»   » ಹಾಲಿವುಡ್ ಗೂ ಹೋಗ್ತಿದ್ದಾರೆ 'ರಾಜು ಕನ್ನಡ ಮೀಡಿಯಂ'!

ಹಾಲಿವುಡ್ ಗೂ ಹೋಗ್ತಿದ್ದಾರೆ 'ರಾಜು ಕನ್ನಡ ಮೀಡಿಯಂ'!

Posted By:
Subscribe to Filmibeat Kannada

'ಫಸ್ಟ್ Rank ರಾಜು' ಖ್ಯಾತಿಯ ನಟ ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿ ಟ್ರೆಂಡಿಂಗ್ ನಲ್ಲಿ ವೀಕ್ಷಣೆ ಪಡೆಯುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮುಂಚೆಯೇ ಚಿತ್ರತಂಡದ ಕಡೆಯಿಂದ ಇಂಟೆರೆಸ್ಟಿಂಗ್ ಸುದ್ದಿಯೊಂದು ಈಗ ಹರಿದಾಡುತ್ತಿದೆ.[100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?]

ಈ ಸುದ್ದಿ ಹೆಚ್ಚಾಗೆ ಎಲ್ಲರಿಗೂ ಆಸಕ್ತಿ ಮೂಡಿಸಿದರು ಅಚ್ಚರಿ ಇಲ್ಲಾ.. ಯಾಕಂದ್ರೆ.. ರ್ಯಾಂಕ್ ರಾಜುವಿನ 'ರಾಜು ಕನ್ನಡ ಮೀಡಿಯಂ' ಚಿತ್ರದ ಟ್ರೈಲರ್ ಈಗ ಹಾಲಿವುಡ್ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆಯಂತೆ. ಚಿಕಾಗೋ, ವಾಷಿಂಗ್ಟನ್ ಡಿಸಿ, ಅಟ್ಲಾಂಟ, ಲಾಸ್ ಏಂಜಲೀಸ್ ಅಲ್ಲದೆ ಇತರೆ ಪ್ರದೇಶಗಳ ಒಟ್ಟಾರೆ 15 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರದ ನಿರ್ದೇಶಕ ನರೇಶ್ ಕುಮಾರ್ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರಂತೆ.

 'Raju Kannada Medium' movie trailer releasing in Hollywood Theatres

ಕಾಮಿಡಿ ಸಿನಿಮಾ ಗಳು ಯಾವಾಗಲು ಟ್ರೆಂಡಿಂಗ್ ನಲ್ಲಿರುತ್ತವೆ. ಹೆಚ್ಚು ಮನರಂಜನೆ ನೀಡುವ ಸಿನಿಮಾಗಳು ಇಂಗ್ಲೀಷ್ ಸಬ್‌ ಟೈಟಲ್ ನಲ್ಲಿ ಇದ್ದರಂತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. 'ಫಸ್ಟ್ Rank ರಾಜು' ಖ್ಯಾತಿಯ ನಿರ್ದೇಶಕ ನರೇಶ್ ಅವರು ತಮ್ಮ ಎರಡನೇ ಸಿನಿಮಾ 'ರಾಜು ಕನ್ನಡ ಮೀಡಿಯಂ' ನಲ್ಲೂ ಹೆಚ್ಚು ಕಾಮಿಡಿಗೆ ಒತ್ತು ಕೊಟ್ಟಿರುವುದರಿಂದ, ಈ ಚಿತ್ರದ ಟ್ರೈಲರ್ ರಿಲೀಸ್ ಗೆ ಭಾರತೀಯ ಮೂಲದ ಅಮೆರಿಕದವರು ಇಂಟೆರೆಸ್ಟ್‌ ತೋರಿಸಿದ್ದಾರಂತೆ.['ಫಸ್ಟ್ Rank ರಾಜು' ಈಗ 'ಕನ್ನಡ ಮೀಡಿಯಂ ರಾಜು'!]

 'Raju Kannada Medium' movie trailer releasing in Hollywood Theatres

ಅಮೆರಿಕದಲ್ಲಿರುವ ಕನ್ನಡ ಅಭಿಮಾನಿಗಳ ಬೇಡಿಕೆಗೆ ಒಲವು ತೋರಿ, 'ರಾಜು ಕನ್ನಡ ಮೀಡಿಯಂ' ನಿರ್ಮಾಪಕ ಕೆ.ಎ.ಸುರೇಶ್ ಮತ್ತು ನಿರ್ದೇಶಕ ಸ್ಪೆಷಲ್ ಟ್ರೈಲರ್ ರೆಡಿ ಮಾಡಿದ್ದಾರಂತೆ. ಇನ್ನೂ ಟ್ರೈಲರ್ ನೋಡಿ ಏನಾದ್ರು ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆದ್ರೆ ಸಿನಿಮಾನು ರಿಲೀಸ್ ಮಾಡಬಹುದೆನೋ.... ಕಾದು ನೋಡಬೇಕಿದೆ.

English summary
Actor Gurunandan's starrer 'Raju Kannada Medium' movie will hit the theatre on March. The film is being written and directed by Naresh Kumar who had earlier directed 'Ist Rank Raju'. Now Producer K A Suresh and director Naresh releasing 'Raju Kannada Medium' movie trailer in Hollywood Theatres.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X