»   » ರಾಜ್ ಕುಮಾರ್ ಮೊಮ್ಮಗ ಅಂತ ಬಿಲ್ಡಪ್ ಕೊಟ್ಟಿಲ್ಲ-ರಾಘಣ್ಣ

ರಾಜ್ ಕುಮಾರ್ ಮೊಮ್ಮಗ ಅಂತ ಬಿಲ್ಡಪ್ ಕೊಟ್ಟಿಲ್ಲ-ರಾಘಣ್ಣ

Posted By:
Subscribe to Filmibeat Kannada

'ದೊಡ್ಮನೆ ಕುಟುಂಬ'ದ ಮೂರನೇ ತಲೆಮಾರಿನ ಕುಡಿ ಬೆಳ್ಳಿತೆರೆ ಮೇಲೆ ಮಿಂಚುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ರಾಘವೇಂದ್ರ ರಾಜ್ ಕುಮಾರ್ ಮುದ್ದಿನ ಮಗ ವಿನಯ್ ರಾಜ್ ಕುಮಾರ್ ದೊಡ್ಡ ಪರದೆ ಮೇಲೆ ವಿಜೃಂಭಿಸುವುದಕ್ಕೆ ಅದಾಗಲೆ ಕೌಂಟ್ ಡೌನ್ ಶುರುವಾಗಿದೆ.

'ಸಿದ್ದಾರ್ಥ'....ಯಾವುದೇ ಆಂಗಲ್ ನಿಂದ ಬುದ್ಧ ಅಲ್ಲ..! ಅನ್ನುವ ಪಂಚಿಂಗ್ ಡೈಲಾಗ್ ನಿಂದ ಮನೆ ಮಾತಾಗಿರುವ ವಿನಯ್ ರಾಜ್ ಕುಮಾರ್, 'ಸಿದ್ದಾರ್ಥ'ನಾಗಿ ತಮ್ಮ ತಂದೆ ಮತ್ತು ತಾತನ ಬಹುದಿನಗಳ ಕನಸನ್ನ ಈಡೇರಿಸಿದ್ದಾರೆ.


ತಾವು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ ಆದ ಖುಷಿಗಿಂತಲೂ, ವಿನಯ್ ಎಂಟ್ರಿ ಬಗ್ಗೆ ಹೆಚ್ಚು ಹರ್ಷ ವ್ಯಕ್ತಪಡಿಸುವ ರಾಘಣ್ಣ, ಇದೇ ಶುಕ್ರವಾರ ಅಂದ್ರೆ ಜನವರಿ 23 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿರುವ 'ಸಿದ್ದಾರ್ಥ' ಬಗ್ಗೆ ಮತ್ತು ಪ್ರೀತಿಯ ಮಗನ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ರವರ ಸಂದರ್ಶನ ಇಲ್ಲಿದೆ.


Raghavendra Rajkumar1

* ಮುದ್ದು ಮಗನ ಸಿನಿಮಾ ರಿಲೀಸ್ ಆಗ್ತಿದೆ. ನಿಮ್ಮ ಕನಸು ಈಡೇರುತ್ತಿದೆ. ನಿಮ್ಮ ಫೀಲಿಂಗ್ ಹೇಗಿದೆ?


- ತುಂಬಾ ಖುಷಿ. ಅದರ ಜೊತೆಗೆ ತುಂಬಾ ಟೆನ್ಷನ್. ಭಯ, ಭಕ್ತಿ, ಎಕ್ಸೈಟ್ಮೆಂಟ್, ಕ್ಯೂರಿಯಾಸಿಟಿ, ಎಲ್ಲಾ ಇದೆ. ಒಂದು ಪದದಲ್ಲಿ ಅದನ್ನ ಹೇಳುವುದಕ್ಕೆ ಆಗಲ್ಲ. ಆ ಥರ ಫೀಲಿಂಗ್ ನನಗೆ.


* ನಿಮ್ಮ ಮೊದಲ ಸಿನಿಮಾ ರಿಲೀಸ್ ಆದಾಗ ಇದ್ದ ಭಾವನೆಗೂ, ಈ ಭಾವನೆಗೂ ವ್ಯತ್ಯಾಸ.?


- ಆಗ, ನಮಗೆ ಏನಾದ್ರೂ ಚಿಂತೆಯಿಲ್ಲ ಅಂತಿದ್ವಿ. ಆದ್ರೀಗ, ಮಗ ಅಲ್ವಾ. ತಂದೆಗೆ ಮಕ್ಕಳು, ತಾತನಿಗೆ ಮೊಮ್ಮಕ್ಕಳು. ಹೀಗಾಗಿ ಜನಕ್ಕೆ ತುಂಬಾ ಕುತೂಹಲ ಇದೆ. ಆ ಟೆನ್ಷನ್ ನನಗೆ ಕಾಡ್ತಿದೆ. ಹಾಗೇ, ಒಂಥರಾ ಸಂತೋಷ. ನನ್ನ ಮಗ ಇಷ್ಟು ದೊಡ್ಡವನಾಗಿದ್ದಾನೆ. ಅವನ ವೃತ್ತಿ ಶುರುವಾಗಿದೆ. ಅವನ ಕಾಲ ಮೇಲೆ ಅವನು ನಿಂತುಕೊಳ್ಳುತ್ತಿದ್ದಾನೆ. ಹೀಗಾಗಿ ಒಬ್ಬ ತಂದೆಯಾಗಿ ತುಂಬಾ ಖುಷಿ ಇದೆ. ನನ್ನ ಮೊದಲ ಸಿನಿಮಾದ ಬಗ್ಗೆ ಇನ್ನೂ ಚೆನ್ನಾಗಿ ನನಗೆ ನೆನಪಿದೆ. ಹೀಗಿರುವಾಗಲೇ ಇಷ್ಟು ಬೇಗ ನನ್ನ ಮಗನ ಮೊದಲ ಸಿನಿಮಾ ಬಂತು ಹೀರೋ ಆಗಿ. ಜನ ಹೇಗೆ ಅವನನ್ನ ಸ್ವೀಕರಿಸುತ್ತಾರೆ ಅಂತ ಕಾತರ ಇದೆ.


Raghavendra Rajkumar2

* 'ಸಿದ್ದಾರ್ಥ' ಫಸ್ಟ್ ಕಾಪಿ ನೋಡಿದ್ದೀರಾ. ನಿಮ್ಮ ಪ್ರಕಾರ ಹೇಗೆ ಮೂಡಿ ಬಂದಿದೆ?


- ಚೆನ್ನಾಗಿದೆ. ನಾವು ಮಾಡಿರುವ ಸಿನಿಮಾ ನಮಗೆ ಚೆನ್ನಾಗಿ ಕಾಣುತ್ತೆ. ಆದ್ರೆ, ಮೊದಲ ಬಾರಿ ಜನ ನೋಡಿ, ಪ್ರತಿಕ್ರಿಯೆ ಕೊಟ್ಟಾಗಲೇ ನಮಗೆ ಖುಷಿ. 'ಸಿದ್ದಾರ್ಥ' ಉತ್ತಮ ಸಿನಿಮಾ ಅಂತ ನನಗೆ ತೃಪ್ತಿ ಇದೆ. [ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್]


Raghavendra Rajkumar4

* ಅಂದ್ರೆ, ತುಂಬಾ ವರ್ಷದಿಂದ ನಿಮಗೆ ಏನು ಕನಸು ಇತ್ತು, ಮಗನನ್ನ ಹೀಗೇ ಲಾಂಚ್ ಮಾಡಬೇಕು ಅಂತ...ಅದು 'ಸಿದ್ದಾರ್ಥ' ಮೂಲಕ ಈಡೇರಿದ್ಯಾ?


- ಕಥೆ ಪ್ರಕಾರ ಸಿನಿಮಾ ತುಂಬಾ ಚೆನ್ನಾಗಿದೆ. ತುಂಬಾ ವರ್ಷಗಳಿಂದ ಸ್ಕ್ರಿಪ್ಟ್ ಡಿಸ್ಕಷನ್ ಗೆ ನಾನೇ ಕೂತುಕೊಳ್ಳುತ್ತಾಯಿದ್ದೀನಿ. ಅಪ್ಪು ಮೊದಲ ಚಿತ್ರದಿಂದ, ಸ್ಕ್ರಿಪ್ಟ್ ವರ್ಕ್ ನಲ್ಲಿ ನಾನಿದ್ದೀನಿ. ಹಾಗೆ, ವಿನಯ್ ಗೆ ಇದು ಹೇಳಿ ಮಾಡಿಸಿದ ಕಥೆ. ರಾಜ್ ಕುಮಾರ್ ಮೊಮ್ಮಗ, ಅದ್ದೂರಿಯಾಗಿ ಇರಬೇಕು ಅಂತ ಇಲ್ಲದೇ, ಸಾಮಾನ್ಯ ಹುಡುಗ, ಯೂತ್ ಗೆ ಏನ್ ಬೇಕು ಆ ತರಹದ ಸಿನಿಮಾ ಇದು. ರಾಜ್ ಕುಮಾರ್ ಕುಟುಂಬದ ಕುಡಿ ಅಂತ ಕ್ಯಾರೆಕ್ಟರ್ ನಲ್ಲಿ ಬಿಲ್ಡಪ್ ಕೊಡದೆ, ಕಥೆಗೆ ಪೂರಕವಾಗಿ ಏನು ಬೇಕು, ಅದನ್ನ ಮಾತ್ರ ಮಾಡೋಣ. ಸಿನಿಮಾ ಚೆನ್ನಾಗಿದ್ದರೆ, ಓಡುತ್ತೆ ಅಂತ ಅಂದುಕೊಂಡ್ವಿ. 'ಮುಂಗಾರು ಮಳೆ' ಚಿತ್ರವನ್ನೇ ತೆಗೆದುಕೊಳ್ಳಿ. ಯಾವ ಸ್ಟಾರ್ಸ್ ಇರ್ಲಿಲ್ಲ. ಕಥೆ ಚೆನ್ನಾಗಿತ್ತು. ಸಿನಿಮಾ ಓಡ್ತು. ಹಾಗೆ,. 'ಸಿದ್ದಾರ್ಥ'ನಿಗೆ ರಾಜ್ ಕುಮಾರ್ ಮೊಮ್ಮಗ ಯಾರು ಅಂತ ಗೊತ್ತಿಲ್ಲ. ಸಿನಿಮಾದಲ್ಲಿ 'ಸಿದ್ದಾರ್ಥ' ಸಾಮಾನ್ಯ ಹುಡುಗ. ಹಾಗೇ, ಚಿತ್ರದಲ್ಲಿ ಗಿಮಿಕ್ ಇಲ್ಲ. ಫ್ರೆಶ್ ಮೂವಿ. ನಮ್ಮ ಫ್ಯಾಮಿಲಿ ಬಗ್ಗೆ ಡೈಲಾಗ್ ಇಲ್ಲ. ಯಾರೇ ಸಿನಿಮಾ ನೋಡಿದ್ರೂ, ಪ್ರತಿಯೊಬ್ಬರಲ್ಲೂ 'ಸಿದ್ದಾರ್ಥ' ಕಾಣಬೇಕು. ನಾನೇ 'ಸಿದ್ದಾರ್ಥ' ಅನ್ನಬೇಕು. ಆ ಪ್ರಯತ್ನ ಮಾಡಿದ್ದೀವಿ. ನನ್ನ ಮಗನಿಗೆ ಇಷ್ಟು ಸಾಕು.


Raghavendra Rajkumar3

* ಹಾಗಾದ್ರೆ, ಎಕ್ಸ್ ಪೆಕ್ಟೇಷನ್ ಗಿಂತ ತುಂಬಾ ಎಕ್ಸ್ ಪೆರಿಮೆಂಟ್ ಇದೆ ಸಿನಿಮಾದಲ್ಲಿ..?


- ಹೌದು.....ವಿನಯ್ ರಾಜ್ ಕುಮಾರ್ ಮೊಮ್ಮಗ ಅನ್ನುವುದು ಬೆಳವಣಿಗೆಯಲ್ಲಿ ಕಾಣಬೇಕು. ಅಪ್ಪಾಜಿ ಹೇಳ್ತಿದ್ರು, ಒಂದು ಸಿನಿಮಾದಲ್ಲಿ ಫ್ಯೂಚರ್ ಡಿಸೈಡ್ ಮಾಡುವುದಕ್ಕೆ ಆಗಲ್ಲ ಅಂತ. ಇನ್ನೂ ವಿನಯ್ ಗೆ ತುಂಬಾ ಇದೆ. ಸಿನಿಮಾಗಳನ್ನ ಮಾಡುತ್ತಾ ಮಾಡುತ್ತಾ ಕಲಿಯುತ್ತಾನೆ. ಮೊದಲ ಸಿನಿಮಾ...ಮಗು ತರಹ. ಬೀಳಬೇಕು, ಎದ್ದೇಳಬೇಕು. ಹಲ್ಲು ಮುರಿದುಕೊಳ್ಳಬೇಕು. ಪ್ರತಿ ಹೆಜ್ಜೆಯಲ್ಲೂ ಕಲಿಯಬೇಕು. ಹೀಗಾಗಿ 'ಸಿದ್ದಾರ್ಥ' ಚಿತ್ರದಲ್ಲಿ ತುಂಬಾ ಪ್ರಯೋಗ ಮಾಡಿದ್ದೀವಿ. ಹೊಸ ಸಿಂಗರ್ಸ್, ಅರ್ಮಾ ಮಲಿಕ್ ಅಂತ ಫ್ರೆಶ್ ವಾಯ್ಸ್. ಹೊಸ ಲೋಕೇಷನ್ಸ್. ಹೀಗೆ ತುಂಬಾ ಪ್ರಯೋಗ ಇದೆ.


ಅಣ್ಣಾವ್ರ ಹೆಸರು, ದೊಡ್ಮನೆ ಕುಟುಂಬ ಅನ್ನುವ ಲೆಕ್ಕಾಚಾರ ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅದ್ಯಾವುದನ್ನೂ ಲೆಕ್ಕಿಸದೆ, ಸಾಮಾನ್ಯ ಹೀರೋ ಆಗಿ ವಿನಯ್ ರಾಜ್ ಕುಮಾರ್ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಮೊಮ್ಮಗನನ್ನ ಹೀರೋ ಆಗಿ ನೋಡಬೇಕು ಅಂತ ಕನಸು ಕಂಡಿದ್ದ ಡಾ.ರಾಜ್ ಕುಮಾರ್ ಇಂದು ನೆನಪು ಮಾತ್ರ. ಇಂತಹ ಸಂದರ್ಭದಲ್ಲಿ ಅಪ್ಪಾಜಿಯ ಕುರಿತು ರಾಘಣ್ಣ ಏನಂದ್ರು...ಮುಂದೆ ಓದಿ.....


English summary
Raghavendra Rajkumar's son Vinay Rajkumar starrer 'Siddhartha' is all set to release on Jan 23rd. With high expectations on Vinay, Raghanna says, ''There is no unnecessary build up for Vinay as Rajkumar's Grandson in the movie''. Here is the Special Interview of Raghavendra Rajkumar. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada