ನಿರ್ದೇಶಕರು ಮೇಕಪ್ ಬೇಡಾ ಅಂದಿದ್ರು, 'ಕೃಷ್ಣಲೀಲಾ' ನಾಯಕಿ

ಪ್ರ: ಎರಡೂ ಕಡೆ ಶೂಟಿಂಗ್ ಇದ್ದಾಗ ಅದನ್ನು ಹೇಗೆ ಶೆಡ್ಯೂಲ್ ಮಾಡಿಕೊಳ್ಳುತ್ತೀರಾ?
ಮಯೂರಿ: ಎರಡೂ ಟೀಮ್ (ಅಶ್ವಿನಿ ನಕ್ಷತ್ರ, ಕೃಷ್ಣಲೀಲಾ) ತುಂಬಾ ಸಪೋರ್ಟ್ ಮಾಡುತ್ತಾರೆ. ಅವರೇ ನಿರ್ಧರಿಸಿ ನನಗೆ ಸಹಾಯ ಆಗುವ ಸಮಯದಲ್ಲಿ ಶೂಟಿಂಗ್ ಬರಲು ಹೇಳುತ್ತಾರೆ.

ಪ್ರ: ಚಿತ್ರ ತಂಡದಿಂದ ಈ ಆಫರ್ ಸಿಕ್ಕಾಗ ಏನನಿಸಿತು?
ಮಯೂರಿ : ಅಶ್ವಿನಿ ನಕ್ಷತ್ರ ಧಾರವಾಹಿ ಮಾಡುತ್ತಿದ್ದ ಮೊದಲ ದಿನಗಳಲ್ಲೇ ಬೇರೆ ಆಫರ್ ಗಳು ಬರುತ್ತಿತ್ತು. ಆದರೆ ಒಳ್ಳೆ ಪ್ರಾಜೆಕ್ಟಿಗಾಗಿ ಕಾಯುತ್ತಿದ್ದೆ. ಶಶಾಂಕ್ ಸರ್ ನನಗೆ ಈ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದಾಗ ತುಂಬಾ ಸಂತೋಷವಾಯಿತು. ಶಶಾಂಕ್ ಹೊಸಬರಿಗೆ, ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ ಎಂದು ನನಗೆ ಗೊತ್ತಿತ್ತು. ಇನ್ನು ಅಜೇಯ್ ಜೊತೆ ನಾನು ನಾಯಕಿ ಎಂದಾಗ ಡಬಲ್ ಖುಷಿಯಾಯಿತು.

Heroine Mayoori Part 2

ಪ್ರ: ಪೆಷಲ್ ಎನ್ನುವ ಕಾನ್ಸೆಪ್ಟ್ ಹೇಗೆ ಬಂತು? ಚಿತ್ರಕ್ಕೆ ಸಾಹಿತ್ಯ ಬರೆದವರು ಯಾರು?
ಶ್ರೀಧರ್ : ಮಿಡ್ಲ್ ಕ್ಲಾಸ್ ಜನರನ್ನು ಟಾರ್ಗೆಟ್ ಮಾಡಿ ಮನೋರಂಜನೆಗೋಸ್ಕರ್ 'ಪೆಷಲ್' ಹಾಡು ಕಂಪೋಸ್ ಮಾಡಿದ್ದೇವೆ. 'ಕಾದಿರುವೆ' ಎನ್ನುವ ಹಾಡು ಚಿತ್ರದ ನನ್ನ ಫೇವರೇಟ್ ಹಾಡು, ಇದಕ್ಕೆ ಸಾಹಿತ್ಯ ಬರೆದವರು ಶಶಾಂಕ್ ಸರ್. ಬೇರೆಯವರ ಕೈಯಲ್ಲಿ ಹಾಡು ಬರೆಸೋಣ ಎನ್ನುತ್ತಿದ್ದರು.

ಆದರೆ ನೀವೇ ಬರೆಯಬೇಕೆಂದು ಒತ್ತಾಯ ಮಾಡಿದೆ. ಇನ್ನೊಂದು ಹಾಡಿಗಾಗಿ ಫೇಸ್ ಬುಕ್ ನಲ್ಲಿ ಕಾಂಟೆಸ್ಟ್ ಹಾಕಲಾಗಿತ್ತು. ಅದರಲ್ಲಿ ಸಿಲೆಕ್ಟ್ ಆದ ಶಿವ ತೇಜಸ್ವಿ ಎನ್ನುವವರಿಂದ ಸಾಹಿತ್ಯ ಬರೆಸಿದ್ದೇವೆ. ಹರ್ಷ ಎನ್ನುವವರು ಪ್ಯಾಥೋ ಸಾಂಗ್ ಒಂದನ್ನು ಬರೆದಿದ್ದಾರೆ.

Heroine Mayoori Part 2

ಪ್ರ: ಒಟ್ಟಾರೆ ಚಿತ್ರದ ಬಗ್ಗೆ
ಶ್ರೀಧರ್ : ವಿ ಎಂಜಾಯ್ಡ್. ಎಲ್ಲಾ ಕ್ಯಾಟಗರಿಗೆ ಶೂಟ್ ಆಗುವ ಹಾಡಿದೆ ಮತ್ತು ಎಲ್ಲಾ ಹಾಡುಗಳು ಹಿಟ್ ಆಗಿವೆ. ಇದೇ ಮೊದಲಬಾರಿಗೆ ಇಲೆಕ್ಟ್ರಾನಿಕ್ instrument ಇಲ್ಲಿ ಬಳಸಿಕೊಂಡಿಲ್ಲ. ಎಲ್ಲಾ ಪರಿಕರಗಳನ್ನು ಬಾಯಲ್ಲಿ ನುಡಿಸಿ ರೆಕಾರ್ಡ್ ಮಾಡಲಾಗಿದೆ.

ಪ್ರ: ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ?
ಮಯೂರಿ : ಚಿತ್ರದಲ್ಲಿ ನನ್ನ ಹೆಸರು ಲೀಲಾ. ಕಾಲೇಜ್ ಹೋಗುವ, ಮಿಡ್ಲ್ ಕ್ಲಾಸ್ ಹುಡುಗಿ. ನಿಜ ಜೀವನದಲ್ಲಿ ಹೇಗಿದ್ದೇನೋ, ಅದೇ ರೀತಿಯ ರೋಲ್ ಚಿತ್ರದಲ್ಲಿ ಸಿಕ್ಕಿದೆ. ಚಿತ್ರದ ಬಗ್ಗೆ ತುಂಬಾ excitement ಇದೆ. ಇಡೀ ಸಿನಿಮಾದಲ್ಲಿ ಮೇಕಪ್ ಹಾಕಿಲ್ಲ. ಶಶಾಂಕ್ ಸರ್ ಮೇಕಪ್ ಬೇಡ ಎಂದಾಗ ಭಯ ಆಗುತ್ತಿತ್ತು.

More from Filmibeat

English summary
Interview of upcoming 'Krishna Leela' movie Music Director V Sridhar and Heroine Mayoori Part 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X