»   » ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ವಿಶೇಷ ಸಂದರ್ಶನ

ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ವಿಶೇಷ ಸಂದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/interview/vinay-rajkumar-interview-i-have-no-ego-being-rajkumar-s-grand-son-017573.html">Next »</a></li></ul>

ಅಣ್ಣಾವ್ರ ಕುಟುಂಬದ ಮೂರನೇ ತಲೆಮಾರಿನ ಕುಡಿ ಬೆಳ್ಳಿತೆರೆ ಮೇಲೆ ಮಿಂಚುವುದಕ್ಕೆ ಇನ್ನು ಕೇವಲ ಒಂದೇ ದಿನ ಬಾಕಿ. ವರ್ಷಗಳಿಂದಲೂ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ಆರಂಗೇಟ್ರಂ ಬಗ್ಗೆ ಗಾಂಧಿನಗರದಲ್ಲಿ ಕುತೂಹಲ ಇದ್ದೇ ಇದೆ.

ಪರಭಾಷಾ ನಿರ್ದೇಶಕರನ್ನೆಲ್ಲಾ ಬಿಟ್ಟು, 'ಮಿಲನ' ಖ್ಯಾತಿಯ ಪ್ರಕಾಶ್ ಗರಡಿಯಲ್ಲಿ 'ಸಿದ್ದಾರ್ಥ'ನಾಗಿರುವ ವಿನಯ್, ಅಭಿಮಾನಿ ದೇವರುಗಳ ಮುಂದೆ ಬರುತ್ತಿದ್ದಾರೆ. ತಾತ, ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನ ಹಾದಿಯಲ್ಲೇ ಸಾಗುತ್ತಿರುವ ವಿನಯ್, ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಏನಂತಾರೆ?


Vinay Rajkumar Interview

ನಾಳೆ (ಜನವರಿ 23) ರಾಜ್ಯಾದ್ಯಂತ ತೆರೆಕಾಣುತ್ತಿರುವ 'ಸಿದ್ದಾರ್ಥ' ಚಿತ್ರದಲ್ಲಿ ವಿನಯ್ ಪಾತ್ರವಾದರೂ ಏನು..? ಕಲಾಕುಟುಂಬದಲ್ಲೇ ಬೆಳೆದಿರುವ ವಿನಯ್ ಗೆ ರೋಲ್ ಮಾಡೆಲ್ ಯಾರು.? ಈ ಎಲ್ಲಾ ಕೌತುಕಗಳ ಬಗ್ಗೆ ಯುವ ಪ್ರತಿಭೆ ವಿನಯ್ ರಾಜ್ ಕುಮಾರ್ 'ಫಿಲ್ಮಿಬೀಟ್ ಕನ್ನಡ' ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ರಾಘಣ್ಣನ ಮುದ್ದಿನ ಕುಡಿ ವಿನಯ್ ಜೊತೆಗಿನ ವಿಶೇಷ ಸಂದರ್ಶನ ಇಲ್ಲಿದೆ.


Vinay Rajkumar Interview

* ನಿಮ್ಮ ಮೊದಲ ಸಿನಿಮಾ ಬಿಡುಗಡೆಯಾಗುವುದಕ್ಕೆ ಒಂದೇ ದಿನ ಬಾಕಿ. ಎಕ್ಸೈಟ್ಮೆಂಟ್ ಇದ್ಯಾ? ಟೆನ್ಷನ್ ತುಂಬಾ ಆಗ್ತಿದ್ಯಾ?


- ಒಂಥರಾ ಮಿಕ್ಸ್ಡ್ ಫೀಲಿಂಗ್. ಎಕ್ಸೈಟ್ಮೆಂಟ್ ಇದೆ. ಟೆನ್ಷನ್ ಕೂಡ ಆಗ್ತಿದೆ. ಜನ ನನ್ನ ಹೇಗೆ ಸ್ವೀಕರಿಸುತ್ತಾರೆ. ಅವರ ರೆಸ್ಪಾನ್ಸ್, ರಿಯಾಕ್ಷನ್ ಹೇಗಿರುತ್ತೆ ಅಂತ ತಿಳಿದುಕೊಳ್ಳುವ ಕಾತರ ಇದೆ. ಫಸ್ಟ್ ಫಿಲ್ಮ್ ಅಲ್ವಾ...


Vinay Rajkumar Interview

* ನಿಮ್ಮನ್ನ ನೀವು ಮೊದಲ ಬಾರಿ ದೊಡ್ಡ ಪರದೆ ಮೇಲೆ ನೋಡಿಕೊಳ್ಳುವ ಕಾಲ ಹತ್ತಿರವಾಗಿದೆ. ನಿಮ್ಮ ಕನಸು ಈಡೇರುತ್ತಿದೆ ಅಂತ ಖುಷಿನಾ..?


- ಹೌದು, ಡ್ರೀಮ್ ಕಮ್ ಟ್ಯೂ ನೇ. ಆದ್ರೆ, ಸಕ್ಸಸ್ ಸಿಕ್ಕಿದಾಗ ನಿಜವಾಗಲೂ ಡ್ರೀಮ್ ಕಮ್ ಟ್ರೂ. ಬಿಗ್ ಸ್ಕೀನ್ ನಲ್ಲಿ ನನ್ನ ನೋಡಿ, ಜನ ಖುಷಿ ಪಟ್ಟರೆ ನನ್ನ ಕನಸು ನನಸಾದ ಹಾಗೆ.


* 'ಸಿದ್ದಾರ್ಥ' ಬುದ್ಧ ಅಲ್ಲ...! ಮತ್ತೆ ಹೇಗೆ..?


- ಅದಕ್ಕೆ ನೀವು ಸಿನಿಮಾ ನೋಡಬೇಕು.


Vinay Rajkumar Interview

* 'ಸಿದ್ದಾರ್ಥ' ಪಾತ್ರದಲ್ಲಿ ನಿಮ್ಮನ್ನ ನೀವು ಕಂಡುಕೊಂಡಿದ್ದೀರಾ?


- 'ಸಿದ್ಧಾರ್ಥ' ಯೂತ್ ಕ್ಯಾರೆಕ್ಟರ್. ಒಬ್ಬ ಹುಡುಗನ ಆಸೆಗಳು. ಅಪ್ಪ-ಅಮ್ಮನೊಂದಿಗೆ ಅವನ ಅನುಬಂಧ. ಪ್ರೀತಿ ಪ್ರೇಮ. ಸ್ನೇಹ. ಈ ಎಲ್ಲಾ ಫೀಲಿಂಗ್ ಬಗ್ಗೆ ಒಂದು ಸಿನಿಮಾ. ಎಲ್ಲರ ಜೀವನದಲ್ಲೂ ಆಗಿರುವ ಒಂದು ಅನುಭವ. ಯಾರೇ ಸಿನಿಮಾ ನೋಡಿದರೂ, ಅವರ ಕಾಲೇಜ್ ಲೈಫ್ ನಲ್ಲಿ ಇಂಥ ಒಂದು ಅನುಭವ ಆಗಿತ್ತು ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಅಂತಹ ಒಂದು ಸಿನಿಮಾ 'ಸಿದ್ದಾರ್ಥ'. ಫುಲ್ ಫ್ಯಾಮಿಲಿ ಎಂಟರ್ಟೇನರ್. ಎಲ್ಲರಿಗೂ ಇಷ್ಟವಾಗುತ್ತೆ.


Vinay Rajkumar Interview

* ಟ್ರೇಲರ್ ನೋಡಿದ್ರೆ, 'ಸಿದ್ದಾರ್ಥ' ತುಂಬಾ ಪೋಲಿ ಹುಡುಗ ಅನ್ಸುತ್ತೆ ಅಲ್ವಾ?


- ಅದು ಟ್ರೇಲರ್ ಅಷ್ಟೆ. ಇಡೀ ಸಿನಿಮಾ ನೋಡಿದ್ರೆ, ನಿಜವಾದ 'ಸಿದ್ದಾರ್ಥ' ನಿಮಗೆ ಗೊತ್ತಾಗುತ್ತೆ. [ಪೋಲಿ ಹುಡುಗನಾಗಿ ಎಂಟ್ರಿ ಕೊಟ್ಟ ವಿನಯ್ ರಾಜ್]


* ಟ್ರೇಲರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಇದರಿಂದ ನಿಮಗೆ ರೆಸ್ಪಾನ್ಸ್ ಹೇಗೆ ಸಿಕ್ಕಿದೆ?


- ಇಷ್ಟು ದಿನ ಒಳ್ಳೆ ರೆಸ್ಪಾನ್ಸ್ ಬಂದಿದೆ. ತುಂಬಾ ಜನಕ್ಕೆ ನನ್ನ ವಾಯ್ಸ್ ಇಷ್ಟ ಆಗಿದೆ. ಕೆಲವರಿಗೆ ಆಕ್ಟಿಂಗ್ ಇಷ್ಟ ಆಗಿದೆ. ಹಾಡುಗಳು ಕೂಡ ಹಿಟ್ ಆಗಿವೆ. ತುಂಬಾ ಖುಷಿ ಆಗುತ್ತೆ ರೆಸ್ಪಾನ್ಸ್ ಕೇಳಿದ್ರೆ.


Vinay Rajkumar Interview

* ಯೂಟ್ಯೂಬ್ ನಲ್ಲಿ ಟ್ರೇಲರ್ ಗೆ ಅರ್ಧ ಲಕ್ಷಕ್ಕೂ ಹೆಚ್ಚು VIEWS ಸಿಕ್ಕಿದೆ. ಹೊಸ ನಟನಿಗೆ ಇದು ಒಳ್ಳೆಯ ಪ್ರತಿಕ್ರಿಯೆ ಅನಿಸಿದ್ಯಾ ನಿಮಗೆ?


- ಅದಕ್ಕೆ ನಾನು ಫಸ್ಟ್ ಥ್ಯಾಂಕ್ಸ್ ಹೇಳಬೇಕಾಗಿರುವುದು ಕನ್ನಡ ಅಭಿಮಾನಿಗಳಿಗೆ. ತಾತ, ಅಪ್ಪಾಜಿ, ದೊಡ್ಡಪ್ಪ, ಚಿಕ್ಕಪ್ಪ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಅವರಿಂದ ನನ್ನನ್ನೂ ಗುರುತಿಸ್ತಾಯಿದ್ದಾರೆ. ಅವರುಗಳ ಹೆಸರನ್ನ ನಾನು ಉಳಿಸಬೇಕು. [ಯೂಟ್ಯೂಬಲ್ಲಿ ಝೇಂಕರಿಸಿದ 'ಸಿದ್ದಾರ್ಥ' ಟ್ರೇಲರ್]


ತಾತ ರಾಜ್ ಕುಮಾರ್, ಅಪ್ಪ ರಾಘವೇಂದ್ರ ರಾಜ್ ಕುಮಾರ್, ದೊಡ್ಡಪ್ಪ ಶಿವರಾಜ್ ಕುಮಾರ್, ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಹೆಸರನ್ನ ನಾನು ಉಳಿಸಿಕೊಳ್ಳಬೇಕು ಅಂತ್ಹೇಳುವ ವಿನಯ್ ಗೆ ತಮ್ಮ ಕುಟುಂಬ ಮತ್ತು ಅಭಿಮಾನಿಗಳಿಂದ ಒತ್ತಡ ಹೆಚ್ಚಾಗುತ್ತಿದೆಯಾ...ಇದರ ಬಗ್ಗೆ ವಿನಯ್ ಹೇಳುವುದೇನು ಮುಂದೆ ಓದಿ.....


<ul id="pagination-digg"><li class="next"><a href="/interview/vinay-rajkumar-interview-i-have-no-ego-being-rajkumar-s-grand-son-017573.html">Next »</a></li></ul>
English summary
Raghavendra Rajkumar's son Vinay Rajkumar starrer 'Siddhartha' is all set to release tomorrow (Jan 23rd). Here is an Exclusive Interview of Vinay Rajkumar on his Debut in Sandalwood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada