For Quick Alerts
  ALLOW NOTIFICATIONS  
  For Daily Alerts

  ಜಾಕಿಚಾನ್ ನೂರನೇ ಚಿತ್ರ, ನೂರಾರು ವಿಷ್ಯ

  By Mahesh
  |

  ಭಾರತೀಯರಿಗೆ ಜಾಕಿ ಚಾನ್ ಎಂದರೆ ಅದೇನೋ ಪ್ರೀತಿ. ಮಕ್ಕಳಿಂದ ಮುದುಕರದಿಯಾಗಿ ಎಲ್ಲರೂ ಆತನ ಸ್ಟೈಲ್, ಸ್ಟಂಟ್ ನೋಡಿ ಬೆರಗಾದವರೆ. ಅವನ ಮೈಯಲ್ಲಿ ಮೂಳೆನೇ ಇಲ್ವಂತೆ ಅದಕ್ಕೆ ಸ್ಪ್ರಿಂಗ್ ಥರಾ ಅಡ್ತಾನೆ, ಹಾರುತ್ತಾನೆ, ಎಗರುತ್ತಾನೆ ಎಂದು ಜನ ಮಾತಾಡಿಕೊಳ್ಳುವುದು ಸಾಮಾನ್ಯ. ಮಾರ್ಷಲ್ ಆರ್ಟ್ ಆಧಾರಿತ ಸಾಹಸ ಚಿತ್ರಗಳಷ್ಟೇ ಅಲ್ಲದೆ, ಚಿತ್ರದಿಂದ ಚಿತ್ರಕ್ಕೆ ಸಂದೇಶಯುಕ್ತ ಮನರಂಜನೆ ಚಿತ್ರಗಳನ್ನು ನೀಡುತ್ತಾ ಬಂದಿರುವ ಜಾಕಿ ಚಾನ್ ತಮ್ಮ ವೃತ್ತಿ ಜೀವನದ ನೂರನೇ ಮೈಲಿಗಲ್ಲಿನ ಬಳಿ ನಿಂತಿದ್ದಾರೆ.

  ಜಾಕಿ ಚಾನ್ ಅವರ ನೂರನೇ ಚಿತ್ರ '1911' ಐತಿಹಾಸಿಕ ಚಿತ್ರವನ್ನು 1911ರ ಚೀನಾ ಕ್ರಾಂತಿಗೆ ಅರ್ಪಿಸಲಾಗಿದೆ. ಕ್ಸಿನ್ಹೈ ಕ್ರಾಂತಿ(Xinhai)ಎಂದೇ ಜನಜನಿತವಾಗಿರುವ ಚೀನಾದ ಕಟ್ಟ ಕಡೆಯ ಜೀತದಾಳು ಪದ್ಧತಿ ನಾಶ ಪಡಿಸಿದ ಈ ಕ್ರಾಂತಿ ಆಧಾರಿತ ಚಿತ್ರವನ್ನು ನಿರ್ಮಾಣ, ನಿರ್ದೇಶನದ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಚಾನ್ ಕಾಣಿಸಿಕೊಳ್ಳುತ್ತಿದ್ದಾರೆ.

  ಚರಿತ್ರೆ, ಸಾಹಸ, ಯುದ್ಧ ಹಾಗೂ ಪ್ರಣಯ ಎಲ್ಲವೂ ಈ ಸಿನಿಮಾದಲ್ಲಿ ಅಡಕವಾಗಿದೆ. ಸುಮಾರು 70ಕ್ಕೂ ಅಧಿಕ ಗಣ್ಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾನ್ ಅವರ ಮಗ ನಟ, ಗಾಯಕ ಜೇಸಿ ಕೂಡಾ ಒಂದು ಪಾತ್ರ ಮಾಡುತ್ತಿದ್ದಾರೆ. ಸೆಪ್ಟೆಂಬರ್ 26ಕ್ಕೆ ವಿಶ್ವದಾದ್ಯಂತ ತೆರೆಕಾಣಲಿರುವ ಚಿತ್ರವನ್ನು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಸದ್ಯ ಚಾಕಿ ಚಾನ್, ಹಾಂಗ್ ಕಾಂಗ್ ಕಲಾವಿದರ ಜೊತೆಗೂಡಿ ಜಪಾನ್ ಸುನಾಮಿಗೆ ದೇಣಿಗೆ ಸಂಗ್ರಹ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

  English summary
  Jackie Chan has tributed his 100th movie 1911 to 100th anniversary of Chinese Xinhai Revolution against feudal dynasty. This Historical movie has 70 plus celebrities in the cast. 1911 movie is likely to release on September 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X