Kollam Sudhi Death: 'ಕಟ್ಟಪನಾಯಿಲೆ ಹೃತಿಕ್ ರೋಷನ್' ಖ್ಯಾತಿಯ ಮಲಯಾಳಂ ನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ನಿಧನ
ಕೊಲ್ಲಂ ಸುಧಿ ಸಾವು: ಮಲಯಾಳಂ ನಟ ಹಾಗೂ ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಇಂದು (ಜೂನ್ 5) ನಿಧನರಾಗಿದ್ದಾರೆ. 39 ವರ್ಷದ ಕೊಲ್ಲಂ ಸುಧಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವ ವೇಳೆ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.
ಕೊಲ್ಲಂ ಸುಧಿ ಜೊತೆ ಇನ್ನೂ ಮೂವರು ಮಲಯಾಳಂ ಕಲಾವಿದರು ಪ್ರಯಾಣ ಮಾಡುತ್ತಿದ್ದರು. ಬಿನು ಅಡಿಮಲಿ, ಉಲ್ಲಾಸ್ ಅರೂರ್ ಹಾಗೂ ಮಹೇಶ್ ಅವರಿಗೆ ಗಂಭೀರ ಗಾಯಗಳಾಗಿವೆ. ಈ ನಾಲ್ಕು ಮಂದಿ ಕಾರ್ಯಕ್ರಮದ ನೀಡಲು ಕೇರಳದ ವಡಕರಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವಾಗ, ಪ್ರಯಾಣಿಸುತ್ತಿದ್ದ ಕಾರು ನಿಂತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಬೆಳಗ್ಗೆ ಕೇರಳದ ತ್ರಿಶೂರ್ ಜಿಲ್ಲೆಯ ಕೈಪಮಂಗಲಂ ಸಮೀಪ 4.30ಕ್ಕೆ ಸಂಭವಿಸಿದೆ. ಅಪಘಾತದ ವೇಳೆ ಕಾರಿನ ಮುಂಭಾಗದಲ್ಲಿ ಕೊಲ್ಲಂ ಸುಧಿ ಕೂತಿದ್ದರು. ಹೀಗಾಗಿ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆ ಸಾಗೀಸಲಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೇರಳದ ಸಿಎಂ ಪಿಣಾರಾಯಿ ವಿಜಯನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕೊಲ್ಲಂ ಸುಧಿ, ಕಿರುತೆರೆಯಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಅಲ್ಲದೆ ಮಿಮಿಕ್ರಿ ಶೋಗಳನ್ನೂ ನೀಡುತ್ತಿದ್ದರು. ಮಲಯಾಳಂನ ಟಿವಿ ಶೋ ಸ್ಟಾರ್ ಮ್ಯಾಜಿಕ್ ಮೂಲಕ ಜನಪ್ರಿಯರಾಗಿದ್ದರು. ಇವರ ವಿಡಂಬನೆಗೆ ವೀಕ್ಷಕರು ಮನ ಸೋತಿದ್ದರು. ಕಿರುತೆರೆ, ಟಿವಿ ಶೋ ಅಷ್ಟೇ ಅಲ್ಲದೆ. ಕೆಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು. 2015ರಲ್ಲಿ 'ಕಾಂತಾರಿ' ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಕಟ್ಟಪನಾಯಿಲೆ ಹೃತಿಕ್ ರೋಷನ್ ಪಾತ್ರ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.


Click it and Unblock the Notifications











