65ನೇ ವಯಸ್ಸಿನಲ್ಲಿ ನಾಗಾರ್ಜುನ ಯಂಗ್ ಆಗಿ ಕಾಣಿಸೋದು ಹೇಗೆ? 35 ವರ್ಷದ ಫಿಟ್ನೆಸ್ ಸೀಕ್ರೆಟ್ ಏನು?

ಟಾಲಿವುಡ್ ಕಿಂಗ್ ಅಕ್ಕಿನೇನಿ ನಾಗಾರ್ಜುನ ಸಿನಿಮಾಗಳನ್ನು ಎಷ್ಟು ಕುತೂಹಲದಿಂದ ನೋಡುತ್ತಾರೋ ಅಷ್ಟೇ ಅವರ ಫಿಟ್ನೆಸ್ ಅನ್ನು ಗಮನಿಸುತ್ತಿದ್ದಾರೆ. ಇತ್ತೀಚೆಗಂತೂ
ನಾಗಾರ್ಜುನ ಸಿನಿಮಾಗಳಲ್ಲಿ ಕೊಡ್ತಿರೋ ಸ್ಟೈಲಿಶ್ ಲುಕ್‌ ನೋಡಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಕೂಲಿ' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಾಗಾರ್ಜುನ ತಮ್ಮ 65ನೇ ವಯಸ್ಸಿನಲ್ಲೂ ಯುವ ನಟರಿಗೆ ಕಾಂಪಿಟೇಷನ್ ಕೊಡುತ್ತಿದ್ದಾರೆ. ತಮ್ಮ ಯಂಗ್ ಲುಕ್‌ನಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಯಂಗ್ ಆಗ ಕಾಣಿಸುವುದಷ್ಟೇ ಅಲ್ಲ. ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ತಮಿಳು ನಟ ಧನುಷ್ ನಟನೆಯ 'ಕುಬೇರ' ಸಿನಿಮಾದಲ್ಲೂ ನಟಿಸಿ ಮನಗೆದ್ದಿದ್ದರು. ನಾಗಾರ್ಜುನ ಲುಕ್‌ಗೆ ಫಿದಾ ಆಗಿದ್ದರು.

Telugu Superstar Akkineni Nagarjuna fitness secret food habits and lifestyle

ಅಕ್ಕಿನೇನಿ ಕುಟುಂಬದಲ್ಲಿ ಕುಡಿ ನಾಗಾರ್ಜುನ ಚಿತ್ರರಂಗದಲ್ಲಿ ತಂದೆಯಷ್ಟೇ ಹೆಸರು ಸಂಪಾದಿಸಿದ್ದಾರೆ. ನಾಲ್ಕೈದು ದಶಕಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ಹಿರಿಯ ನಟ ಹಲವು ಬ್ಲಾಕ್ ಬಸ್ಟರ್ ಹಾಗೂ ಟ್ರೆಂಡ್ ಸೆಟ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಗಾರ್ಜುನ ಕೇವಲ ನಟನಷ್ಟೇ ಅಲ್ಲ. ಉದ್ಯಮಿ ಕೂಡ ಹೌದು. ಈ ವಯಸ್ಸಿನಲ್ಲಿ ಸಿನಿಮಾಗಳಲ್ಲಿ ಆಕ್ಟಿವ್ ಆಗಿ ಕೊಳ್ಳುತ್ತಾರೆ. ಇತ್ತೀಚೆಗೆ ಧನುಷ್ ಜೊತೆ ನಟಿಸಿದ ಸಿನಿಮಾ 'ಕುಬೇರ' 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅಂದ್ಹಾಗೆ ನಾಗಾರ್ಜುನ ಅವರ ಫಿಟ್ನೆಸ್ ಸೀಕ್ರೆಟ್ ಏನು? ಅವರ ಲೈಫ್ ಸ್ಟೈಲ್ ಹೇಗಿದೆ?


ನಾಗಾರ್ಜುನ ಲುಕ್‌ನ ರಹಸ್ಯವೇನು?

ಟಾಲಿವುಡ್ ನಟ ನಾಗಾರ್ಜುನ ಯಂಗ್ ಅಂಡ್ ಎನರ್ಜೆಟಿಕ್. ವಯಸ್ಸು 65 ಆಗಿದ್ದರೂ, ಯುವ ನಟರಿಗೆ ಪೈಪೋಟಿ ಕೊಡುವ ನಟ. ಈ ವಯಸ್ಸಿನಲ್ಲಿಯೂ ನಾಗಾರ್ಜುನ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರ ಫಿಟ್ನೆಸ್ ಮೇಲೆ ಎಲ್ಲರಿಗೂ ಕಣ್ಣು. ಹಾಗಿದ್ದರೆ, ಈ ವಯಸ್ಸಿನಲ್ಲೂ ಇಷ್ಟೊಂದು ಫಿಟ್ ಕಾಣಿಸುವುದರ ಹಿಂದಿನ ರಹಸ್ಯವೇನು? ಅನ್ನೋದನ್ನು ಅವರೇ ರಿವೀಲ್ ಮಾಡಿದ್ದಾರೆ. ನಾಗಾರ್ಜುನ ಆಹಾರ ಪದ್ಧತಿಯಲ್ಲಿ ಹೆಚ್ಚೇನೂ ಬದಲಾವಣೆಯಿಲ್ಲ. ಆದರೆ, ಮಿತವಾಗಿ ಸೇವಿಸುತ್ತಾರೆ. ಪ್ರತಿ ದಿನ ವರ್ಕ್‌ಔಟ್ ಮಾಡುತ್ತಾರೆ.

35 ವರ್ಷದಿಂದ ಒಂದೇ ರೊಟೀನ್

ನಾಗಾರ್ಜುನ 35 ವರ್ಷಗಳಿಂದ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಲೇ ಬಂದಿದ್ದಾರೆ. ಮೂರು ದಶಕಗಳಿಂದಲೂ ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರುವಂತೆ ನೋಡಿಕೊಳ್ಳುತ್ತಾ ಬಂದಿದ್ದಾರೆ. ಅದಕ್ಕಾಗಿ ನಿರ್ದಿಷ್ಠವಾದ ಆಹಾರ ಪದ್ಧತಿ ಹಾಗೂ ವ್ಯಾಯಾಮವನ್ನು ಮಾಡುತ್ತಾರೆ. ಇವರ ದಿನಚರಿ ಕಟ್ಟು ನಿಟ್ಟಿನಿಂದ ಕೂಡಿದೆ.

Telugu Superstar Akkineni Nagarjuna fitness secret food habits and lifestyle

ತೆಲುಗು ನಟ ನಾಗಾರ್ಜುನ ಪ್ರತಿದಿನ ಬೆಳಿಗ್ಗೆ ತಪ್ಪದೇ ವರ್ಕ್‌ ಔಟ್ ಮಾಡುತ್ತಾರೆ. ಒಂದು ವಾರದಲ್ಲಿ 5 ರಿಂದ 6 ದಿನಗಳು ಬೆಳಿಗ್ಗೆ ವರ್ಕ್ ಔಟ್ ಮಾಡುವುದನ್ನು ಮಿಸ್ ಮಾಡುವುದಿಲ್ಲ. ಸಾಮಾನ್ಯವಾಗಿ ಒಂದು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ದೇಹದ ತೂಕವನ್ನು ನಿರ್ವಹಣೆ ಮಾಡುವುದಕ್ಕೆ ಕಾರ್ಡಿಯೋ ಮಾಡುತ್ತಾರೆ. ವರ್ಕ್‌ಔಟ್‌ನಲ್ಲಿ ಸ್ನಾಯುಗಳ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಾರೆ. ಹಾಗೇ ಸ್ಟ್ರೆಚಿಂಗ್‌ ಕಡೆಗೂ ಹೆಚ್ಚು ಗಮನ ಹರಿಸುತ್ತಾರೆ ಎಂದು ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ.

ಫುಡ್ ಹ್ಯಾಬಿಟ್ ಹೇಗಿದೆ?

ಇತ್ತೀಚೆಗೆ ಸೆಲೆಬ್ರೆಟಿಗಳು ಉಪವಾಸದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಅದರಲ್ಲೀ ತುಂಬಾನೇ ಫೇಮಸ್ ಆಗಿರೋದು 12:12 ಉಪವಾಸ ವಿಧಾನ. ನಾಗಾರ್ಜುನ ಕೂಡ 12:12ರ ಅನುಪಾತದಲ್ಲಿ ಉಪವಾಸ ಮಾಡುತ್ತಾರೆ. ಅಂದರೆ, 24 ಗಂಟೆಗಳಲ್ಲಿ 12 ಗಂಟೆ ಮಿತವಾಗಿ ಆಹಾರ ಸೇವಿಸಿದರೆ, ಇನ್ನು 12 ಗಂಟೆಗಳ ಕಾಲ ಊಟವನ್ನು ಮಾಡದೆ ಉಪವಾಸವಿರುತ್ತಾರೆ. ರಾತ್ರಿ 7 ರಿಂದ 7.30ರ ಒಳಗೆ ಊಟವನ್ನು ಮುಗಿಸುತ್ತಾರೆ. ಆದರೆ, ಮಲಗುವ ವೇಳೆ ನಾಗಾರ್ಜುನ ಸಿಹಿಯನ್ನು ತಿನ್ನುವುದಕ್ಕೆ ಇಷ್ಟ ಪಡುತ್ತೇನೆ ಎಂದ ಹೇಳಿಕೊಂಡಿದ್ದಾಗಿ ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ.

More from Filmibeat

English summary
Telugu Superstar Akkineni Nagarjuna fitness secret food habits and lifestyle.
Read more about: nagarjuna fitness food
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X