»   » ಆಸ್ಕರ್ ಅಂಗಳದಲ್ಲಿ ಸೆಲೆಬ್ರಿಟಿಗಳು 'ನೀಲಿ ರಿಬ್ಬನ್' ಧರಿಸಿರುವುದು ಏಕೆ?

ಆಸ್ಕರ್ ಅಂಗಳದಲ್ಲಿ ಸೆಲೆಬ್ರಿಟಿಗಳು 'ನೀಲಿ ರಿಬ್ಬನ್' ಧರಿಸಿರುವುದು ಏಕೆ?

Posted By:
Subscribe to Filmibeat Kannada

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬೆನ್ನಲ್ಲೇ ಹಲವು ರಾಷ್ಟ್ರಗಳಿಗೆ ಪ್ರವಾಸ ನಿರ್ಬಂಧ ಕ್ರಮ ಕೈಗೊಂಡಿದ್ದರು. ಟ್ರಂಪ್ ಅವರ ಈ ನೀತಿ ವಿರುದ್ಧ ಮಹಿಳಾ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಈಗ ಈ ಪ್ರತಿಭಟನೆ 2017 ರ ಆಸ್ಕರ್ ಅಂಗಳದಲ್ಲಿಯೂ ಟ್ರಂಪ್ ಪ್ರವಾಸ ನೀತಿ ವಿರುದ್ಧ ಮುಂದುವರೆದಿದೆ.[ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ]

ಹೌದು, ಲಾಸ್ ಏಂಜಲೀಸ್ ನಲ್ಲಿ ಇಂದು(ಫೆ.27) ನಡೆಯುತ್ತಿರುವ 89 ನೇ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಟ್ರಂಪ್ ಪ್ರವಾಸ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಖ್ಯಾತ ಹಾಲಿವುಡ್ ಸೆಲೆಬ್ರಿಟಿಗಳಾದ ಬ್ಯಾರಿ ಜೆಂಕಿನ್ಸ್ ಮತ್ತು ರುಥ್ ನೆಗ್ಗ 'ನೀಲಿ ರಿಬ್ಬನ್' ಧರಿಸುವ ಮೂಲಕ ಟ್ರಂಪ್ ಪ್ರವಾಸ ನೀತಿ ವಿರುದ್ಧ ಪ್ರತಿಭಟನೆ ಪ್ರದರ್ಶನ ಮಾಡಿದ್ದಾರೆ.[LIVE: ಆಸ್ಕರ್ 2017 : ಲಾ ಲಾ ಲ್ಯಾಂಡ್ ಚಿತ್ರ ನಿರ್ದೇಶಕನಿಗೆ ಪ್ರಶಸ್ತಿ]

ಅಂದಹಾಗೆ 'ನೀಲಿ ರಿಬ್ಬನ್', ಅಮೆರಿಕ ಸಿವಿಲ್ ಲಿಬರ್ಟೀಸ್ ಯೂನಿಯನ್(ACLU) ಸಂಕೇತವಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರವಾಸ ನಿರ್ಬಂಧ ನೀತಿ ವಿರೋಧಿಸುವುದನ್ನು ಸೂಚಿಸುತ್ತದೆ.

ಪ್ರವಾಸ ನಿರ್ಬಂಧ ಕ್ರಮಕ್ಕೆ ಪ್ರತಿಭಟನೆ

ಖ್ಯಾತ ಹಾಲಿವುಡ್ ಸೆಲೆಬ್ರಿಟಿ ರುಥ್ ನೆಗ್ಗ ರೆಡ್ ಕಾರ್ಪೆಟ್ ನಲ್ಲಿ ವ್ಯಾಲೆಂಟಿನೋ ಉಡುಗೆ ಜೊತೆಗೆ 'ನೀಲಿ ರಿಬ್ಬನ್' ಧರಿಸಿ ಮೊದಲು ಕಾಣಿಸಿಕೊಂಡಿರು. ಫೋಟೋ ನೋಡಿ.

ಲಿನ್ ಮ್ಯಾನುಎಲ್ ಮಿರಂದ

ಅಮೆರಿಕದ ಸಂಗೀತ ನಿರ್ದೇಶಕ ಮತ್ತು ನಟ ಈ ಬಾರಿ ಅತ್ಯುತ್ತಮ ಮೂಲ ಹಾಡು ವಿಭಾಗಕ್ಕೆ ನಾಮಿನೇಟ್ ಆಗಿದ್ದರು. ಅವರು 'ನೀಲಿ ರಿಬ್ಬನ್' ಧರಿಸಿ ಕಾಣಿಸಿಕೊಂಡ ಸನ್ನಿವೇಶ.

ಮಾಡೆಲ್ ಕಾರ್ಲಿ ಕ್ಲೊಸ್ಸ್

ಅಮೆರಿಕದ ಮಾಡೆಲ್ ಕಾರ್ಲಿ ಕ್ಲೋಸ್ಸ್ ಸಹ ತಮ್ಮ ಬಿಳಿ ಸ್ಟೆಲ್ಲಾ ಮೆಕ್ಕರ್ಟ್ನಿ ಉಡುಗೆಗೆ ಸಣ್ಣ 'ನೀಲಿ ರಿಬ್ಬನ್' ಧರಿಸಿದ್ದರು. ಅವರ ಜೊತೆ ಬ್ಯಾರಿ ಜೆಂಕಿನ್ಸ್ ಇದ್ದು, ಇವರು ಈ ಬಾರಿಯ ಆಸ್ಕರ್ ಪ್ರಶಸ್ತಿಗೆ 'ಮೂನ್ ಲೈಟ್' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕರಾಗಿ ನಾಮಿನೇಟ್ ಆಗಿದ್ದಾರೆ.

ಬ್ಯುಸಿ ಫಿಲಿಪ್ಸ್

"Cougar Town' ಟಿವಿ ಶೋ ಮೂಲಕ ಪ್ರಖ್ಯಾತವಾಗಿರುವ ಬ್ಯುಸಿ ಫಿಲಿಪ್ಸ್ ಟ್ರಂಪ್ ಪ್ರವಾಸ ನೀತಿಗೆ ಆಕ್ರೋಶ ವ್ಯಕ್ತಪಡಿಸಲು 'ನೀಲಿ ರಿಬ್ಬನ್' ಧರಿಸಿದ್ದರು.

English summary
Hollywood Celebrities wear Blue Ribbon to mark protest against US President Donald Trump initiated recent Travel ban issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada