ಶಾನ್ವಿ ಶ್ರೀವತ್ಸವ್ ಮಲಯಾಳಂ ಸಿನಿಮಾ 'ಮಹಾವಿರ್ಯಾರ್' ಫಸ್ಟ್ ಲುಕ್ ರಿಲೀಸ್: ಹೈಲೈಟ್ ಏನು?

ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವತ್ಸವ್ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ದುಬಾರಿ ವೆಚ್ಚದ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಮಾಲಿವುಡ್ ನಟ ನಿವಿನ್ ಪೌಲಿ ನಾಯಕನಾಗಿ ನಟಿಸಿದ್ದು, ಮಲಯಾಳಂನ ಬಹುನಿರೀಕ್ಷಿತ ಸಿನಿಮಾ ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಈ ಸಿನಿಮಾದ ಹೆಸರು 'ಮಹಾವಿರ್ಯಾರ್'. ಈ ಚಿತ್ರದ ಫಸ್ಟ್ ಲುಕ್ ಅನ್ನುಕೇರಳದ ಕೊಚ್ಚಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಕೊರೊನಾ ಕಾಲದಲ್ಲಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಆದ ಸಿನಿಮಾವೆಂದು ಕರೆಯಲಾಗುತ್ತಿದೆ. ನಿವಿನ್ ಪೌಲಿ ಹಾಗೂ ಶಾನ್ವಿ ಶ್ರೀವತ್ಸವ್ ಜೋಡಿ ಮಲಯಾಳಂ ಚಿತ್ರರಂಗಕ್ಕೆ ಹೊಸ ಜೋಡಿಯಾಗಿ ಕಾಣಿಸಿಕೊಳ್ಳಲಿದೆ.

ಚಿತ್ರರಂಗದ ಬಗ್ಗೆ ಮೋಹನ್‌ಲಾಲ್ ಕಾಳಜಿ: ಢೋಂಗಿ ಎಂದ ನೆಟ್ಟಿಗರು, ಕಾರಣವೇನು?
ಟೈಮ್ ಟ್ರಾವೆಲಿಂಗ್ ಕಥೆ ಆಧರಿಸಿದ ಸಿನಿಮಾ

ಮಲಯಾಳಂ ನಟಿ ನಿವಿನ್ ಪೌಲಿ ಹಾಗೂ ಆಸಿಫ್ ಅಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಈ ಸಿನಿಮಾ ಫ್ಯಾಂಟಸಿ ಕಥೆಯನ್ನು ಆಧರಿಸಿದ ಸಿನಿಮಾ. ಈ ಸಿನಿಮಾದ ಕಥೆಯಲ್ಲಿ ಟೈಮ್​ ಟ್ರಾವೆಲಿಂಗ್ ಎಳೆ ಕೂಡ ಇರಲಿದೆ. ಇದರೊಂದಿಗೆ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾವನ್ನು ಮಲಯಾಳಂ ನಟ ನಿವಿನ್ ಪೌಲಿ ಅವರ ಹೋಮ್ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಇವರೊಂದಿಗೆ ಪಿ.ಎಸ್​ ಶ್ಯಾಮ್​ನಾಸ್ ​ಅವರ ಇಂಡಿಯನ್ ಮೂವಿ ಮೇಕರ್ಸ್ ಜಂಟಿಯಾಗಿ 'ಮಹಾವಿರ್ಯಾರ್' ಸಿನಿಮಾವನ್ನು ನಿರ್ಮಾಣ ಮಾಡಿದೆ.

Kannada Actress Shanvi Srivatsav Malayalam Movie Mahaveeryar First Look Released

ನಿವಿನ್ ಪೌಲಿ ಸಿನಿಮಾ ಜೊತೆ ನಿರ್ದೇಶಕ ಅಬ್ರಿದ್ ಶೈನ್ ಕೈ ಜೋಡಿಸಿದ್ದಾರೆ. ಈಗಾಗಲೇ '1983' ಮತ್ತು 'ಆ್ಯಕ್ಷನ್ ಹೀರೋ ಬಿಜು' ಸಿನಿಮಾಗಳಿಗೆ ಅಬ್ರಿದ್ ಶೈನ್ ನಿರ್ದೇಶಕನ ಮಾಡಿದ್ದರು. ಈಗ 'ಮಹಾವಿರ್ಯಾರ್' ಚಿತ್ರಕ್ಕೆ ಮೂರನೇ ಬಾರಿ ಒಂದಾಗಿದ್ದಾರೆ. ವಿಶೇಷ ಅಂದರೆ, ನಿಮಿನ್ ಹಾಗೂ ಆಸಿಫ್ ಅಲಿ ಇಬ್ಬರೂ ಒಟ್ಟಿಗೆ ನಟಿಸದೇ 10 ವರ್ಷವಾಗಿತ್ತು. ಇದೀಗ ದಶಕದ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ.

Kannada Actress Shanvi Srivatsav Malayalam Movie Mahaveeryar First Look Released

'ಮಹಾವಿರ್ಯಾರ್'ದಲ್ಲಿ ದೊಡ್ಡ ತಾರಾ ಬಳಗವೇ ಇದೆ

'ಮಹಾವಿರ್ಯಾರ್' ಚಿತ್ರದಲ್ಲಿ ಸಿದ್ದಿಕಿ, ಶಾನ್ವಿ ಶ್ರೀವಾತ್ಸವ್, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್ ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್, ಲಾಲ್, ಲಾಲು ಅಲೆಕ್ಸ್, ಸೇರಿ ಹಲವರು ನಟಿಸಿದ್ದಾರೆ. ದೊಡ್ಡ ಕಲಾವಿದರನ್ನೇ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿದ್ದಾರೆ.

ಕೊರೊನಾ ಹಾವಳಿಯ ನಡುವೆಯೂ ಈ ದೊಡ್ಡ ಬಜೆಟ್​ ಸಿನಿಮಾದ ಚಿತ್ರೀಕರಣದಲ್ಲಿ​ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದೆ. ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ. ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ.

More from Filmibeat

English summary
Kannada Actress Shanvi Srivatsav malayalam movie mahaveeryar first look released. Nivin Pauly as a Godman and Asif Ali as the King Serve You a Wacky First Look Poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X