»   » ದೀಪಿಕಾ ಳ "xxx" ಚಿತ್ರದಿಂದ ಭಾರತೀಯರಿಗೆ ಬಿಗ್ ಆಫರ್

ದೀಪಿಕಾ ಳ "xxx" ಚಿತ್ರದಿಂದ ಭಾರತೀಯರಿಗೆ ಬಿಗ್ ಆಫರ್

Posted By:
Subscribe to Filmibeat Kannada

ಬಾಲಿವುಡ್ ಲವ್ಲಿ ಲೇಡಿ ಡಿಪ್ಪಿ ದೀಪಿಕಾ ಪಡುಕೋಣೆ ಹೊಸ ವರ್ಷಕ್ಕೆ ಸಿನಿ ಪ್ರಿಯರಿಗೆ ನೀಡುತ್ತಿರುವ ಉಡುಗೊರೆ ಅಂದ್ರೆ ತನ್ನ ಹಾಲಿವುಡ್ ಸಿನಿಮಾ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ತೆರೆ ಕಾಣುತ್ತಿರುವುದು. ಹಾಲಿವುಡ್ ಸಿನಿಮಾದಲ್ಲಿ ಆಕ್ಟ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅಂತರರಾಷ್ಟ್ರೀಯ ಸಿನಿಮಾ ಕ್ಷೇತ್ರದಲ್ಲಿ ಭಾರತದ ಹೆಮ್ಮೆಯನ್ನು ಇನ್ನಷ್ಟು ಅಧಿಕ ಗೊಳಿಸಲಿದ್ದಾರೆ.

Deepika’s xxx Return of Xander Cage to release in India First

'ಫಾಸ್ಟ್‌ ಅಂಡ್ ಫ್ಯೂರಿಯಸ್' ಖ್ಯಾತ ನಟ ವಿನ್ ಡೀಸೆಲ್ ಜೊತೆ ದೀಪಿಕಾ ಅಭಿನಯಿಸಿರುವ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರ ತಂಡ ಭಾರತೀಯರಿಗೆ ಒಂದು ಕುತೂಹಲಕಾರಿ ಮಾಹಿತಿ ನೀಡಿದೆ. ಹಾಲಿವುಡ್ ಮತ್ತು ಬಾಲಿವುಡ್ ಸಿನಿ ಪ್ರಿಯರ ಬಹುನಿರೀಕ್ಷಿತ ಸಿನಿಮಾ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಪ್ರಪಂಚದ ಇತರೆ ದೇಶಗಳಿಗಿಂತ ಮೊದಲು ಭಾರತದಲ್ಲೇ ರಿಲೀಸ್ ಆಗುತ್ತಿದೆಯಂತೆ. ಈ ಸ್ಫೋಟಕ ಮಾಹಿತಿಯನ್ನು ಸ್ವಂತಃ ದೀಪಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಇಂದು(28/12/2016) ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.[ದೀಪಿಕಾ ಡೇರಿಂಗ್-ಡ್ಯಾಶಿಂಗ್ ಲುಕ್‌ ನಲ್ಲಿ xxx ಹೊಸ ಪೋಸ್ಟರ್ ರಿಲೀಸ್‌]

Deepika’s xxx Return of Xander Cage to release in India First

ದೀಪಿಕಾ ಪಡುಕೋಣೆ ತಮ್ಮ ಟ್ವಿಟರ್ ನಲ್ಲಿ ಥ್ರಿಲ್ಲಿಂಗ್ ಅನೌನ್ಸ್ #xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್ ಸಿನಿಮಾ ಇತರೆ ದೇಶಗಳಿಗಿಂತ ಮೊದಲು ಭಾರತದಲ್ಲಿ ಜನವರಿ 14 2017 ರಿಲೀಸ್ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೂ ಡಿಂಪಿಯ ಮೊದಲ ಹಾಲಿವುಡ್‌ ಸಿನಿಮಾವೇ ಮೊದಲು ಭಾರತದಲ್ಲಿ ಬಿಡುಗಡೆ ಗೊಳ್ಳುತ್ತಿರುವುದು ಒಂದು ರೀತಿಯಲ್ಲಿ ಹಾಲಿವುಡ್‌ ಕಡೆಯಿಂದ ಬಂದ ಸ್ಫೋಟಕ ಮಾಹಿತಿಯೇ ಆಗಿದೆ. ಇತ್ತೀಚೆಗೆ ತಾನೆ ಚಿತ್ರ ತಂಡ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಗೊಳಿಸಿತ್ತು.[ದೀಪಿಕಾ ಪಡುಕೋಣೆ ಬಗ್ಗೆ ವಿನ್ ಡೀಸೆಲ್ ಬಾಯಲ್ಲಿ ಎಂತಹ ಮಾತು!]

Deepika’s xxx Return of Xander Cage to release in India First

ಡಿ.ಜೆ. ಕಾರಸೊ ಆಕ್ಷನ್‌-ಕಟ್ ಹೇಳಿರುವ 'xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್‌' ಸಿನಿಮಾಗೆ, ಜೊ ರಾತ್, ಜೆಫ್ ಕ್ರಿಸ್ಚೆನ್ಬಾಂ, ವಿನ್‌ ಡಿಸೇಲ್ ಮತ್ತು ಸಮಂತಾ ವಿನ್ಸೆಂಟ್ ಹಣ ಹೂಡಿದ್ದಾರೆ. ಸಿನಿಮಾ ಜನವರಿ 20, 2017 ರಂದು ತೆರೆಕಾಣಲಿದೆ.[XXX ಟ್ರೈಲರ್: ಗ್ಲಾಮರ್-ಡೇರಿಂಗ್-ಡ್ಯಾಶಿಂಗ್ ಲುಕ್ ನಲ್ಲಿ ದೀಪಿಕಾ]

English summary
Deepika Padukone shared the release date of her Hollywood debut ‘xXx Return of Xander Cage’ on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada