»   » 'ಕೃಷ್ಣಲೀಲಾ' ನಾಯಕಿ 'ಅಶ್ವಿನಿ ನಕ್ಷತ್ರ' ಮಯೂರಿ ಸಂದರ್ಶನ

'ಕೃಷ್ಣಲೀಲಾ' ನಾಯಕಿ 'ಅಶ್ವಿನಿ ನಕ್ಷತ್ರ' ಮಯೂರಿ ಸಂದರ್ಶನ

Posted By:
Subscribe to Filmibeat Kannada

ಬಹುನಿರೀಕ್ಷಿತ ಮತ್ತು ಅದಕ್ಕಿಂತ ಹೆಚ್ಚಾಗಿ ಸ್ವಮೇಕ್ 'ಕೃಷ್ಣಲೀಲಾ' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಶಶಾಂಕ್ ನಿರ್ದೇಶನದ ಈ ಚಿತ್ರ ಇದೇ ಯುಗಾದಿ ಹಬ್ಬಕ್ಕೆ (ಮಾ 20) ಕನ್ನಡ ಪ್ರೇಕ್ಷಕರಿಗೆ ಬೇವುಬೆಲ್ಲ ನೀಡಲು ಸಜ್ಜಾಗಿದೆ.

ಕೃಷ್ಣನ್ ಸೀರೀಸ್ ಖ್ಯಾತಿಯ ಅಜೇಯ್ ರಾವ್ ಅವರ ಚೊಚ್ಚಲ ನಿರ್ಮಾಣದ ಈ ಚಿತ್ರಕ್ಕೆ ನಾಯಕ ಅಜೇಯ್ ಮತ್ತು ಕಿರುತೆರೆಯ ಹಿಟ್ ಸೀರಿಯಲ್ 'ಅಶ್ವಿನಿ ನಕ್ಷತ್ರ' ದ ನಾಯಕಿ ಮಯೂರಿ. ಸೋಮವಾರ (ಮಾ 16) ಕೃಷ್ಣಲೀಲಾ ಚಿತ್ರತಂಡ ಒನ್ ಇಂಡಿಯಾ ಕಚೇರಿಗೆ ಆಗಮಿಸಿತ್ತು.

ನಾಯಕಿ ಮಯೂರಿ ಮತ್ತು ಚಿತ್ರಕ್ಕೆ ಸಂಗೀತ ನೀಡಿದ ವಿ ಶ್ರೀಧರ್ ಜೊತೆಗಿನ ಸಂದರ್ಶನದ ಆಯ್ದಭಾಗ ಇಲ್ಲಿದೆ.

Heroine Mayoori Part 1

ಪ್ರ: ಎರಡು ವರ್ಷದ ಹಿಂದೆ ಮತ್ತು ಈಗ ಕಲಾವಿದೆಯಾಗಿ ನಿಮಗೆ ಕಾಣುವ ವ್ಯತ್ಯಾಸ?
ಮಯೂರಿ: ಕಿರುತೆರೆ ತಾಯಿಮನೆ ಇದ್ದ ಹಾಗೇ, ಸಿನಿಮಾ ಗಂಡನ ಮನೆ ಇದ್ದ ಹಾಗೇ. ಎರಡರಲ್ಲೂ ನಟನೆಗೆ ಅವಕಾಶವಿದೆ.

ಪ್ರ: ಸೀರಿಯಲ್ ನಲ್ಲಿ ಮುಂದುವರಿಯುತ್ತೀರಾ?
ಮಯೂರಿ: ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ನಟಿಸುತ್ತಿದ್ದೇನೆ. ಅವರಾಗಿ ಮುಗಿಸುವ ತನಕ ಅದರಲ್ಲಿ ನಟಿಸಲೇಬೇಕು. ಮುಂದೆ ಏನೂ ಎಂದು ಸದ್ಯ ನಿರ್ಧರಿಸಿಲ್ಲ.

Heroine Mayoori Part 1

ಪ್ರ: ಕೃಷ್ಣಲೀಲೆಗೆ ಸಂಗೀತ ನೀಡಿದ ನಿಮ್ಮ ಪೆಷಲ್ ಅನುಭವ?
ಶ್ರೀಧರ್ : ಶಶಾಂಕ್ ಚಿತ್ರದಲ್ಲಿ ಅದು ಹಿಂದಿನ ಬಚ್ಚನ್ ಚಿತ್ರವಾಗಲಿ ಜರಾಸಂಧ ಆಗಲಿ ಸಂಗೀತಕ್ಕೆ ಹೆಚ್ಚಿನ ಅವಕಾಶವಿರುತ್ತೆ. ಕೃಷ್ಣಲೀಲಾ ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ. ಪೆಷಲ್ ಎನ್ನುವ ಹಿಟ್ ಸಾಂಗಿಗೆ ಆ ಪೆಷಲ್ ಎನ್ನುವ ಶಬ್ದ ಸೂಚಿಸಿದ್ದು ನಾನು. ಸಂದರ್ಶನದ ಮುಂದಿನ ಭಾಗಕ್ಕೆ next ಕ್ಲಿಕ್ಕಿಸಿ

English summary
Interview of upcoming 'Krishna Leela' movie Music Director V Sridhar and Heroine Mayoori Part 1

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada