»   » 'ಫಸ್ಟ್ Rank ರಾಜು' ಈಗ 'ಕನ್ನಡ ಮೀಡಿಯಂ ರಾಜು'!

'ಫಸ್ಟ್ Rank ರಾಜು' ಈಗ 'ಕನ್ನಡ ಮೀಡಿಯಂ ರಾಜು'!

Posted By:
Subscribe to Filmibeat Kannada

'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಹಾಗೂ ಆವಂತಿಕಾ ಶೆಟ್ಟಿ ಕಾಂಬಿನೇಷನ್ ನಲ್ಲಿ 'ರಾಜು ರಂಗಿತರಂಗ' ಎಂಬ ಹೊಸ ಚಿತ್ರವೊಂದು ಮೂಡಿಬರುತ್ತಿರುವುದು ಎಲ್ಲರಿಗೂ ಗೊತ್ತಿದೆ.

ಆದ್ರೀಗ, ಈ ಚಿತ್ರದ ಟೈಟಲ್ ನಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಇದಕ್ಕೆ ಕಾರಣ ಚಿತ್ರದ ನಿರ್ಮಾಪಕರು. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ದಿಢೀರ್ ಅಂತ ಶೀರ್ಷಿಕೆ ಬದಲಿಸಿದೆ.[ಅಲ್ರೀ..'ರಾಜು'ಗೂ 'ರಂಗಿತರಂಗ'ಕ್ಕೂ ಏನ್ರೀ ಸಂಬಂಧ..!]

ಈ ಮುಂಚೆ, 'ರಾಜು ರಂಗಿತರಂಗ' ಎಂಬ ಟೈಟಲ್ ಗೆ 'ಫಸ್ಟ್ Rank ಅಲ್ಲಾ', 'ಸೆಕೆಂಡ್ Rank ಅಲ್ಲಾ' ಎಂಬ ಅಡಿಬರಹವಿತ್ತು. ಇದೀಗ, ಕಥೆಗೆ ಈ ಟೈಟಲ್ ಸೂಕ್ತವಲ್ಲ ಎಂದು ಹೊಸ ಟೈಟಲ್ ಇಡಲಾಗಿದೆ.

'ರಾಜು ರಂಗಿತರಂಗ' ಟೈಟಲ್ ಬದಲಾವಣೆ

'ರಾಜು ರಂಗಿತರಂಗ' ಚಿತ್ರದ ಟೈಟಲ್ ಈಗ ಬದಲಾಗಿದೆ. 'ಫ‌ಸ್ಟ್ Rank ರಾಜು' ಸಿನಿಮಾ ಸಕ್ಸಸ್ ಆಗಿತ್ತು. ಆದ್ದರಿಂದ 'ರಾಜು' ಎಂಬ ಟೈಟಲ್ ಇಡಲಾಗಿತ್ತು. ಇನ್ನೂ ಈ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ. ಆವಂತಿಕಾ ಅಭಿನಯದ 'ರಂಗಿತರಂಗ' ಸೂಪರ್ ಹಿಟ್ ಆಗಿತ್ತು. ಹೀಗಾಗಿ 'ರಂಗಿತರಂಗ' ಸೇರಿಸಿ, 'ರಾಜು ರಂಗಿತರಂಗ' ಎಂದು ಅಂತಿಮಗೊಳಿಸಲಾಗಿತ್ತು. ಆದ್ರೆ, ಈಗ ಆ ಟೈಟಲ್ ಕೂಡ ಬದಲಾಗಿದೆ.['ರಂಗಿ' ಬೆಡಗಿ ಅವಂತಿಕಾಗೆ ಸಿಕ್ತು ಮತ್ತೊಂದು ಅವಕಾಶ]

'ಕನ್ನಡ ಮೀಡಿಯಂ ರಾಜು' ಅಂತ ಫಿಕ್ಸ್!

ಕಥೆಗೆ 'ರಾಜು ರಂಗಿತರಂಗ' ಟೈಟಲ್ ಸೂಕ್ತವಲ್ಲ ವೆಂದು ಈಗ 'ಕನ್ನಡ ಮೀಡಿಯಂ ರಾಜು' ಎಂದು ಶೀರ್ಷಿಕೆ ಬದಲಿಸಲಾಗಿದೆ. ಈಗ ಹಂಡ್ರೆಡ್ ಪರ್ಸೆಂಟ್ ಈ ಕಥೆಗೆ ಈ ಶೀರ್ಷಿಕೆ ಹೊಂದಿಕೊಳ್ಳುತ್ತಂತೆ.

100 % ಕಾಮಿಡಿ ಸಭ್ಜೆಕ್ಟ್!

ಇದೊಂದು ಲವ್‌ ಕಂ ಕಾಮಿಡಿ ಸಿನಿಮಾ ಆಗಿದ್ದು, ಫ್ಯಾಮಿಲಿ ಆಡಿಯನ್ಸ್ ಗೆ ಇಷ್ಟವಾಗುವಂತಹ ಕಥೆಯಂತೆ.['ರಾಜು'ಗೆ 'ಶಿವಲಿಂಗ' ಸುರೇಶ್ ಹೊಸ ಸಿನಿಮಾ ಮಾಡ್ತವ್ರೇ]

ಸಕ್ಸಸ್ ಫುಲ್ ತಾರೆಯರು!

ಗುರುನಂದನ್ ಹಾಗೂ ಆವಂತಿಕಾ ಶೆಟ್ಟಿ ಇಬ್ಬರು ಸಕ್ಸಸ್ ಫುಲ್ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನ ನಿರ್ವಹಿಸಿದ್ದವರು. 'ಫಸ್ಟ್ Rank ರಾಜು' ಚಿತ್ರದಲ್ಲಿ ಗುರುನಂದನ್ ನಾಯಕರಾಗಿದ್ದರು. 'ರಂಗಿತರಂಗ' ಚಿತ್ರದಲ್ಲಿ ಆವಂತಿಕಾ ಶೆಟ್ಟಿ ನಾಯಕಿಯಾಗಿದ್ದರು. ಈಗ ಇವರಿಬ್ಬರು ಒಂದೇ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

'ಫಸ್ಟ್ Rank ರಾಜು' ಚಿತ್ರದ ನಿರ್ದೇಶಕ!

ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ನರೇಶ್ ಕುಮಾರ್. ಈ ಹಿಂದೆ ಫಸ್ಟ್ Rank ರಾಜು ಚಿತ್ರಕ್ಕೆ ನರೇಶ್ ಆಕ್ಷನ್ ಕಟ್ ಹೇಳಿದ್ದರು.

ಯಾವಾಗ ರಿಲೀಸ್!

ಅಂದ್ಹಾಗೆ, 'ಕನ್ನಡ ಮೀಡಿಯಂ ರಾಜು' ಚಿತ್ರಕ್ಕೆ ಕೆ.ಎ.ಸುರೇಶ್ ಬಂಡವಾಳ ಹಾಕಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರವನ್ನ ಸುರೇಶ್ ನಿರ್ಮಾಣ ಮಾಡಿದ್ದರು. ಸದ್ಯ, 'ಕನ್ನಡ ಮೀಡಿಯಂ ರಾಜು' ಬಹುತೇಕ ಚಿತ್ರೀಕರಣ ಮುಗಿಸಿದ್ದು, ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸಬೇಕಿದೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ, ಶೇಖರ್‌ಚಂದ್ರ ಛಾಯಾಗ್ರಹಣವಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಮುಂದಿನ ತಿಂಗಳು ತೆರೆಗೆ ಬರುವ ಯೋಚನೆಯಲ್ಲಿದೆ ಚಿತ್ರತಂಡ

Read more about: title, sandalwood, ಕನ್ನಡ
English summary
Actor Gurunandan's stareer 'Raju Rangitaranga' movie changed his titled as a 'Raju Kannada Medium'. The film is being written and directed by Naresh Kumar who had earlier directed 'Ist Rank Raju'. Avantika Shetty is the heroine for Gurunandan and produced by K A Suresh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada