ಗ್ಲೋಬಲ್ ಕನ್ನಡಿಗ ಆಸ್ಟ್ರೇಲಿಯಾಗೆ ಶಿಫ್ಟ್; ಆರೋಗ್ಯ ಸಮಸ್ಯೆ ಜೊತೆ ಕಾರಣ ನೂರಾರು..ಏನದು?

ಕನ್ನಡದ ಜನಪ್ರಿಯ ಯೂಟ್ಯೂಬರ್‌ಗಳಲ್ಲಿ ಗ್ಲೋಬಲ್ ಕನ್ನಡಿಗ (ಮಹಾಬಲ ರಾಮ್) ಕೂಡ ಒಬ್ಬರು. ಅಸಲಿಗೆ ಸಿನಿಮಾದಲ್ಲಿ ನಟರಾಗಿಯೂ ಗುರುತಿಸಿಕೊಂಡಿದ್ದ ರಾಮ್ ಈಗ ಟ್ರಾವೆಲ್ ವ್ಲಾಗರ್ ಆಗಿ ಜನಪ್ರಿಯರಾಗಿದ್ದಾರೆ. ಇವರ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್ ಕನ್ನಡಿಗರಿಗೆ ಕನ್ನಡದಲ್ಲಿ ವಿದೇಶ ಪ್ರವಾಸದ ಅನುಭವನ್ನು ನೀಡುತ್ತಿದೆ.

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್‌ನಲ್ಲಿ ಮಹಾಬಲ ರಾಮ್ ಇಲ್ಲಿವರೆಗೆ ಸುಮಾರು 50ಕ್ಕೂ ಅಧಿಕ ದೇಶಗಳನ್ನು ಕವರ್ ಮಾಡಿದ್ದಾರೆ. ಆಯಾ ದೇಶದ ಪ್ರಮುಖ ನಗರಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್ ವೀಕ್ಷಕರಿಗೆ ವಿದೇಶ ಪ್ರವಾಸದ ಅನುಭವವನ್ನು ನೀಡಿದ್ದಾರೆ. ಇವರ ಯೂಟ್ಯೂಬ್ ಚಾನೆಲ್‌ಗೆ ಸುಮಾರು 5 ಲಕ್ಷ ಸಬ್‌ಸ್ಕ್ರೈಬರ್ಸ್ ಇದ್ದಾರೆ.

Kannada Youtuber and actor Global Kannadiga moved to Australia for 3 months for health reason

ಕಳೆದ ಮೂರೂವರೆ ನಾಲ್ಕು ವರ್ಷಗಳಿಂದ ವಿದೇಶಗಳನ್ನು ಸುತ್ತಿರೋ ಗ್ಲೋಬಲ್ ಕನ್ನಡಿಗ ಈಗ ಹೊಸದೊಂದು ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರಾಮ್ ಅಲ್ಲಿಯೇ ಮನೆಯನ್ನು ಪಡೆದುಕೊಂಡಿದ್ದಾರೆ. ಮೂರು ವರ್ಷಗಳಿಗೆ ವಿಸಾವನ್ನು ಪಡೆದಿದ್ದಾರೆ. ಒಂದಿಷ್ಟು ದಿನ ಅಲ್ಲಿಯೇ ಇರುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣವೇನು? ಆರೋಗ್ಯ ಸಮಸ್ಯೆ ಒಂದೇ ಕಾರಣನಾ? ತಿಳಿಯುವುದಕ್ಕೆ ಮುಂದೆ ಓದಿ.

ಆಸ್ಟ್ರೇಲಿಯಾದಲ್ಲಿ ಗ್ಲೋಬಲ್ ಕನ್ನಡಿಗ

ಮಹಾಬಲ ರಾಮ್ ಅಲಿಯಾಸ್ ಗ್ಲೋಬಲ್ ಕನ್ನಡಿಗ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾರೆ. ಅಲ್ಲಿಯೇ ಒಂದು ವಿಶಾಲವಾದ ಮನೆಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮೂರು ವರ್ಷಗಳ ಕಾಲ ಆ ದೇಶದ ವಿಸಾವನ್ನು ಪಡೆದುಕೊಂಡಿದ್ದಾರೆ. ಹಾಗಿದ್ದರೆ, ಆಸ್ಟ್ರೇಲಿಯಾದಲ್ಲೇ ಸೆಟಲ್ ಆಗುತ್ತಾರಾ? ಮುಂದೆ ತಮ್ಮ ಯೂಟ್ಯೂಬ್ ಚಾನೆಲ್‌ಗೆ ವಿಡಿಯೋಗಳನ್ನು ಹಾಕುವುದಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಅವರ ಇತ್ತೀಚೆಗಿನ ವಿಡಿಯೋದಲ್ಲಿ ಕೊಟ್ಟಿದ್ದಾರೆ.

Also Read
ಡಾ.ಬ್ರೋ ಯೂಟ್ಯೂಬ್ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದೇಕೆ? ಕಾರಣ ಕೊಟ್ಟ ಯೂಟ್ಯೂಬರ್
ಡಾ.ಬ್ರೋ ಯೂಟ್ಯೂಬ್ ವಿಡಿಯೋ ಮಾಡುವುದನ್ನು ಕಮ್ಮಿ ಮಾಡಿದ್ದೇಕೆ? ಕಾರಣ ಕೊಟ್ಟ ಯೂಟ್ಯೂಬರ್

ಆಸ್ಟ್ರೇಲಿಯಾದಲ್ಲಿ ಮನೆ ಮಾಡಿದ್ದೇಕೆ?

ಕಳೆದ ಮೂರುವರೆ ನಾಲ್ಕು ವರ್ಷಗಳಿಂದ ಮಹಾಬಲ ರಾಮ್ ಸುಮಾರು 50ಕ್ಕೂ ಅಧಿಕ ದೇಶಗಳನ್ನು ಸುತ್ತಿದ್ದಾರೆ. ಹಗಲು-ರಾತ್ರಿ ಎನ್ನದೇ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ವಿಡಿಯೋವನ್ನು ಮಾಡಿದ್ದಾರೆ. ಈ ಒತ್ತಡದಿಂದ, ನಿರಂತರ ಪ್ರವಾಸದಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವುದಕ್ಕೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Kannada Youtuber and actor Global Kannadiga moved to Australia for 3 months for health reason

ಆಸ್ಟ್ರೇಲಿಯಾದಲ್ಲಿ ಮನೋಜ್ ಜೊತೆ ರಾಮ್?

ಆಸ್ಟ್ರೇಲಿಯಾ ಪ್ರವಾಸ ಮಾಡುವಾಗ ಮಹಾಬಲ ರಾಮ್ ಅಲ್ಲಿನ ಪ್ರಮುಖ ವ್ಯಕ್ತಿಯನ್ನು ಭೇಟಿಯಾಗಿದ್ದರು. ಅವರೊಂದಿಗೆ ಪರಿಚಯ ಆಗಿ, ಅಲ್ಲಿ ಉಳಿಯುವಂತಾಗಿದೆ. ಮೂಲತ: ಅವರೂ ಬೆಂಗಳೂರಿನವರೇ ಆಗಿದ್ದು, ಆಸ್ಟ್ರೇಲಿಯಾದಲ್ಲಿಯೇ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಬಾಡಿ ಬಿಲ್ಡರ್ ಹಾಗೂ ಫಿಟ್ನೆಸ್ ಟ್ರೈನರ್ ಆಗಿರುವ ಮನೋಜ್ ಅವರ ಮಾರ್ಗದರ್ಶನದಲ್ಲಿ ಗ್ಲೋಬಲ್ ಕನ್ನಡಿಗ ಫಿಟ್ನೆಸ್‌ ಟ್ರೈನಿಂಗ್ ಪಡೆಯಲಿದ್ದಾರೆ. ದೇಹವನ್ನು ಸದೃಢ ಮಾಡಿಕೊಂಡು ಮತ್ತೆ ಜಗತ್ತು ಸುತ್ತುವ ಕೆಲಸಕ್ಕೆ ಮುಂದುವರೆಸಲಿದ್ದಾರೆ.

3 ವರ್ಷ ವಿಸಾ.. 3 ತಿಂಗಳ ವಾಸ

ಹೌದು ಗ್ಲೋಬಲ್ ಕನ್ನಡಿಗನಿಗೆ 3 ವರ್ಷದ ಆಸ್ಟ್ರೇಲಿಯಾ ವಿಸಾ ಸಿಕ್ಕಿದೆ. ಆದರೆ, ಅಲ್ಲಿನ ನಿಯಮದ ಪ್ರಕಾರ ಮೂರು ತಿಂಗಳು ಒಂದು ಕಡೆ ಇರುವುದಕ್ಕೆ ಅಷ್ಟೇ ಸಾಧ್ಯ. ಹೀಗಾಗಿ ಮೂರು ಒಂದು ಕಡೆ ವಾಸವಿದ್ದು, ಬೇರೆ ಕಡೆ ಪಯಣ ಮಾಡುವ ಆಲೋಚನೆ ಅವರದ್ದು. ಹಾಗಂತ ವಿಡಿಯೋ ಅಪ್‌ಲೋಡ್ ಏನೂ ನಿಲ್ಲುವುದಿಲ್ಲ. ಆದರೆ, ಮೆಲ್ಟನ್, ಮೆಲ್ಬೋರ್ನ್ ಸುತ್ತಮುತ್ತಲಿನ ಪ್ರದೇಶಗಳ ವಿಡಿಯೋ ಸಿಗಬಹುದು. ಜೊತೆಗೆ ಗ್ಲೋಬಲ್ ಕನ್ನಡಿಗನ ಫಿಟ್ನೆಸ್ ರೋಟೀನ್, ವರ್ಕ್‌ಔಟ್, ಟ್ರಾವೆಲ್ ವಿಡಿಯೋಗಳನ್ನು ಕೂಡ ನೋಡುವುದಕ್ಕೆ ಸಿಗಬಹುದು.

English summary
Kannada Youtuber and actor Global Kannadiga moved to Australia for 3 months for health reason.
Read more about: health australia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X