»   » 'ಆಸ್ಕರ್'ನಲ್ಲಿ ಮಿಂಚಿದ ಭಾರತದ 8 ವರ್ಷದ ಬಾಲಕ

'ಆಸ್ಕರ್'ನಲ್ಲಿ ಮಿಂಚಿದ ಭಾರತದ 8 ವರ್ಷದ ಬಾಲಕ

Posted By:
Subscribe to Filmibeat Kannada

89ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯರಿಗೆ ಯಾವ ಪ್ರಶಸ್ತಿಯೂ ಸಿಕ್ಕಿಲ್ಲ ಎಂಬುದು ನಿರಾಶೆಯಾಗಿದೆ. ಆಗಿದ್ದರೂ, ಆಸ್ಕರ್ ಅಂಗಳದಲ್ಲಿ ಭಾರತೀಯರು ಮಿಂಚಿರುವುದು ಹೆಮ್ಮೆ ಎನಿಸಿದೆ. ಹೌದು, ಈ ಬಾರಿಯ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ 8 ವರ್ಷದ ಬಾಲನಟ ಸನ್ನಿ ಪವರ್ ಎಲ್ಲರ ಗಮನ ಸೆಳೆದಿದ್ದಾರೆ.[LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್]

ಕಾರ್ಯಕ್ರಮ ನಿರೂಪಕ ಜಿಮ್ಮಿ ಕಿಮ್ಮಲ್ ಅವರು, ಸನ್ನಿ ಪವರ್ ಅವರ ಬಳಿ ಬಂದು, 'ಲಯನ್' ಚಿತ್ರದ ಕೆಲವು ಸನ್ನಿವೇಶಗಳನ್ನ ಅಭಿನಯ ಮಾಡಿ ತೋರಿಸುವಂತೆ ಕೇಳಿದಾಗ, ಸನ್ನಿ ಪವರ್ ಹಾಲಿವುಡ್ ಸ್ಟಾರ್ ಗಳ ಎದುರು ಅಭಿನಯಿಸಿ ಸೈ ಎನಿಸಿಕೊಂಡರು.[ಆಸ್ಕರ್ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ]

Sunny Pawar Live Performance in The Oscar Show

'ಲಯನ್' ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ, ಚಿತ್ರಪ್ರೇಮಿಗಳ ಮನಗೆದ್ದಿದ್ದ ಸನ್ನಿ ಪವರ್, ಹಾಲಿವುಡ್ ನ ಮ್ಯಾಟ್ ಡ್ಯಾಮನ್, ನಿಕೋಲ್ ಕಿಡ್ಮ್ಯಾನ್, ಡ್ಯಾನ್ಶಿಲ್ ವಾಷಿಂಗ್ಟನ್ ಅಂತಹ ದಿಗ್ಗಜ ನಟರ ಮುಂದೆ ನಟಿಸಿ ಶಬ್ಬಾಶ್ ಎನಿಸಿಕೊಂಡರು.[ಆಸ್ಕರ್ ಅಂಗಳದಲ್ಲಿ ಸೆಲೆಬ್ರಿಟಿಗಳು 'ನೀಲಿ ರಿಬ್ಬನ್' ಧರಿಸಿರುವುದು ಏಕೆ?]

ಈ ಹಿಂದೆ 'ಸನ್ನಿ ಪವರ್' 2017ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಸನ್ನಿ ಪವರ್, 2016 ರಲ್ಲಿ ತೆರೆಕಂಡ 'ಲಯನ್' ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನ ಗ್ರೇಥ್ ಡೇವಿಸ್ ನಿರ್ದೇಶನ ಮಾಡಿದ್ದು, ದೇವ್ ಪಟೇಲ್, ರೂನಿ ಮರ, ನಿಕೋಲ್ ಕಿಡ್ಮ್ಯಾನ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

English summary
Child actor from India Sunny Pawar has stunned the Oscars Night with his another scintillating performance with live Lion King re-enactment on stage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada