ಒಂದೇ ಸಿನಿಮಾಗೆ ಎರಡು ರಿಲೀಸ್ ಡೇಟ್? ಕಮಲ್ ಹಾಸನ್ 'ಇಂಡಿಯನ್ 2' ರಿಲೀಸ್ ಯಾವಾಗ?

ಉಳಗನಾಯಗನ್ ಕಮಲ್ ಹಾಸನ್ 'ವಿಕ್ರಂ' ಯಶಸ್ಸಿನ ಬಳಿಕ ಬೇಡಿಕೆಯ ನಟನಾಗಿದ್ದಾರೆ. ಹಾಗಂತ ಕೇವಲ ನಟನಾಗಿ ಅಷ್ಟೇ ಬ್ಯುಸಿಯಾಗಿಲ್ಲ. ಬದಲಾಗಿ, ನಿರ್ಮಾಪಕರಾಗಿಯೂ ಬ್ಯುಸಿಯಾಗಿದ್ದಾರೆ. ಈಗ 'ವಿಕ್ರಂ' ಸಿನಿಮಾದ ಯಶಸ್ಸಿನ ರುಚಿಯನ್ನು ಮುಂದುವರೆಸುವ ತವಕದಲ್ಲಿದ್ದಾರೆ. ಕಮಲ್ ಹಾಗೂ ದುಬಾರಿ ನಿರ್ದೇಶಕ ಶಂಕರ್ ಕಾಂಬೋ ಜೋಡಿಯ 'ಇಂಡಿಯಾನ್ 2' ಇನ್ನೂ ರಿಲೀಸ್ ಆಗಬೇಕಿದೆ. ಆ ಸಿನಿಮಾ ರಿಲೀಸ್‌ಗೆ ಈಗ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

'ಇಂಡಿಯಾನ್ 2' ಚಿತ್ರೀಕರಣದ ವೇಳೆ ನಡೆದ ದುರಂತದ ಬಳಿಕ ಕಮಲ್ ಹಾಸನ್ ಹಾಗೂ ಶಂಕರ್ ಇಬ್ಬರೂ ಬೇರೆ ಸಿನಿಮಾಗಳ ಕಡೆ ಮುಖ ಮಾಡಿದ್ದರು. ಕೆಲವು ತಿಂಗಳ ಹಿಂದಷ್ಟೇ ಈ ಜೋಡಿ ಮತ್ತೆ ಜೊತೆಯಾಗಿ ಅರ್ಧಕ್ಕೆ ನಿಂತಿದ್ದ ಸಿನಿಮಾವನ್ನು ಮುಗಿಸುವ ನಿರ್ಧಾರಕ್ಕ ಬಂದಿತ್ತು. ಸದ್ಯ ಕಾಲಿವುಡ್‌ನಲ್ಲಿ ಇದೇ 'ಇಂಡಿಯನ್ 2' ರಿಲೀಸ್ ಡೇಟ್ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

Kamal Haasan Shankar Indian 2 release date

ಹೌದು 'ಇಂಡಿಯನ್ 2' ರಿಲೀಸ್ ಡೇಟ್ ಬಗ್ಗೆ ತಮಿಳು ಚಿತ್ರರಂಗದಲ್ಲಿ ಹೊಸ ಅಪ್‌ಡೇಟ್ ಒಂದು ಓಡಾಡುತ್ತಿದೆ. ಕಮಲ್ ಹಾಗೂ ಶಂಕರ್ ಇಬ್ಬರೂ ಸೇರಿ 1996ರಲ್ಲಿ ಸೃಷ್ಟಿಸಿದ ಸಂಚಲನವನ್ನು ಇಲ್ಲಿಯೂ ಮುಂದುವರೆಸುತ್ತಾರಾ? ಅನ್ನೋದು ಎಲ್ಲರನ್ನೂ ಕಾಡುತ್ತಿದೆ. ಕಮಲ್ ಹಾಸನ್ ಗೆಟಪ್, ಸ್ಟೈಲ್, ಆಕ್ಷನ್ ಎಲ್ಲವೂ ಅಂದು ಸಿನಿಮಾರಂಗದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಈಗ 'ಇಂಡಿಯನ್ 2' ಸರದಿ.

ಒಂದಿಷ್ಟು ಅಡೆ ತಡೆಗಳನ್ನು ಎದುರಿಸಿ 'ಇಂಡಿಯನ್ 2' ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಿತ್ತು. ಈಗ ಸಿನಿಮಾದ ಶೂಟಿಂಗ್ ಮುಗಿದಿದ್ದು, ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇಷ್ಟೇ ಅಲ್ಲದೆ, ಶಂಕರ್ ಒಂದ್ಕಡೆ 'ಇಂಡಿಯನ್ 2' ಹಾಗೂ ಇನ್ನೊಂದು ಕಡೆ 'ಗೇಮ್ ಚೇಂಜರ್' ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ತಡವಾಗುತ್ತೆ ಅನ್ನೋ ಸುದ್ದಿನೂ ಓಡಾಡಿತ್ತು.

ಆದ್ರೀಗ 'ಇಂಡಿಯನ್ 2' ಸಿನಿಮಾ ದಿಢೀರನೇ ಮೇನಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಮೇ 16 ಅಥವಾ ಮೇ 30ರಂದು ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಅನ್ನುವ ಸುದ್ದಿ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆಯಿದೆ. ಹಾಗೇ ಐಪಿಎಲ್ ಸೀಸನ್ ಅನ್ನು ಮುಗಿದ ಕೂಡಲೇ ಬಿಡುಗಡೆ ಮಾಡಬೇಕು ಅನ್ನೋದು ಸದ್ಯದ ಪ್ಲ್ಯಾನ್. ಇಷ್ಟೇ ಅಲ್ಲದೆ, ತಮಿಳಿನ ಪ್ರಮುಖ ಸಿನಿಮಾಗಳು ಮುಂದೂಡಲ್ಪಟ್ಟಿದ್ದರಿಂದ 'ಇಂಡಿಯನ್ 2' ಮೇ ತಿಂಗಳಲ್ಲಿ ರಿಲೀಸ್‌ಗೆ ಮುಂದಾಗಿದೆ. ಶೀಘ್ರದಲ್ಲಿಯೇ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಲಿದೆ ಅನ್ನೋ ಸುದ್ದಿ ಹಬ್ಬಿದೆ.

ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಮಲ್ ಹಾಸನ್ ನಾಯಕನಾಗಿದ್ದರೆ, ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಜೊತೆಗೆ ದೊಡ್ಡ ತಾರಾಗಣವೇ 'ಇಂಡಿಯನ್ 2' ಸಿನಿಮಾದಲ್ಲಿದೆ. 'ವಿಕ್ರಂ' ಬಳಿಕ ಕಮಲ್‌ ಹಾಸನ್ ನಟಿಸುತ್ತಿರುವ 'ಇಂಡಿಯನ್ 2' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಶಂಕರ್ ನಿರ್ದೇಶನದ ಸಿನಿಮಾ ಆಗಿದ್ದರಿಂದ ಫ್ಯಾನ್ಸ್ ಕಾದು ಕೂತಿದ್ದಾರೆ.

More from Filmibeat

English summary
Kamal Haasan director Shankar Movie Indian 2 Releasing on May 16th Or May 30th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X