Trisha: ಕೊನೆಗೂ ನಯನತಾರಾ ಹಿಂದಿಕ್ಕಿದ ತ್ರಿಶಾ.. ಕೀರ್ತಿ ಸುರೇಶ್, ರಶ್ಮಿಕಾ ಸಂಭಾವನೆ ಲೆಕ್ಕಕ್ಕೆ ಇಲ್ಲ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇಬ್ಬರು ನಟಿಯರ ನಡುವೆ ಭಾರೀ ಪೈಪೋಟಿ ಇರೋದು ಗೊತ್ತಿರೋ ವಿಷಯವೇ. ಅದು ಮತ್ಯಾರೂ ಅಲ್ಲ. ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ತ್ರಿಶಾ ಕೃಷ್ಣನ್.

ಚಿತ್ರರಂಗಕ್ಕೆ ನಯನತಾರಾಗಿಂತ ತ್ರಿಶಾ ಮೊದಲೇ ಎಂಟ್ರಿ ಕೊಟ್ಟಿದ್ದರೂ, ಬಳಿಕ ಅತೀ ಹೆಚ್ಚು ಬೇಡಿಕೆಯ ನಟಿಯಾಗಿದ್ದು ನಯನತಾರಾ. ಹೀಗಾಗಿ ಇಬ್ಬರ ನಡುವೆ ನಂ 1 ಪಟ್ಟಕ್ಕಾಗಿ ನಿರಂತರವಾಗಿ ಪೈಪೋಟಿ ನಡೆಯುತ್ತಲೇ ಇತ್ತು.

ಸಾಮಾನ್ಯವಾಗಿ ಮದುವೆ ಬಳಿಕ ನಟಿಯರಿಗೆ ಬೇಡಿಕೆ ಕಡಿಮೆ ಆಗುತ್ತೆ. ಆದರೆ, ನಯನತಾರಾ ವಿಷಯದಲ್ಲಿ ಹಾಗಲಿಲ್ಲ. ಮದುವೆ ಬಳಿಕವೂ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಫರ್ ಸಿಗುತ್ತಿದೆ. ಅದಕ್ಕಾ ಸಾಕ್ಷಿನೇ 'ಜವಾನ್'. ಆದ್ರೀಗ ಸಂಭಾವನೆ ವಿಷಯದಲ್ಲಿ ಮತ್ತೆ ನಯನತಾರಾರನ್ನು ಕೃಷ್ಣ ಸುಂದರಿ ತ್ರಿಶಾ ಹಿಂದಿಕ್ಕಿದ್ದಾರೆ ಅನ್ನೋ ಸುದ್ದಿ ಕಾಲಿವುಡ್‌ನಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಆ ಸಿನಿಮಾ ಯಾವುದು? ಸಂಭಾವನೆ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ..

nayanthara,-trisha,-keerthy-suresh,-rashmika

ಕಮಲ್ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್

ತ್ರಿಶಾ ವಯಸ್ಸು 40 ದಾಟಿದೆ. ಹೀಗಿದ್ದರೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ಜೊತೆ ನಟಿಸುತ್ತಿರುವ 'ಲಿಯೋ' ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಇದರ ಜೊತೆ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾಗೂ ತ್ರಿಶಾ ಕೃಷ್ಣನ್ ಆಯ್ಕೆ ಆಗಿದ್ದಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಅದೇ ಸಿನಿಮಾ ತ್ರಿಶಾ ಪಡೆದ ಸಂಭಾವನೆ ಎಷ್ಟು ಅನ್ನೋ ಬಗ್ಗೆ ಕಾಲಿವುಡ್ ಮಂದಿ ಚರ್ಚೆ ಮಾಡುತ್ತಿದ್ದಾರೆ.

Anushka Shetty: ತ್ರಿಶಾ ಮಾಡಿದ ಪಾತ್ರ ತಿರಸ್ಕರಿಸಿದ್ದ ಅನುಷ್ಕಾ ಶೆಟ್ಟಿ..? 2 ಕಾರಣಗಳಿಗೆ ಮಣಿರತ್ನಂ ಸಿನಿಮಾನೇ ರಿಜೆಕ್ಟ್?

ನಯನತಾರಾ ಸಂಭಾವನೆನೂ ಲೆಕ್ಕಕ್ಕಿಲ್ಲ

ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ದಕ್ಷಿಣ ಭಾರತದ ಸಿನಿಮಾಗೆ ಕಮ್ಮಿ ಅಂದರೂ 5 ರಿಂದ 6 ಕೋಟಿ ರೂಪಾಯಿಯಷ್ಟು ಸಂಭಾವನೆ ಪಡೆಯುತ್ತಾರೆ. ಅದೇ ತ್ರಿಶಾ 3 ರಿಂದ 4 ಕೋಟಿ ಸಂಭಾವನೆ ಸಿಗುತ್ತಿದೆ ಎಂದು ವರದಿಯಾಗಿತ್ತು. ಆದ್ರೀಗ ಕಮಲ್ ಹಾಸನ್ ಜೊತೆ ನಟಿಸುತ್ತಿರುವ ಸಿನಿಮಾಗೆ ತ್ರಿಶಾ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಈ ಮೂಲಕ ನಯನತಾರಾ 'ಜವಾನ್‌' ಪಡೆದ ಸಂಭಾವನೆಯನ್ನೂ ಮೀರಿಸಿ ನಂಬರ್ 1 ಪಟ್ಟಕ್ಕೆ ಏರಿದ್ದಾರೆ ಅನ್ನೋದು ಗುಸು ಗುಸು.

ನಯನತಾರಾ 'ಜವಾನ್' ಸಂಭಾವನೆ ಎಷ್ಟು?

ಇತ್ತೀಚೆಗಷ್ಟೇ ಶಾರುಖ್ ಖಾನ್ ಜೊತೆ ನಟಿಸಿದ 'ಜವಾನ್' ರಿಲೀಸ್ ಸಾವಿರ ಕೋಟಿ ಕ್ಲಬ್ ಸೇರಿದೆ. ನಯನತಾರಾ ಅಪಿಯರೆನ್ಸ್ ಬಾಲಿವುಡ್ ಮಂದಿಗೂ ಇಷ್ಟ ಆಗಿತ್ತು. ಆದರೆ, ಈ ಸಿನಿಮಾದಲ್ಲಿ ನಟಿಸಲು ನಯನತಾರಾ 10 ರಿಂದ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ವರದಿ ಮಾಡಲಾಗಿತ್ತು. ಇದೇ ಲೆಕ್ಕಚಾರವನ್ನು ಇಟ್ಟುಕೊಂಡು ತ್ರಿಶಾ ಕೊನೆಗೂ ತನ್ನ ಕಾಂಪಿಟೇಟರ್‌ ಅನ್ನು ಸಂಭಾವನೆಯಲ್ಲಿ ಹಿಂದಿಕ್ಕಿದ್ದಾರೆಂದು ಕಾಲಿವುಡ್ ಹೇಳುತ್ತಿದ್ದಾರೆ.

nayanthara,-trisha,-keerthy-suresh,-rashmika

ಕೀರ್ತಿ ಸುರೇಶ್, ರಶ್ಮಿಕಾ ಲೆಕ್ಕಕ್ಕಿಲ್ಲ

ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿರುವ ಮತ್ತಿಬ್ಬರು ನಟಿಯರೆಂದರೆ, ಕೀರ್ತಿ ಸುರೇಶ್ ಹಾಗೂ ರಶ್ಮಿಕಾ ಮಂದಣ್ಣ. ಕೀರ್ತಿ ಸುರೇಶ್‌ಗೆ ಸಾಮಾನ್ಯವಾಗಿ ಒಂದು ಸಿನಿಮಾಗೆ 2 ಕೋಟಿ ಸಂಭಾವನೆ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಒಂದು ಕೋಟಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದೇ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ 'ಎನಿಮಲ್'ನಲ್ಲಿ ನಟಿಸುವುದಕ್ಕಾಗಿ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

More from Filmibeat

English summary
Trisha 12 crore Remuneration For movie beat Nayanthara, Keerthy Suresh, Rashmika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X