ಮದುವೆ ಆಯ್ತು.. ಡಾಲಿ ಲೈಫ್‌ ಸ್ಟೈಲ್‌ ಕೂಡ ಬದಲಾಯ್ತು; ಪತ್ನಿ ಜೊತೆ ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್‌ನಲ್ಲಿ ವಾಕಿಂಗ್

ಬದುಕಲ್ಲಿ ಶಿಸ್ತು ಬರಬೇಕು ಅಂದರೆ, ಮನೆಯವರು ಮೊದಲು ಮಾಡೋ ಕೆಲಸ ಅಂದರೆ ಮದುವೆ. ಪಕ್ಕದಲ್ಲಿ ಹೆಂಡ್ತಿ ಇದ್ದರೆ, ಶಿಸ್ತು ಬರುತ್ತೆ. ಜವಾಬ್ದಾರಿನೂ ಬರುತ್ತೆ ಅನ್ನೋದು ಹಿರಿಯ ನಂಬಿಕೆ. ಅದು ಡಾಲಿ ಧನಂಜಯ್ ವಿಚಾರದಲ್ಲಿ ಪ್ರೂವ್ ಆಗುತ್ತಿದೆ. ಅದರಲ್ಲೂ ಡಾಕ್ಟರ್ ಅನ್ನು ಮದುವೆ ಆಗಿದ್ದರಿಂದ ಸ್ವಲ್ಪ ಆರೋಗ್ಯದ ಬಗ್ಗೆ ಜಾಸ್ತಿನೇ ಕಾಳಜಿ ಇದ್ದಂಗೆ ಇದೆ.

ಹಾಗಂತ ಡಾಲಿ ಧನಂಜಯ್ ಮದುವೆ ಮುನ್ನ ಶಿಸ್ತಿನಿಂದ ಇರಲಿಲ್ಲ ಅಂತಲ್ಲ. ಈಗ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದು. ಮದುವೆಗೂ ಮುನ್ನವೇ ಧನಂಜಯ್ ಸ್ವತ: ಈ ಮಾತನ್ನು ಹೇಳಿಕೊಂಡಿದ್ದರು. ಮದುವೆ ಆದ್ಮೇಲೆ ಫ್ರೆಂಡ್ಸ್, ಪಾರ್ಟಿ ಎಲ್ಲದಕ್ಕೂ ಬ್ರೇಕ್ ಬೀಳುತ್ತೆ. ಲೈಫ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತೆ ಅಂದಿದ್ದರು. ಅದೀಗ ಎದ್ದು ಕಾಣುತ್ತಿದೆ.

Dhananjay life style changed after marriage was seen walking with wife in Cubbon Park

ಹೌದು, ಡಾಲಿ ಧನಂಜಯ್ ಹಾಗೂ ಪತ್ನಿ ಡಾ.ಧನ್ಯತಾ ಇಬ್ಬರೂ ಇಂದು (ಮೇ 11) ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್ ಹಾಗೂ ವಿಧಾನಸೌಧ ಸುತ್ತಮುತ್ತ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜೊತೆಯಲ್ಲಿ ವಾಕ್ ಮಾಡಿದ್ದು, ಆ ಫೋಟೋಗಳನ್ನು ಧನಂಜಯ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಿನಿಮಾ ಹೀರೋಗಳು ಅಂದ್ಮೇಲೆ ಅವರು ಫಿಟ್ನೆಸ್ ಕಡೆಗೆ ಗಮನ ಹರಿಸಲೇಬೇಕು. ಅದರಲ್ಲೂ ಆಕ್ಷನ್ ಹೀರೋ ಅಂದ್ಮೇಲಂತೂ ಜಿಮ್‌, ಫಿಟ್ನೆಸ್, ಡಯೆಟ್ ಮಾಡುವುದು ಖಡ್ಡಾಯ. ಡಾಲಿ ಧನಂಜಯ್ ಮದುವೆಗೂ ಮುನ್ನ ಫಿಟ್ನೆಸ್‌ ಕಡೆಗೆ ಗಮನ ಕೊಡುತ್ತಿದ್ದರು. ದೇಹವನ್ನು ಕಟುಮಸ್ತಾಗಿ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಶೂಟಿಂಗ್ ಇದ್ದಾಗ ಸ್ವಲ್ಪ ಹೆಚ್ಚಿರುತ್ತಿತ್ತು. ಇನ್ನು ಫ್ರೀ ಇದ್ದಾಗ ಜಿಮ್‌ಗೆ ಹೋಗುವುದನ್ನು ಸಾಮಾನ್ಯವಾಗಿ ಕಡಿಮೆ ಮಾಡುತ್ತಾರೆ. ಜೊತೆಗೆ ಕೆಲವ ಸಂದರ್ಭಗಳಲ್ಲಿ ಪಾರ್ಟಿ ಮಾಡೋದು ಇದೆಲ್ಲವೂ ಇದ್ದೇ ಇರುತ್ತೆ. ಮದುವೆ ಬಳಿಕ ಅದೂ ಕೂಡ ಬದಲಾದಂತೆ ಕಾಣುತ್ತಿದೆ.

ಧನಂಜಯ್ ಹಾಗೂ ಪತ್ನಿ ಧನ್ಯತಾ ವೀಕೆಂಡ್‌ನಲ್ಲಿ ಜಿಮ್‌ ಬಿಟ್ಟು ವಾಕಿಂಗ್ ಕಡೆ ಗಮನ ಹರಿಸಿದ್ದಾರೆ. ಭಾನುವಾರದ ದಿನ ಬೆಂಗಳೂರಿನ ಕಬ್ಬನ್ ಪಾರ್ಟಿ ವಾಕ್ ಮಾಡುವವರಿಂದ ತುಂಬಿ ತುಳುಕಿರುತ್ತೆ. ಬೆಂಗಳೂರಿನ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ವಾಕ್ ಮಾಡುವುದಕ್ಕೆ ಬರುತ್ತಾರೆ. ಡಾಲಿ ಧನಂಜಯ್ ಹಾಗೂ ಪತ್ನಿ ಧನ್ಯತಾ ಕೂಡ ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್ ಹಾಗೂ ವಿಧಾನ ಸೌಧ ಸುತ್ತಮುತ್ತ ವಾಕಿಂಗ್ ಮಾಡಿದ್ದಾರೆ. ಈ ಫೋಟೊಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಧನಂಜಯ್ ಶೇರ್ ಮಾಡಿಕೊಂಡಿದ್ದಾರೆ.

Dhananjay life style changed after marriage was seen walking with wife in Cubbon Park

ಡಾಲಿ ಕನ್ನಡ ಚಿತ್ರರಂಗದ ಸೆನ್ಸಿಬಲ್ ಆಕ್ಟರ್. ಸಿನಿಮಾದಲ್ಲಿ ಅವರು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಗಮನ ಹರಿಸುವಂತೆ, ತಮ್ಮ ಫಿಟ್ನೆಸ್ ಕಡೆಗೂ ಗಮನ ಕೊಡುತ್ತಾರೆ. ಈಗ ವೃತ್ತಿಯಲ್ಲಿ ವೈದ್ಯರಾಗಿರುವ ಧನಂಜಯ್ ಪತ್ನಿ ಧನ್ಯತಾ ಇನ್ನಷ್ಟು ಕಳಜಿವಹಿಸುತ್ತಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಡಾಲಿಗೆ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕಿದ್ದು, ಫ್ರೀಯಾಗಿದ್ದಿದ್ದರಿಂದ ಪತ್ನಿಯೊಂದ ಕಬ್ಬನ್ ಪಾರ್ಕ್‌ನಲ್ಲಿ ಕೆಲವು ಸಮಯ ಕಳೆದಿದ್ದಾರೆ. ಹಾಗೇ ಕ್ಯಾಮರಾಗೂ ಪೋಸ್ ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಇನ್ನು ಧನಂಜಯ್ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ. ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿರುವ ಡಾಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟ ರಾಕ್ಷಸ ನಟಿಸುತ್ತಿರುವ ಪ್ರಮುಖ ಪ್ರಾಜೆಕ್ಟ್‌ 'ಉತ್ತರಕಾಂಡ' ಮೊದಲನೇ ಸ್ಥಾನದಲ್ಲಿದೆ. ಆದರೆ, ಸದ್ಯಕ್ಕೆ ಈ ಸಿನಿಮಾಗೆ ಬ್ರೇಕ್ ಕೊಡಲಾಗಿದೆ. ಇದರೊಂದಿಗೆ 'ಅಣ್ಣ ಫ್ರಮ್ ಮೆಕ್ಸಿಕೋ', 'ಹಲಗಲಿ' ಅಂತಹ ಸಿನಿಮಾಗಳು ಲೈನ್ ಅಪ್‌ನಲ್ಲಿವೆ. ಅದರಲ್ಲೂ 'ಹಲಗಲಿ' ಸಿನಿಮಾ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Daali Dhananjay life style changed after marriage was seen walking with wife Dhanyatha in Cubbon Park;
Read more about: dhananjay fitness
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X