100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?
'ಫಸ್ಟ್ Rank ರಾಜು' ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಆದ್ರೆ ರಾಜು ಈಗ ಯಾವ Rank ಮೇಲೂ ತಲೆ ಕೆಡಿಸಿಕೊಂಡಿಲ್ಲ. ಅಪ್ಪಟ 'ಕನ್ನಡ ಮೀಡಿಯಂ ರಾಜು' ಆಗಿ 'ಫಸ್ಟ್ Rank ರಾಜು' ಗಿಂತ ಪ್ರೇಕ್ಷಕರನ್ನು ಹೆಚ್ಚು ನಗಿಸಲಿದ್ದಾರೆ.['ಫಸ್ಟ್ Rank ರಾಜು' ಈಗ 'ಕನ್ನಡ ಮೀಡಿಯಂ ರಾಜು'!]
ಫಿಲ್ಮೀಬೀಟ್ ನಲ್ಲಿ ಇತ್ತೀಚೆಗೆ ತಾನೆ 'ರಾಜು ಕನ್ನಡ ಮೀಡಿಯಂ' ಟೈಟಲ್' ಬಗ್ಗೆ ಮಾಹಿತಿ ನೀಡಿದ್ವಿ. ಟೈಟಲ್ ಫಿಕ್ಸ್ ಆದ ನಂತರ ಸಿನಿಮಾ ಚಿತ್ರೀಕರಣ ಬರದಿಂದ ಸಾಗಿದೆ. ಆದ್ರೆ ಸದ್ಯಕ್ಕೆ ಚಿತ್ರತಂಡ ಅಫೀಶಿಯಲ್ ಟೀಸರ್ ಬಿಡುಗಡೆ ಮಾಡಿದೆ. ನ್ಯಾಚುರಲ್ ಡೈಲಾಗ್ ಗಳ ಮೂಲಕ ಮತ್ತೆ 100% ಮನರಂಜನೆ ನೀಡುವ ಮನ್ಸೂಚನೆ ನೀಡಿರುವ ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಮತ್ತು ಟೀಸರ್ ವಿಶೇಷತೆ ಏನು ನೋಡೋಣ ಬನ್ನಿ..

ಕನ್ನಡ ಮೀಡಿಯಂ ರಾಜು
'ಫಸ್ಟ್ Rank ರಾಜು' ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಸಖತ್ ಮನರಂಜನೆ ನೀಡಿದ ನಟ ಗುರುನಂದನ್ ಈಗ 'ರಾಜು ಕನ್ನಡ ಮೀಡಿಯಂ' ಆಗಿ ಮತ್ತೆ ನಗಿಸಲು ಬರುತ್ತಿದ್ದಾರೆ.[ಅಲ್ರೀ..'ರಾಜು'ಗೂ 'ರಂಗಿತರಂಗ'ಕ್ಕೂ ಏನ್ರೀ ಸಂಬಂಧ..!]

ಇಂಗ್ಲೀಷ್ ತಲೆಗೋಗಲ್ಲ. ವೇಗದ ಕನ್ನಡ ಹೃದಯ ಮುಟ್ಟುತ್ತೆ
'ರಾಜು ಕನ್ನಡ ಮೀಡಿಯಂ' ಇಂಗ್ಲೀಷ್ ಮಾತನಾಡಲೇ ಬೇಕಾದ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರೂ, ಅಲ್ಲಿನ ಉದ್ಯೋಗಿಗಳಿಗೆ ಕನ್ನಡ ಕಲಿಸುವ ರಾಜು ಆಗಿ ಮನರಂಜಿಸುವ ಮುನ್ಸೂಚನೆ ನೀಡಿದ್ದಾರೆ.

'ರಾಜು ಕನ್ನಡ ಮೀಡಿಯಂ' ನಲ್ಲಿ ಯಾರೆಲ್ಲಾ ಇದ್ದಾರೆ..
'ಫಸ್ಟ್ Rank ರಾಜು' ಚಿತ್ರದ ಯಶಸ್ಸಿಗೆ ಸಾಥ್ ಕೊಟ್ಟಿದ್ದ ನಟ, ನಿರ್ದೇಶಕ, ಸಂಗೀತ ನಿರ್ದೇಶಕರೂ ಆದ ಕಾಮಿಡಿ ಕಿಂಗ್ ಸಾದು ಕೋಕಿಲ ಅವರು ಮತ್ತೆ ಗುರುನಂದನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇವರ ಜೊತೆಗೆ ಕುರಿ ಪ್ರತಾಪ್ ಸಹ ನಗಿಸಲಿದ್ದಾರೆ. ವಿಶೇಷ ಪಾತ್ರದಲ್ಲಿ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಖ್ಯಾತಿಯ ಹಿರಿಯ ನಟ ಚಂದ್ರಶೇಖರ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

'ರಾಜು ಕನ್ನಡ ಮೀಡಿಯಂ' ತೆರೆ ಮೇಲೆ ಯಾವಾಗ..
'ರಾಜು ಕನ್ನಡ ಮೀಡಿಯಂ' ಚಿತ್ರೀಕರಣ ಬರದಿಂದ ಸಾಗಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ.
ಟ್ರೀಸರ್
'ರಾಜು ಕನ್ನಡ ಮೀಡಿಯಂ' ಚಿತ್ರವೂ 'ಫಸ್ಟ್ Rank ರಾಜು' ಗಿಂತಲೂ ಹೆಚ್ಚು ಮನರಂಜನೆ ನೀಡುವ ಎಲ್ಲಾ ಮುನ್ಸೂಚನೆ ನೀಡಿದ್ದು ಈಗಾಗಲೇ ಚಿತ್ರದ ಟೀಸರ್ 2.8 ಲಕ್ಷಕ್ಕೂಹೆಚ್ಚು ವೀಕ್ಷಣೆ ಪಡೆದಿದೆ.


Click it and Unblock the Notifications











