»   » ಭಾರತದಲ್ಲಿ ವಿನ್‌ ಡೀಸೆಲ್‌ ಪ್ರತ್ಯಕ್ಷ: 'XXX' ರಿಲೀಸ್‌ ಗೆ ದಿನಗಣನೆ

ಭಾರತದಲ್ಲಿ ವಿನ್‌ ಡೀಸೆಲ್‌ ಪ್ರತ್ಯಕ್ಷ: 'XXX' ರಿಲೀಸ್‌ ಗೆ ದಿನಗಣನೆ

Posted By:
Subscribe to Filmibeat Kannada

ಗ್ಲಾಮರ್ ಗೊಂಬೆ ದೀಪಿಕಾ ಪಡುಕೋಣೆ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರವನ್ನು ಭಾರತೀಯರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ಆಗಿ ನೀಡುತ್ತಿದ್ದು, ಜನವರಿ 14 ರಂದು ಭಾರತದಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯ ಇಂದು ಭಾರತದಲ್ಲಿ ಆರಂಭವಾಗಿದೆ.[ದೀಪಿಕಾ ಳ "xxx" ಚಿತ್ರದಿಂದ ಭಾರತೀಯರಿಗೆ ಬಿಗ್ ಆಫರ್]

ಅಂದಹಾಗೆ ಕನ್ನಡತಿ ದೀಪಿಕಾ ಪಡುಕೋಣೆ ನಟಿಸಿರುವ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ನಟ ವಿನ್‌ ಡೀಸೆಲ್, ನಿರ್ದೇಶಕ ಡಿ.ಜೆ.ಕಾರಸೊ ಇಂದು (ಜನವರಿ 12) ಮುಂಬೈ ಗೆ ಬಂದಿಳಿದಿದ್ದಾರೆ. ಇವರಿಗೆ ವಿಶೇಷವಾಗಿ ಭಾರತೀಯ ಸಂಸ್ಕೃತಿ ಶೈಲಿಯಲ್ಲಿ ತಿಲಕ ಇಟ್ಟು, ಆರತಿ ಎತ್ತಿ ಸ್ವಾಗಿತಿಸಲಾಗಿದೆ. ಹಾಲಿವುಡ್‌ ನಿಂದ ಬಾಲಿವುಡ್ ಅಂಗಳಕ್ಕೆ ಬಂದಿಳಿದಿರುವ ವಿನ್ ಡೀಸೆಲ್ ರನ್ನು ಸ್ವಾಗತಿಸಿದ ಶೈಲಿ ಹೇಗಿತ್ತು, ಅವರ ಕಾರ್ಯಕ್ರಮಗಳು ಏನು, ಕರ್ನಾಟಕದಲ್ಲಿ ಚಿತ್ರ ಎಲ್ಲೆಲ್ಲಿ ಬಿಡುಗಡೆ ಅಗುತ್ತಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ..

ವಿನ್‌ ಡೀಸೆಲ್‌ ಗೆ ಅದ್ಧೂರಿ ಸ್ವಾಗತ

ಹಾಲಿವುಡ್ ನಟ ವಿನ್‌ ಡೀಸೆಲ್ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಇಂದು (ಜನವರಿ 12) ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಹೊರಗೆ ಬರುವಾಗ ವಿನ್ ಡೀಸೆಲ್, ನಿರ್ದೇಶಕ ಡಿ.ಜೆ.ಕಾರಸೊ, ನಟಿ ದೀಪಿಕಾ ಪಡುಕೋಣೆಗೆ ಭಾರತೀಯ ಶೈಲಿಯಲ್ಲಿ ತಿಲಕ ಇಟ್ಟು, ಆರತಿ ಎತ್ತಿ ದೇಸಿ ಶೈಲಿಯಲ್ಲಿ ಅದ್ಧೂರಿ ಆಗಿ ಸ್ವಾಗತಿಸಲಾಯಿತು.[ದೀಪಿಕಾ ಡೇರಿಂಗ್-ಡ್ಯಾಶಿಂಗ್ ಲುಕ್‌ ನಲ್ಲಿ xxx ಹೊಸ ಪೋಸ್ಟರ್ ರಿಲೀಸ್‌]

ದೀಪಿಕಾ ಪಡುಕೋಣೆ ಮತ್ತು ವಿನ್‌ ಡೀಸೆಲ್ ಜೊತೆ ಡಿಜೆ ಕಾರಸೊ

ವಿನ್ ಡೀಸೆಲ್‌ ಮತ್ತು ದೀಪಿಕಾ ಪಡುಕೋಣೆ ಜೊತೆ ಚಿತ್ರದ ನಿರ್ದೇಶಕ ಡಿ.ಜೆ.ಕಾರಸೊ ಸಹ ಚಿತ್ರದ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಈ ಮೂವರನ್ನು ಸ್ವಾಗತಿಸಲು ಮಹಿಳೆಯರು ಕೆಂಪು ಸೀರೆ ಮತ್ತು ತಲೆಗೆ ಹಳದಿ ಪೇಟಾ ಧರಿಸಿದ್ದರು.

ಭಾರತದ ಸಂಸ್ಕೃತಿ ಇಷ್ಟ: ವಿನ್‌ ಡೀಸೆಲ್‌

ವಿಮಾನ ನಿಲ್ದಾಣದಿಂದ ಹೊರಗೆ ಬಂದು ಅದ್ಧೂರಿ ಸ್ವಾಗತವನ್ನು ನೋಡಿದ ವಿನ್‌ ಡೀಸೆಲ್ ಫೇಸ್‌ಬುಕ್‌ ಲೈವ್ ಆನ್ ಮಾಡಿದರು. ಡೋಲು ಮತ್ತು ಕಹಳೆಯ ವಾದ್ಯಗಳೊಂದಿಗಿನ ಸ್ವಾಗತ ಶೈಲಿಯನ್ನು ನೋಡಿ ಹೆಚ್ಚು ಸಂತಹ ಪಟ್ಟರು. ಇದೇ ಖುಷಿಯಲ್ಲಿ ವಿನ್‌ ಡಿಸೇಲ್ 'ನನಗೆ ಭಾರತದ ಸಂಸ್ಕೃತಿ ತುಂಬಾ ಇಷ್ಟ. ಭಾರತದಲ್ಲಿ ಜನರ ನಡುವೆ ಇರುವ ಭಾವನಾತ್ಮಕ ಸಂಬಂಧವನ್ನು ಪ್ರೀತಿಸುತ್ತೇನೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಸಂಜೆ ಪತ್ರಿಕಾಗೋಷ್ಠಿ

'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ಪ್ರಚಾರಕ್ಕಾಗಿ ಬಂದಿರುವ ವಿನ್‌ ಡೀಸೆಲ್‌ ಮತ್ತು ಡಿ.ಜೆ, ಕಾರಸೊ ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.

ವಿನ್‌ ಡೀಸೆಲ್‌ ಗೆ ದೀಪಿಕಾ ಪ್ರೈವೇಟ್ ಪಾರ್ಟಿ

ಲೀಡಿಂಗ್ ಡೈಲಿ ಪ್ರಕಾರ, ಇಂದು ಮುಂಬೈ ನಲ್ಲಿ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ಪ್ರೀಮಿಯರ್ ಶೋ ನಂತರ ದೀಪಿಕಾ, ವಿನ್‌ ಡೀಸೆಲ್‌ ಗೆ ಪ್ರೈವೇರ್ ಪಾರ್ಟಿ ನೀಡುತ್ತಿದ್ದಾರಂತೆ.

ಸಂಕ್ರಾಂತಿಗೆ xxx ರಿಲೀಸ್

ಅಂದಹಾಗೆ ಇದೆ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ಸಿನಿಮಾವೊಂದು ಮೊದಲು ಭಾರತದಲ್ಲಿ ರಿಲೀಸ್ ಆಗುತ್ತಿರುವುದು. ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಹಾಲಿವುಡ್ ಸಿನಿಮಾ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ನಲ್ಲಿ ನಟಿಸಿರುವ ಕಾರಣ ಈ ಚಿತ್ರವನ್ನು ಮೊದಲು ಭಾರತದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಜನವರಿ 14 ರಂದು ಭಾರತದಲ್ಲಿ ಚಿತ್ರ ಬಿಡುಗಡೆ ಆಗುತ್ತಿದ್ದು, ಪ್ರಪಂಚದಾದ್ಯಂತ ಜನವರಿ 19 ರಂದು 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಬಿಡುಗಡೆ ಆಗುತ್ತಿದೆ.

ಬೆಂಗಳೂರಿನ ಥಿಯೇಟರ್‌ಗಳಲ್ಲಿ 'xxx' ಚಿತ್ರ

'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಜನವರಿ 14 ರಂದು ಬಿಡುಗಡೆ ಎಂದು ಹೇಳಿದ್ದರು, ಬೆಂಗಳೂರಿನ ಕೆಲವು ಥಿಯೇಟರ್‌ಗಳಲ್ಲಿ ನಾಳೆಯಿಂದಲೇ ಚಿತ್ರ ಪ್ರದರ್ಶನ ನೀಡಲಾಗುತ್ತಿದೆ.

English summary
Vin Diesel has finally reached India to promote his upcoming film xXx with Bollywood diva Deepika Padukone. See how the Hollywood actor was welcomed at the Mumbai airport in a Bollywood style.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada