ಪ್ರಕರಣ; ಸಿಕ್ಕಿಬಿದ್ದವರು ಒಬ್ರು ಸ್ಟಾಫ್ಟ್‌ವೇರ್,ಇನ್ನೊಬ್ರು ಸಿಎ, ಮತ್ತೊಬ್ರು ನರ್ಸ್
ರುಕ್ಮಿಣಿ ವಸಂತ್ ಡೀಪ್ ಫೇಕ್ ಪ್ರಕರಣ; ಸಿಕ್ಕಿಬಿದ್ದವರು ಒಬ್ರು ಸ್ಟಾಫ್ಟ್‌ವೇರ್,ಇನ್ನೊಬ್ರು ಸಿಎ, ಮತ್ತೊಬ್ರು ನರ್ಸ್

ಬಾಲಿವುಡ್ ಅವಕಾಶಗಳು

ಈಗಾಗಲೇ ಬಾಲಿವುಡ್ ಫಿಲ್ಮ್‌ ಮೇಕರ್ಸ್ ಕಣ್ಣು ಕೂಡ ರುಕ್ಮಿಣಿ ವಸಂತ್ ಮೇಲೆ ಬಿದ್ದಿದೆ. ಕೆಲವರು ಕಥೆ ಹೇಳಿ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರುಕ್ಕು ಕೂಡ ಬಾಲಿವುಡ್ ಪ್ರವೇಶದ ಕನಸು ಕಾಣುತ್ತಿದ್ದಾರೆ. ಒಂದೊಳ್ಳೆ ತಂಡ, ಸ್ಕ್ರಿಪ್ಟ್‌, ಪಾತ್ರಕ್ಕಾಗಿ ಕಾಯ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹಾದಿಯಲ್ಲೇ ರುಕ್ಮಿಣಿ ಬಾಲಿವುಡ್ ಪ್ರವೇಶ ಆಗಲಿದೆ.

ಸೌತ್‌ನಲ್ಲಿ ಕ್ರೇಜ್

ಈಗಾಗಲೇ ಒಂದು ತೆಲುಗು ಹಾಗೂ 2 ತಮಿಳು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಆದರೆ ಬ್ರೇಕ್ ಮಾತ್ರ ಸಿಕ್ಕಿಲ್ಲ. ಅದೇ ಕಾರಣಕ್ಕೆ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದ ಬಳಿಕ ಮತ್ತಷ್ಟು ಒಳ್ಳೆ ಪಾತ್ರಗಳು ಆಕೆಯನ್ನು ಹುಡುಕಿ ಬರುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಚಿತ್ರದ ಪ್ರಚಾರಕ್ಕೆ ಸಿದ್ಧತೆ ನಡೀತಿದೆ. ರುಕ್ಮಿಣಿ ಸಿನಿಮಾ ಇದರಲ್ಲಿ ಭಾಗವಹಿಸಲಿದ್ದಾರೆ.

Read more about: dhanush rukmini vasanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X