3 ಬಾರಿ ನಾಮಿನೇಟ್ ಆಗಿ ಮೊದಲ ಸಲ ಆಸ್ಕರ್ ಪಡೆದ ನಟಿ ಇವರು..
ಮೂರನೇ ಬಾರಿಗೆ ಬಂಪರ್ ಹೊಡೆದಿರುವ ಹಾಲಿವುಡ್ ನಟಿ ವಿಯೋಲಾ ಡೇವಿಸ್, ಆಸ್ಕರ್ ಗೆದ್ದ ಸಂತೋಷವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ವಿಯೋಲಾ ಆಸ್ಕರ್ ಪ್ರಶಸ್ತಿಗಾಗಿ ಮೂರು ಬಾರಿ ನಾಮಿನೆಟ್ ಆಗಿದ್ದರು. ಆದರೆ ಈಗ 89 ನೇ ಆಕಾಡೆಮಿ ಅವಾರ್ಡ್ ನಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದಾರೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]
ವಿಯೋಲಾ ಡೇವಿಸ್ 'ಫೆನ್ಸೆಸ್' ಚಿತ್ರದಲ್ಲಿ ಅಭಿನಯಿಸಿದ್ದ ಪೋಷಕ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 'ಫೆನ್ಸೆಸ್' ಚಿತ್ರಕ್ಕೆ ನಟ ಮತ್ತು ನಿರ್ದೇಶಕರಾದ ಡೆಂಜೆಲ್ ವಾಷಿಂಗ್ಟನ್ ಆಕ್ಷನ್ ಕಟ್ ಹೇಳಿದ್ದರು.

ವಿಯೋಲಾ ಡೇವಿಸ್ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಪಡೆದು, ಚಿನ್ನದ ಪ್ರತಿಮೆಯನ್ನು ಕೈಯಲ್ಲಿ ಹಿಡಿದ ತಕ್ಷಣ ಹೆಚ್ಚು ಭಾವನಾತ್ಮಕವಾಗಿ ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದರು. ನಂತರ ಮಾತನಾಡಿ 'ಫೆನ್ಸೆಸ್' ಚಿತ್ರದ ತಾರಾಬಳಗ ಮತ್ತು ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳಿದರು.['ಆಸ್ಕರ್'ನಲ್ಲಿ ಮಿಂಚಿದ ಭಾರತದ 8 ವರ್ಷದ ಬಾಲಕ]
"ಜನರು ಸದಾಕಾಲ, 'ನೀವು ಎಂತಹ ರೀತಿಯ ಸ್ಟೋರಿಗಳನ್ನು ಹೇಳಲು ಬಯಸುತ್ತೀರಾ.. ವಿಯೋಲಾ?' ಎಂದು ಕೇಳುತ್ತಿದ್ದರು. ಅದಕ್ಕೆ ನಾನು, 'ಕಲೆಯನ್ನು ಹೊರತೆಗೆಯುವ, ನೈಜ ಘಟನೆಗಳನ್ನು ಹೊರತರುವ ಕಥೆಗಳನ್ನು' ಎಂದು ಹೇಳುತ್ತಿದ್ದೆ. ಅಲ್ಲದೇ ಯಾರು ದೊಡ್ಡ ಕನಸುಗಳನ್ನು ಹೊಂದಿರುತ್ತಾರೋ ಮತ್ತು ಆ ಕನಸುಗಳಿಗೆ ಪ್ರತಿಫಲ ಸಿಕ್ಕಿರುವುದಿಲ್ಲವೋ ಅಂತಹ ಕಥೆಗಳು", ಎಂದು ವಿಯೋಲಾ ಡೇವಿಸ್ ಹೇಳಿದರು.

"ಹಲವರು ಪ್ರೀತಿಯಲ್ಲಿ ಬಿದ್ದು, ಕಳೆದುಕೊಳ್ಳುತ್ತಾರೆ. ಆದರೆ ನಾನು ಒಬ್ಬ ಕಲಾವಿದೆ ಆಗಿದ್ದೇನೆ. ಥ್ಯಾಂಕ್ ಗಾಡ್ ವಾಟ್ ಐ ಡಿಡ್. ಇಂದು ಬದುಕಲು ಒಂದು ವೃತ್ತಿ ಕಂಡುಕೊಂಡಿದ್ದೇನೆ", ಎಂದು ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ ನಂತರ ನಟಿ ಮಾತನಾಡಿದರು.[ಆಸ್ಕರ್ ಅಂಗಳದಲ್ಲಿ ಸೆಲೆಬ್ರಿಟಿಗಳು 'ನೀಲಿ ರಿಬ್ಬನ್' ಧರಿಸಿರುವುದು ಏಕೆ?]
ವಿಯೋಲಾ ಡೇವಿಸ್ ಮಾತುಮುಗಿಸಿದ ನಂತರ ಆಸ್ಕರ್ ಸಮಾರಂಭದ ಹೋಸ್ಟ್ ಜಿಮ್ಮಿ ಕಿಮ್ಮೆಲ್ ಮಾತನಾಡಿ, 'ಈಗ ವಿಯೋಲಾ ಇನ್ನೊಂದು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಅದು ಎಲ್ಲರೂ ಅಳುವಂಥೆ ಸ್ಪೀಚ್ ಕೊಟ್ಟಿರುವುದಕ್ಕೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.


Click it and Unblock the Notifications











