Salaar vs Dunki: ಮತ್ತೆ ಶಾರುಖ್ ಖಾನ್‌ಗೆ ಟಕ್ಕರ್ ಕೊಡಲು ಪ್ರಶಾಂತ್ ನೀಲ್ ಮಾಸ್ಟರ್ ಪ್ಲ್ಯಾನ್: ಏನಿದು ವಿಷ್ಯ?
2023 ಕೊನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಬಾಕ್ಸಾಫೀಸ್ ಕಾದಾಟಕ್ಕೆ ಇಳಿಯುತ್ತಿವೆ. ಒಂದು ಬಾಕ್ಸಾಫೀಸ್ ಕಿಂಗ್ ಶಾರುಖ್ ಖಾನ್ ನಟನೆಯ 'ಡಂಕಿ'. ಇನ್ನೊಂದು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ 'ಸಲಾರ್'. ಎರಡೂ ಸಿನಿಮಾಗಳೂ ಒಟ್ಟಿಗೆ ರಿಲೀಸ್ ಆಗುತ್ತಿವೆ. ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದಂತೆ 'ಸಲಾರ್' ಫುಲ್ ಆಕ್ಟೀವ್ ಆಗಿದೆ.
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಚೊಚ್ಚಲ ಸಿನಿಮಾವಿದು. ಸತತ ಸೋಲುಗಳನ್ನು ಕಂಡಿರೋ ಪ್ರಭಾಸ್‌ಗೆ ಈ ಸಿನಿಮಾದಿಂದ ಗೆಲುವು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇತ್ತ 'ಕೆಜಿಎಫ್ 2' ಯಶಸ್ಸನ್ನು ಉಳಿಸಿಕೊಳ್ಳಬೇಕಾಗಿರೋ ಒತ್ತಡದಲ್ಲಿ ಪ್ರಶಾಂತ್ ನೀಲ್ ಇದ್ದಾರೆ. ಇಬ್ಬರಿಗೂ 'ಸಲಾರ್' ಅನ್ನೋದು ದೊಡ್ಡ ಪರೀಕ್ಷೆಯೇ.

ಟಾಲಿವುಡ್‌ನಲ್ಲಿ 'ಸಲಾರ್' ಸಿನಿಮಾಗೆ ಸಂಬಂಧಿಸಿದಂತೆ ಸುದ್ದಿಯೊಂದು ಓಡಾಡುತ್ತಿದೆ. ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಜೋಡಿಯ 'ಡಂಕಿ' ಎದುರು ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಫೈಟ್ ಜೋರಾಗಿಯೇ ಇರುತ್ತೆ. ಹೀಗಾಗಿ ಪ್ರಶಾಂತ್ ನೀಲ್ ಮಾಸ್ಟರ್ ಪ್ಲ್ಯಾನ್ ಮಾಡಿಟ್ಟುಕೊಂಡಿದ್ದಾರೆ ಅಂತ ವರದಿ ಮಾಡಿವೆ. ಪ್ರಶಾಂತ್ ನೀಲ್ ಮಾಡಿರೋ ಮಾಸ್ಟರ್ ಪ್ಲ್ಯಾನ್ ಏನದು? ತಿಳಿಯಲು ಮುಂದೆ ಓದಿ.
ಡಿಸೆಂಬರ್‌ನಲ್ಲಿ 'ಸಲಾರ್' vs 'ಡಂಕಿ'
ಶಾರುಖ್ ಖಾನ್ ಸೋಲಿನಿಂದ ಹೊರಬಂದಿದ್ದಾರೆ. 'ಪಠಾಣ್' ಹಾಗೂ 'ಜವಾನ್' ಅಂತಹ 1000 ಕೋಟಿ ರೂಪಾಯಿಯ ಎರಡು ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ಮತ್ತೆ ಯಶಸ್ಸಿನ ಉತ್ತುಂಗದಲ್ಲಿರುವ ಶಾರುಖ್ ಮತ್ತೊಂದು ಸಿನಿಮಾ 'ಡಂಕಿ' ಡಿಸೆಂಬರ್ 22ಕ್ಕೆ ಬಿಡುಗಡೆಯಾಗಲಿದೆ. ಆದರೆ, 'ಸಲಾರ್' ಸಿನಿಮಾಗೆ ಇರುವಷ್ಟು ಕ್ರೇಜ್ 'ಡಂಕಿ'ಗೆ ಇನ್ನು ಹುಟ್ಟಿಕೊಂಡಿಲ್ಲ. ಆದರೂ, ಡಿಸೆಂಬರ್ 22ಕ್ಕೆ ಮತ್ತೆ ಶಾರುಖ್ ಹಾಗೂ ಪ್ರಶಾಂತ್ ನೀಲ್ ಸಿನಿಮಾಗಳು ಮುಖಾಮುಖಿಯಾಗಲಿವೆ.
ಶಾರುಖ್ 'ಜೀರೋ' ಮಾಡಿದ್ದ 'ಕೆಜಿಎಫ್'
ಬಾಲಿವುಡ್ ಕಿಂಗ್‌ಗೆ ಟಕ್ಕರ್ ಕೊಟ್ಟಿದ್ದು 'ಕೆಜಿಎಫ್ ಚಾಪ್ಟರ್ 1' ಅನ್ನೋದು ಗೊತ್ತಿದೆ. ಶಾರುಖ್ ನಟನೆಯ 'ಜೀರೊ' ಸಿನಿಮಾದ ಎದುರೇ 'ಕೆಜಿಎಫ್' ರಿಲೀಸ್ ಆಗಿತ್ತು. ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಬಾಲಿವುಡ್‌ನಲ್ಲೇ ಕಿಂಗ್ ಖಾನ್ ಅನ್ನು ಅಕ್ಷರಶ: 'ಜೀರೋ' ಮಾಡಿತ್ತು. ಈಗ ಮತ್ತೆ ಪ್ರಶಾಂತ್ ನೀಲ್ 'ಸಲಾರ್' ಮೂಲಕ ಶಾರುಖ್‌ಗೆ ಟಕ್ಕರ್ ಕೊಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯೊಂದು ಓಡಾಡುತ್ತಿದೆ.

'ಸಲಾರ್' ಪ್ರಶಾಂತ್ ನೀಲ್ ಮಾಸ್ಟರ್ ಪ್ಲ್ಯಾನ್
ಶಾರುಖ್ ಖಾನ್ 'ಡಂಕಿ'ಗೆ ಟಕ್ಕರ್ ಕೊಡುವುದಕ್ಕೆ ಪ್ರಶಾಂತ್ ನೀಲ್ ಎರಡೆರಡು ಟ್ರೈಲರ್‌ಗಳನ್ನು ರಿಲೀಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಅಕ್ಟೋಬರ್ 23ರಂದು ಪ್ರಭಾಸ್ ಹುಟ್ಟುಹಬ್ಬವಿರುವುದರಿಂದ ಅಂದು 'ಸಲಾರ್' ಸಿನಿಮಾದ ಮೊದಲ ಟ್ರೈಲರ್ ರಿಲೀಸ್ ಆಗುತ್ತೆ ಎನ್ನಲಾಗಿದೆ. ಹಾಗೇ ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಮತ್ತೊಂದು ಟ್ರೈಲರ್ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಇಬ್ಬರೂ ಸೋಲದ ಸರದಾರರು
ಪ್ರಶಾಂತ್ ನೀಲ್ ಹಾಗೂ 'ಡಂಕಿ' ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಇದೂವರೆಗೂ ಸೋಲನ್ನೇ ಕಂಡಿಲ್ಲ. ಇದೂವರೆಗೂ 'ಮುನ್ನಭಾಯ್ ಎಂಬಿಬಿಎಸ್', ಲಗೇ ರಹೀ ಮುನ್ನಭಾಯ್, 3 ಈಡಿಯಟ್ಸ್, ಪಿಕೆ ಹಾಗೂ ಸಂಜು ಒಟ್ಟು ಐದು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವೆಲ್ಲವೂ ಮಾಸ್ಟರ್ ಪೀಸ್ ಅಂತ ಸಾಬೀತಾಗಿವೆ. ಇತ್ತ ಪ್ರಶಾಂತ್ ನೀಲ್ ನಿರ್ದೇಶನದ ಮೂರು ಸಿನಿಮಾಗಳು 'ಉಗ್ರಂ', 'ಕೆಜಿಎಫ್' ಹಾಗೂ 'ಕೆಜಿಎಫ್ ಚಾಪ್ಟರ್ 2' ಸೋತಿಲ್ಲ. ಆದರೆ, ಈ ಬಾರಿ ಯಾರಾದರೂ ಒಬ್ಬರು ಸೋಲುತ್ತಾರಾ? ಇಲ್ಲ ಇಬ್ಬರೂ ಗೆಲ್ಲುತ್ತಾರಾ? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.


Click it and Unblock the Notifications











