»   » ದೀಪಿಕಾ ಪಡುಕೋಣೆ ಬಗ್ಗೆ ವಿನ್ ಡೀಸೆಲ್ ಬಾಯಲ್ಲಿ ಎಂತಹ ಮಾತು!

ದೀಪಿಕಾ ಪಡುಕೋಣೆ ಬಗ್ಗೆ ವಿನ್ ಡೀಸೆಲ್ ಬಾಯಲ್ಲಿ ಎಂತಹ ಮಾತು!

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಕಾಸ್ಟ್ಲೀ ನಟಿಯಾಗಿರೋ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅವರು 'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಎಂಬ ಹಾಲಿವುಡ್ ಚಿತ್ರದ ಮೂಲಕ, ಹಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆ ಅವರು ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಂಡಿದ್ದಾರೆ, ಅನ್ನೋದು ಈಗಾಗಲೇ ಟೀಸರ್-ಟ್ರೈಲರ್ ಗಳ ಮೂಲಕ ಸಾಬೀತಾಗಿದೆ. ಡಿಪ್ಪಿ ಅವರು ಎಷ್ಟು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೋ ಅಷ್ಟೇ ಖಡಕ್ ಆಗಿ ಫೈಟ್-ಗನ್ ಶೂಟ್ ಮಾಡಿದ್ದಾರೆ.[XXX ಟ್ರೈಲರ್: ಗ್ಲಾಮರ್-ಡೇರಿಂಗ್-ಡ್ಯಾಶಿಂಗ್ ಲುಕ್ ನಲ್ಲಿ ದೀಪಿಕಾ]

ಇದೀಗ ಅಪರೂಪದ ಪ್ರತಿಭೆ ದೀಪಿಕಾ ಪಡುಕೋಣೆ ಬಗ್ಗೆ ಅವರ ಕೋ ಸ್ಟಾರ್ ಹಾಲಿವುಡ್ ನಟ ವಿನ್ ಡೀಸೆಲ್ ಅವರು ಮುತ್ತಿನಂತಹ ಮಾತುಗಳನ್ನಾಡಿದ್ದಾರೆ. ಜೊತೆಗೆ ವಿನ್ ಡೀಸೆಲ್ ಅವರಿಗೆ ಡಿಪ್ಪಿ ಮೇಲೆ ಅದೆಷ್ಟು ಗೌರವ, ಪ್ರೀತಿ ಇದೆ ಅನ್ನೋದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.

ಅಷ್ಟಕ್ಕೂ ವಿನ್ ಡಿಸೇಲ್ ಅವರು ದೀಪಿಕಾ ಪಡುಕೋಣೆ ಬಗ್ಗೆ ಏನಂದ್ರು ಅಂತ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕೋಣ, ಮುಂದೆ ನೋಡಿ......

'ನಮ್ಮಿಬ್ಬರದು ಅದ್ಭುತವಾದ ಕೆಮಿಸ್ಟ್ರಿ;-ವಿನ್ ಡೀಸೆಲ್

'ನನಗೆ ದೀಪಿಕಾ ಅಂದ್ರೆ ತುಂಬಾನೇ ಇಷ್ಟ, ಅವರನ್ನು ನಾನು ತುಂಬಾ ಪ್ರೀತಿಸುತ್ತೇನೆ. ತೆರೆ ಮೇಲೆ ನನ್ನದು ಮತ್ತು ಅವರದು ತುಂಬಾ ಅದ್ಭುತವಾದ ಕೆಮಿಸ್ಟ್ರಿ, ಶೂಟಿಂಗ್ ಸಮಯದಲ್ಲಿ ಅವರ ಜೊತೆ ಕಳೆದ ಸಮಯಗಳು ಬಹಳ ಸುಂದರವಾಗಿದ್ದವು' ಎಂದು ಹಾಲಿವುಡ್ ನಟ ವಿನ್ ಡೀಸೆಲ್ ಅವರು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.[ಕೊನೆಗೂ XXX ಟ್ರೈಲರ್ ಹಂಚಿಕೊಂಡ ದೀಪಿಕಾ ಪಡುಕೋಣೆ]

'ಪ್ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ' -ವಿನ್ ಡೀಸೆಲ್

'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಜೊತೆ ತಮಗಾದ ಅನುಭವ, ತಮಾಷೆ, ಮೋಜು-ಮಸ್ತಿ ಇತ್ಯಾದಿಗಳ ಬಗ್ಗೆ ನಟ ವಿನ್ ಡೀಸೆಲ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ವಿನ್ ಗೆ ಡಿಪ್ಪಿ ಮೇಲೆ ಇರೋ ಪ್ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಕೂಡ ಹೇಳಿಕೊಂಡಿದ್ದಾರೆ.

ಪ್ರಶ್ನೆ ಹಾಕಿದ ದೀಪಿಕಾ ಪಡುಕೋಣೆ

ಸಂದರ್ಶನ ಸಂದರ್ಭದಲ್ಲಿ ನಟಿ ದೀಪಿಕಾ ಅವರು ವಿನ್ ಡೀಸೆಲ್ ಅವರಿಗೆ ಎರಡು ಪ್ರಶ್ನೆ ಮಾಡಿದರು. 1. ಶೂಟಿಂಗ್ ಸಮಯದಲ್ಲಿ ನಿಮಗೆ ಯಾವ ಸನ್ನಿವೇಶ ಇಷ್ಟವಾಯಿತು. 2. ಸಿನಿಮಾದಲ್ಲಿನ ಯಾವ ದೃಶ್ಯ ತುಂಬಾ ಇಷ್ಟವಾಯಿತು. ಎಂಬ ಎರಡು ಪ್ರಶ್ನೆಗಳನ್ನು ಮಾಡಿದರು.[ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ]

ವಿನ್ ಡೀಸೆಲ್ ಉತ್ತರ

ಅದಕ್ಕೆ ವಿನ್ ಡೀಸೆಲ್, ಶೂಟಿಂಗ್ ಸಮಯದಲ್ಲಿ ಡಿಪ್ಪಿ ಜೊತೆ ಕಳೆದ ಎಲ್ಲಾ ಸನ್ನಿವೇಶ ಇಷ್ಟ ಆಯಿತು. ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಮೊದಲೇ ಪ್ರಶ್ನೆಗೆ ಉತ್ತರಿಸಿದರು. ಫೇವರಿಟ್ ಸೀನ್ ಗೆ ಉತ್ತರಿಸಿದ ವಿನ್ ಡೀಸೆಲ್, ನೀರಿನ ಬಳಿ ದೀಪಿಕಾ ಅವರನ್ನು ತಮ್ಮ ಬಾಹುಗಳಿಂದ ಎತ್ತಿರುವ ದೃಶ್ಯ ಬಹಳ ಇಷ್ಟ ಆಯ್ತು, ಎಂದು ಎರಡನೇ ಪ್ರಶ್ನೆಗೂ ಉತ್ತರಿಸಿದ್ದಾರೆ.

ಮುಂದಿನ ವರ್ಷ ರಿಲೀಸ್

ದೀಪಿಕಾ ಪಡುಕೋಣೆ ಮತ್ತು ವಿನ್ ಡೀಸೆಲ್ ನಟನೆಯ 'XXX: ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಮುಂದಿನ ವರ್ಷ, ಜನವರಿ 2017 ರಲ್ಲಿ ತೆರೆಗೆ ಅಪ್ಪಳಿಸಲಿದೆ.

English summary
HIndi Actress Deepika Padukone and Hollywood Actor Vin Diesel will be seen together in ‘xXx: Return Of Xander Cage’. Recently, in an interview the actor said that his love for Deepika cannot be put in words.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada