The Odyssey ; ಬೆಂಗಳೂರಿಗರಿಗೆ ನೋಲನ್ ಉನ್ಮಾದ, 'ದಿ ಒಡಿಸ್ಸಿ' ಟಿಕೆಟ್‌ಗೆ ಮುಗಿ ಬಿದ್ದ ಜನ - ದರ ಗಗನಕ್ಕೇರಿದ್ದರೂ ಡೋಂಟ್ ಕೇರ್

ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್‌''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ.

ಇಂಥಾ ಹಾಲಿವುಡ್‌ನವರ ಪಾಲಿಗೆ ಮೊದಲಿಂದ ಭಾರತದ ಮಾರುಕಟ್ಟೆ ಚಿನ್ನದ ಗಣಿ ಇದ್ದಂತೆ. ನಮ್ಮ ಜನ ಮುಗಿ ಬಿದ್ದು ಇವರ ಚಿತ್ರಗಳನ್ನು ನೋಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಭಾರತದಲ್ಲಿ ಸದ್ದು ಮಾಡಿವೆ. ಕೋಟ್ಯಂತರ ಹಣವನ್ನು ಕೂಡ ಬಾಕ್ಸಾಫೀಸ್‌ನಲ್ಲಿ ದೋಚಿವೆ. ಈ ಸಾಲಿಗೆ ಈಗ ''ದಿ ಒಡಿಸ್ಸಿ'' ಕೂಡ ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

nolan-mania-grips-karnataka-the-odyssey-triggers-mad-imax-ticket-rush-despite-premium-pricing

ಹೌದು, ''ದಿ ಒಡಿಸ್ಸಿ''.. ಜಗದ್ವಿಖ್ಯಾತ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಅವರ ಹೊಸ ಕನಸು. ಕನವರಿಕೆ. ಇನ್ನೇನು ಇದೇ ಜುಲೈ 17ರಂದು ಚಿತ್ರ ತೆರೆಗೆ ಬರಲಿದೆ. ಇನ್ನು ಬಹುತೇಕರಿಗೆ ಗೊತ್ತಿರುವಂತೆ ನೋಲನ್ ಸೈನ್ಸ್ ಫಿಕ್ಷನ್ ಕಥೆಯಾಧಾರಿತ ಚಿತ್ರಗಳ ಸರದಾರ.

ಇಂತಹ ಸರದಾರನ ಸಿನಿಮಾವನ್ನು ''ಐಮ್ಯಾಕ್ಸ್‌'' ಪರದೆಯಲ್ಲಿ ನೋಡುವ ಮಜವೇ ಬೇರೆ. ಇನ್ನು ಈಗಾಗಲೇ ಈ ಚಿತ್ರದ ಪ್ರೀಮಿಯರ್ ಪ್ರದರ್ಶನ ಹಲವಡೆ ಆಗಿದೆ. ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಹಿನ್ನೆಲೆ ಜುಲೈ 17ರ ಬೆಳಗಿಗಾಗಿ ಹಲವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದು ಟಿಕೆಟ್‌ಗಳಿಗಾಗಿ ಸದ್ಯ ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿಯೂ ಪರಿಸ್ಥಿತಿ ಭಿನ್ನವೇನು ಇಲ್ಲ.

Also Read
The Odyssey Critics Review : ಬೆರಗಾಗಿಸುವ ಕ್ರಿಸ್ಟೋಫರ್ ನೋಲನ್ ಕೈಚಳಕ, ಹೇಗಿದೆ ದಿ ಒಡಿಸ್ಸಿ ? ಇಲ್ಲಿದೆ ವಿಮರ್ಶಕರ ವಿಮರ್ಶೆ
The Odyssey Critics Review : ಬೆರಗಾಗಿಸುವ ಕ್ರಿಸ್ಟೋಫರ್ ನೋಲನ್ ಕೈಚಳಕ, ಹೇಗಿದೆ ದಿ ಒಡಿಸ್ಸಿ ? ಇಲ್ಲಿದೆ ವಿಮರ್ಶಕರ ವಿಮರ್ಶೆ

ಗಗನಕ್ಕೇರಿದ ಟಿಕೆಟ್ ಬೆಲೆ, ಆದರೂ ಹೌಸ್‌ಫುಲ್

ದೊಡ್ಡ ದೊಡ್ಡ ಚಿತ್ರಗಳು ಬಂದರೆ ಮಲ್ಟಿಪ್ಲೆಕ್ಸ್‌ನವರ ಪಾಲಿಗದು ರಸಗವಳ. ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕಲು ಸಿಗುವ ಸುವರ್ಣ ಅವಕಾಶ. ಈ ಅವಕಾಶವನ್ನು ಸದ್ಯ ಸದುಪಯೋಗ ಮಾಡಿಕೊಳ್ಳುತ್ತಿರುವ ಪಿವಿಆರ್, ಐನಾಕ್ಸ್‌ ಅಂತಹ ಮಲ್ಟಿಪ್ಲೆಕ್ಸ್‌ಗಳು ಸದ್ಯ ಟಿಕೆಟ್ ದರವನ್ನು ಗಗನಕ್ಕೇರಿಸಿವೆ.

ಐಮ್ಯಾಕ್ಸ್ ಟಿಕೆಟ್‌ಗೆ ಭಾರೀ ಬೇಡಿಕೆ

ಬೆಂಗಳೂರಿನ 6 ಮಲ್ಟಿಪ್ಲೆಕ್ಸ್‌ಗಳಲ್ಲಿ ''ದಿ ಒಡಿಸ್ಸಿ'' ಐಮ್ಯಾಕ್ಸ್ ಸ್ಕ್ರೀನ್‌ನಲ್ಲಿ ಪ್ರದರ್ಶನ ಕಾಣಲಿದೆ. ಈ ಆರು ಸ್ಥಳದಲ್ಲಿಯೂ ಕೇವಲ ಆರೆಂಜ್ ಬಣ್ಣದ ಫಾಸ್ಟ್ ಫಿಲ್ಲಿಂಗ್ ಅಲರ್ಟ್‌ಗಳೇ ಕಣ್ಣಿಗೆ ರಾಚುತ್ತಿವೆ.ಬೆಂಗಳೂರಿನ ಪ್ರಮುಖ ಐಮ್ಯಾಕ್ಸ್ (IMAX) ಚಿತ್ರಮಂದಿರಗಳಾದ ಪಿವಿಆರ್ ಕೋರಮಂಗಲ, ವೇಗಾ ಸಿಟಿ, ಸಿನಿಪೊಲಿಸ್ ಶಾಂತಿನಿಕೇತ, ವಿಆರ್ ಬೆಂಗಳೂರು, ಗಲೆರಿಯಾ ಮಾಲ್, ಮಂತ್ರಿ ಸ್ಕ್ವೇರ್ ನಲ್ಲಿ ತಲಾ ಐದೈದು ಪ್ರದರ್ಶನಗಳನ್ನು ನೀಡಲಾಗಿದೆ. ಬೆಳಗ್ಗೆ 8ಕ್ಕೆ ಮೊದಲ ಶೋ ಆರಂಭವಾಗಲಿದೆ.

nolan-mania-grips-karnataka-the-odyssey-triggers-mad-imax-ticket-rush-despite-premium-pricing

ಇನ್ನು ಈ ಆರು ಕಡೆ ನೀವು ಒಬ್ಬರೇ ಈ ಚಿತ್ರ ನೋಡಬೇಕು ಅಂದರೆ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಆದರೂ ಇರಲೇಬೇಕು. ಮಂತ್ರಿ ಸ್ಕ್ವೇರ್ ನಲ್ಲಿ ಮಾತ್ರ ಟಿಕೆಟ್ ದರ ಎರಡು ಶೋಗಳಿಗೆ 860 ಇದೆ. ಮಿಕ್ಕಂತೆ ಉಳಿದೆಡೆ ಕನಿಷ್ಠ ಟಿಕೆಟ್ ಬೆಲೆ 1000, 1300 ರೂಪಾಯಿ ಇದ್ದರೆ ಗರಿಷ್ಠ ಟಿಕೆಟ್ ಬೆಲೆ 1950 ರೂಪಾಯಿ ಇದೆ. ಆದಾಗ್ಯೂ 8:00 ಗಂಟೆಯ ಮಾರ್ನಿಂಗ್ ಶೋನಿಂದ ಹಿಡಿದು ರಾತ್ರಿ 10:30 ರ ಲೇಟ್ ನೈಟ್ ಶೋಗಳವರೆಗೆ ಟಿಕೆಟ್‌ಗಳು ಸದ್ಯ ಬಿಸಿ ಬಿಸಿ ಬೋಂಡಾದಂತೆ ಬಿಕರಿಯಾಗುತ್ತಿವೆ.

ಶನಿವಾರ-ಭಾನುವಾರದ ಟಿಕೆಟ್‌ಗಳು ಕೂಡ ಸೋಲ್ಡ್ ಔಟ್

ಕೇವಲ ಶುಕ್ರವಾರ ಮಾತ್ರ ಅಲ್ಲ ಶನಿವಾರ ಮತ್ತು ಭಾನುವಾರದ ಐಮ್ಯಾಕ್ಸ್ ಸ್ಕ್ರೀನ್‌ನ ಟಿಕೆಟ್‌ಗಳು ಮೇಲೆ ನಾವು ಹೇಳಿರುವ ಆರು ಸ್ಥಳಗಳಲ್ಲಿ ಬಹುತೇಕ ಸೋಲ್ಡ್ ಔಟ್ ಆಗಿವೆ. ಇನ್ನು ಕೇವಲ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಮಾತ್ರ ''ದಿ ಒಡಿಸ್ಸಿ''ಗೆ ಡಿಮ್ಯಾಂಡ್ ಇಲ್ಲ. ನಾರ್ಮಲ್ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಕೂಡ ಚಿತ್ರಕ್ಕೆ ಬೇಡಿಕೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಬೆಂಗಳೂರಿನ 60ಕ್ಕೂ ಅಧಿಕ ಮಲ್ಟಿಪ್ಲೆಕ್ಸ್/ಚಿತ್ರಮಂದಿರಗಳಲ್ಲಿ ''ದಿ ಒಡಿಸ್ಸಿ'' ಚಿತ್ರ ತೆರೆಗೆ ಬರುತ್ತಿದೆ. ಆ ಪೈಕಿ ಕೆಲವಡೆ ಹೌಸ್‌ಫುಲ್ ಬೋರ್ಡ್‌ ಕೂಡ ಬಿದ್ದಿದೆ.

Recommended For You
The Odyssey Censor : ನೋಲನ್ 'ದಿ ಒಡಿಸ್ಸಿ' ನೋಡಲು ಚಿತ್ರಮಂದಿರದಲ್ಲಿ ಎಷ್ಟು ಗಂಟೆ ಕೂರಬೇಕು ? ಮನೆಮಂದಿ ಜೊತೆ ನೋಡಬಹುದಾ ?
The Odyssey Censor : ನೋಲನ್ 'ದಿ ಒಡಿಸ್ಸಿ' ನೋಡಲು ಚಿತ್ರಮಂದಿರದಲ್ಲಿ ಎಷ್ಟು ಗಂಟೆ ಕೂರಬೇಕು ? ಮನೆಮಂದಿ ಜೊತೆ ನೋಡಬಹುದಾ ?

ಕನ್ನಡದಲ್ಲಿ ಇಲ್ಲ ''ದಿ ಒಡಿಸ್ಸಿ''

''ದಿ ಒಡಿಸ್ಸಿ'' ಇಂಗ್ಲೀಷ್‌ನಲ್ಲಿ ಮಾತ್ರವಲ್ಲ. ಹಿಂದಿ, ತೆಲುಗು, ತಮಿಳಿನಲ್ಲಿ ಕೂಡ ಬಿಡುಗಡೆಯಾಗಲಿದೆ. ಬೇಸರ ಮತ್ತು ದುಖದ ವಿಚಾರ ಅಂದರೆ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಗೋಜಿಗೆ ತಂಡ ಹೋಗಿಲ್ಲ. 4 ಚಿತ್ರಮಂದಿರಗಳಲ್ಲಿ ಹಿಂದಿ, ಎರಡು ಕಡೆ ತಮಿಳು ಮತ್ತು 4 ಕಡೆ ತೆಲುಗಿನ ಆವೃತ್ತಿಗಳು ಬಿಡುಗಡೆಯಾಗುತ್ತಿವೆ.

ಒಟ್ನಲ್ಲಿ ಸದ್ಯ ಬೆಂಗಳೂರಿನಲ್ಲಿ ''ದಿ ಒಡಿಸ್ಸಿ'' ಅಲೆ ಕಂಡು ಬರುತ್ತಿದೆ. ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿ ರಾಜ್ಯದ ಹಲವಡೆ ಕೂಡ ''ದಿ ಒಡಿಸ್ಸಿ'' ಚಿತ್ರ ನೋಡುವ ಆಸಕ್ತಿ ಪ್ರೇಕ್ಷಕರಲ್ಲಿ ಕಂಡು ಬಂದಿದೆ. ಬೆಂಗಳೂರಿನಂತೆಯೇ ರಾಜ್ಯದ ಬೇರೆ ಕಡೆಯೂ ಕೂಡ ಟಿಕೆಟ್‌ ದರವನ್ನು ಹೆಚ್ಚಿಸಲಾಗಿದೆ. ಇದೆಲ್ಲವೂ ನೋಡಿದರೆ ನೋಲನ್ ಈಸ್ ಬ್ಯಾಕ್, ಅಂಡ್ ವಿ ಆರ್ ರೆಡಿ ಟು ಪೇ ಎನಿಥಿಂಗ್ ಎಂದು ಸದ್ಯ ಕರುನಾಡಿನ ಪ್ರೇಕ್ಷಕರು ''ದಿ ಒಡಿಸ್ಸಿ'' ನೋಡಲು ಸಿದ್ದರಾದಂತೆ ಇದ್ದು, ಬಾಕ್ಸಾಫೀಸ್‌ನಲ್ಲಿ ''ದಿ ಒಡಿಸ್ಸಿ'' ಎಷ್ಟು ಕೋಟಿ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Nolan mania grips Karnataka! Demand for ‘The Odyssey’ tickets skyrockets as IMAX screens sell out rapidly in Bengaluru despite high advance booking prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X