ಶತ್ರುವಿನ ಮಿತ್ರನಿಗೆ ಸಿಎಂ ಜಗನ್ ಗೌರವ: ಏನಿದು ಕಾರ್ಯತಂತ್ರ?

ಆಂಧ್ರ ಪ್ರದೇಶದಲ್ಲಿ ಈಗ ಚಿತ್ರರಂಗ v/s ರಾಜ್ಯ ಸರ್ಕಾರ ಎಂಬಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ನಟ ಚಿರಂಜೀವಿ ಇಂದಾಗಿ ಸಮಸ್ಯೆ ಶಾಂತಿಯಿಂದ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆಯಾದರೂ ಒಳಗಿನ ಹಭೆ ಇನ್ನೂ ಆರಿಲ್ಲ.

Recommended Video

ಜಗನ್ ಮನೆಗೆ ಹೋಗಿದ್ದೆ ತಪ್ಪಾಯ್ತು ಅನ್ನೋ ಹಾಗಾಗಿದೆ ಚಿರಂಜೀವಿ ಪರಿಸ್ಥಿತಿ

ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ರಾಜಕಾರಣಿಯೂ ಆಗಿದ್ದು ಆಂಧ್ರದಲ್ಲಿ ಸಿಎಂ ಜಗನ್ ವಿರುದ್ಧ ಕೆಲವು ಪ್ರತಿಭಟನೆಗಳು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿದ್ದರು.

ಆಂಧ್ರ ಸಿಎಂ ಮಾತಿನ ಮೇಲೆ ನಿಂತಿದೆ ಪವನ್ ಕಲ್ಯಾಣ್ ಸಿನಿಮಾ ಭವಿಷ್ಯ!
ಬಳಿಕ ಪವನ್‌ ನಟನೆಯ 'ವಕೀಲ್ ಸಾಬ್' ಬಿಡುಗಡೆ ಆದಾಗ ಸಿನಿಮಾಕ್ಕೆ ಸಾಕಷ್ಟು ಸಮಸ್ಯೆಗಳನ್ನು ಆಂಧ್ರ ಸರ್ಕಾರ ನೀಡಿತು. ಫ್ಯಾನ್ಸ್ ಶೋ, ಬೆನಿಫಿಟ್ ಶೋ ಪ್ರದರ್ಶಿಸದಂತೆ ನಿರ್ಭಂದ ಹೇರಿತು. ಇದರಿಂದ ಪವನ್ ಹಾಗೂ ಜಗನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಆರಂಭವಾಯಿತು.

CM Jagan Mohan Reddy To Give Important Role To Actor Ali In His Party

ಬಳಿಕ ಜಗನ್ ಹೊಸ ಆದೇಶ ಹೊರಡಿಸಿ ಆಂಧ್ರದ ಎಲ್ಲ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿ ಚಿತ್ರರಂಗಕ್ಕೆ ಭಾರಿ ಪೆಟ್ಟು ಕೊಟ್ಟರು. ಇದನ್ನು ಕಟುವಾಗಿ ಟೀಕಿಸಿದ ನಟ ಪವನ್ ಕಲ್ಯಾಣ್ ಬಹಿರಂಗ ಸಭೆಯಲ್ಲಿ ಜಗನ್ ಅನ್ನು ಏಕವಚನ ಪ್ರಯೋಗಿಸಿ ಬೈದರು. ಇದು ಜಗನ್ ಅನ್ನು ಇನ್ನಷ್ಟು ಕೆರಳಿಸಿತು.

ಆಂಧ್ರದಲ್ಲಿ ನನ್ನ ಸಿನಿಮಾ ಉಚಿತವಾಗಿ ತೋರಿಸ್ತೀನಿ: ಜಗನ್‌ಗೆ ಪವನ್ ಕಲ್ಯಾಣ್ ಸವಾಲು
ಇದೀಗ ನಟ ಪವನ್ ಕಲ್ಯಾಣ್ ಅನ್ನು ಹಣಿಯಲು ಅವರದ್ದೇ ಉದ್ಯಮದವರನ್ನು ಜಗನ್ ಮೋಹನ್ ರೆಡ್ಡಿ ಬಳಸಿಕೊಳ್ಳುತ್ತಿದ್ದು. ಜಗನ್ ಬೆಂಬಲಿಗರಾಗಿರುವ ನಟ ಪೋಸಾನಿ ಕೃಷ್ಣ ಮುರಳಿ ಕೆಲವು ತಿಂಗಳ ಹಿಂದೆ ಪವನ್ ಕಲ್ಯಾಣ್ ವಿರುದ್ಧ ಕೆಟ್ಟದಾಗಿ ಆರೋಪಗಳನ್ನು ಮಾಡಿದ್ದರು. ಪವನ್ ಅಭಿಮಾನಿಗಳಿಂದ ಏಟನ್ನು ಸಹ ತಿಂದರು.

ಇದೀಗ ಜಗನ್, ಪವನ್ ಕಲ್ಯಾಣ್‌ರ ಆಪ್ತ ಗೆಳೆಯರೊಬ್ಬರಿಗೆ ತಮ್ಮ ಪಕ್ಷದಲ್ಲಿ ದೊಡ್ಡ ಹುದ್ದೆಯೊಂದನ್ನು ಕೊಡಲು ಮುಂದಾಗಿದ್ದು, ಆ ಮೂಲಕ ಚಿತ್ರರಂಗದ ತಮ್ಮ ವೈರಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಅದೂ ಅಲ್ಲದೆ ಚಿತ್ರರಂಗದ ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿದ್ದಕ್ಕೆ ಚಿತ್ರರಂಗದವರಿಗೆ ತಮ್ಮ ಮೇಲೆ ಮೂಡಿರುವ ಅಸಮಾಧಾನವನ್ನು ಕಡಿಮೆಗೊಳಿಸಲು ಸಹ ಈ ತಂತ್ರ ಬಳಸಿದ್ದಾರೆ ಜಗನ್.

ರಾಜೀವ್ ಗಾಂಧಿ ಮಾದರಿಯಲ್ಲಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆಂದ ಪವನ್ ಅಭಿಮಾನಿ!
ಹಾಸ್ಯನಟ ಆಲಿ ಪವನ್ ಕಲ್ಯಾಣ್‌ರ ಹಳೆಯ ಗೆಳೆಯರಲ್ಲಿ ಒಬ್ಬರು. ಪವನ್ ಕಲ್ಯಾಣ್ ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ನಟ ಆಲಿ ಇದ್ದಾರೆ. ಪವನ್ ಕಲ್ಯಾಣ್ ಗೆಳೆಯನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಆಲಿಗೆ ಜಗನ್ ತಮ್ಮ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಹುದ್ದೆಯೊಂದನ್ನು ಕೊಡಲು ಯೋಜಿಸಿದ್ದಾರೆ.

ಅಲಿ ಮಾತ್ರವೇ ಅಲ್ಲ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದಲ್ಲಿರುವ ಚಿತ್ರರಂಗದ ಕೆಲವರಿಗೆ ಒಳ್ಳೆಯ ಸ್ಥಾನಗಳನ್ನು ನೀಡಲು ಜಗನ್ ನಿರ್ಧರಿಸಿದ್ದಾರೆ. ಕೆಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳು ಸಹ ದೊರೆಯಲಿವೆ. ತೆಲುಗು ಚಿತ್ರರಂಗದ ಹಲವರಿಗೆ ತಮ್ಮ ಮೇಲಿರುವ ಅಸಮಾಧಾಣ ತಗ್ಗಿಸಲೆಂದು ಈ ಕಾರ್ಯಕ್ಕೆ ಜಗನ್ ಮುಂದಾಗಿದ್ದು, ಕೆಲವು ಚಿತ್ರರಂಗದ ಕೆಲವು ಪ್ರಮುಖ ನಟ-ನಟಿಯರನ್ನು ಪಕ್ಷಕ್ಕೆ ಸೆಳೆಯಲು ಸಹ ಸಜ್ಜಾಗಿದ್ದಾರೆ.

More from Filmibeat

English summary
Andhra CM Jagan Mohan Reddy to give important role to actor Ali in his YSR Congress party. He also attracting some other actors and actress to his party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X