ನಟಿಯಿಂದ ಆರೋಪ, ಪೊಲೀಸ್ ದಾಳಿ ವೇಳೆ ಹೋಟೆಲ್ ಕಿಟಕಿ ಹಾರಿ ನಟ ಶೈನ್ ಟಾಮ್ ಚಾಕೊ ಪರಾರಿ.. ಏನಿದು ಘಟನೆ?

ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗ ಹೇಮಾ ಕಮಿಟಿ ವರದಿಯಿಂದ ಚೇತರಿಸಿಕೊಳ್ಳುತ್ತಿವೆ. ಅಷ್ಟೇ ಮತ್ತೊಂದು ಘಟನೆ ನಡೆದಿದೆ. ಕೆಲವೇ ದಿನಗಳ ಹಿಂದಷ್ಟೇ ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಖಳನಟನಿಂದ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು. ನಟಿಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ನಟಿಗೆ ದೂರು ನೀಡುವಂತೆ ಒತ್ತಡ ಹೆಚ್ಚಾಗ ತೊಡಗಿತ್ತು.

ಈ ಬೆನ್ನಲ್ಲೇ ಕೊನೆಗೂ ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದಾರೆ. ಈ ದೂರಿನಲ್ಲಿ ಮಾಲಿವುಡ್‌ ಚಿತ್ರರಂಗದ ಜನಪ್ರಿಯ ನಟ ಶೈನ್ ಟಾಮ್ ಚಾಕೊ ಹೆಸರನ್ನು ದೂರಿನಲ್ಲಿ ಹೆಸರಿಸಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಮಾದಕ ವಸ್ತುವಿನ ನಶೆಯಲ್ಲಿ ತನ್ನನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಈ ದೂರಿನಲ್ಲಿ ತಿಳಿಸಿದಿದ್ದಾರೆ.

Vincy Aloshious allegation against shine tom chacko escapes from hotel room while police raid

ಈ ದೂರನ್ನು ಮಲಯಾಳಂ ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಅಬಕಾರಿ ಇಲಾಖೆ ಕೂಡ ನಟಿ ವಿನ್ಸಿ ಅಲೋಶಿಯಸ್ ಅವರನ್ನು ಈ ವಿಷಯದ ಬಗ್ಗೆ ವಿಚಾರಣೆ ಮಾಡಲಿದೆ ಎನ್ನಲಾಗಿದೆ. ಇತ್ತ ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್ ಪೆಡ್ಲರ್ ಕೂಡ ಈ ಮಲಯಾಳಂ ನಟನ ಹೆಸರನ್ನು ಬಾಯಿಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹೇಳಲಾಗಿದೆ. ಈ ಮಧ್ಯೆ ಈ ನಟ ತಂಗಿದ್ದ ಹೋಟೆಲ್ ಒಂದರ ರೂಮ್‌ಗೆ ಪೊಲೀಸರು ಹೋದಾಗ ಕಿಟಕಿ ಪರಾರಿಯಾಗಿರುವ ಘಟನೆ ಕೂಡ ನಡೆದಿದೆ.

"ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ" ನಟಿ ನಜ್ರಿಯಾ ನಜೀಮ್; ಬೆಂಬಲಕ್ಕೆ ನಿಂತ ಮೇಘನಾ ರಾಜ್
ಶೈನ್ ಟಾಮ್ ಚಾಕೊ ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟ. ಪೋಷಕ ಪಾತ್ರ ಹಾಗೂ ಖಳನಾಯಕನಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಹಾಗೂ ತಮಿಳಿನ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿರುವ ಅಜಿತ್ ಕುಮಾರ್ ನಟನೆಯ ' ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿ ಗಮನ ಸೆಳೆದಿದ್ದರು. ಈಗ ಇದೇ ನಟನ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬರುತ್ತಿದೆ.

ಶೈನ್ ಟಾಮ್ ಚಾಕೊ ತಮ್ಮ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ನಿಮಿತ್ತ ಕೊಚ್ಚಿಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಪೊಲೀಸರಿಗೆ ಶೈನ್ ಟಾಪ್ ಚಾಕೊ ಹೋಟೆಲ್ ರೂಮ್‌ನಲ್ಲಿ ಡ್ರಗ್ ಬಳಸುತ್ತಿದ್ದಾರೆಂಬ ಮಾಹಿತಿ ಸಿಕ್ಕಿತ್ತು. ಆ ಕೂಡಲೇ ಪೊಲೀಸರು ಮಧ್ಯರಾತ್ರಿ ಹೋಟೆಲ್ ರೂಮ್ ಮೇಲೆ ದಾಳಿ ಮಾಡಿದ್ದರು. ಚಾಕೋ ತಂಗಿದ್ದ ರೂಮ್ ನಂ 314 ಬಾಗಿಲು ಬಡಿಯುತ್ತಿದ್ದಂತೆ, ನಟ ಕಿಟಕಿಯಿಂದ ಜಿಗಿದು ಪರಾರಿಯಾಗಿದ್ದಾರೆ.

Vincy Aloshious allegation against shine tom chacko escapes from hotel room while police raid

ಚಾಕೋ ಪೊಲೀಸರೇ ಬಂದಿದ್ದಾರೆಂದು ಊಹಿಸಿ, ತಾನು ಉಳಿದುಕೊಂಡಿದ್ದ ಹೋಟೆಲ್ ರೂಮ್‌ನಿಂದ ಎರಡನೇ ಫ್ಲೋರ್‌ಗೆ ಜಿಗಿದಿದ್ದಾರೆ. ಬಳಿಕ ಮೆಟ್ಟಿಗಳ ಮೂಲಕ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಿಂದ ಪೊಲೀಸರಿಗೆ ಸಿಕ್ಕಿದೆ. ಪೊಲೀಸ್ ದಾಳಿಯ ವೇಳೆ ಶೈನ್ ಟಾಮ್ ಚಾಕೋ ರೂಮ್‌ನಲ್ಲಿ ಏನಾದರೂ ಸಿಕ್ಕಿದೆಯೇ ಎಂಬುವುದು ಇನ್ನೂ ಬಹಿರಂಗವಾಗಿಲ್ಲ. ಈ ಘಟನೆ ನಡೆಯುವುದಕ್ಕೂ ಮುನ್ನವೇ ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಕೂಡ ಡ್ರಗ್ ಸೇವನೆ ಹಾಗೂ ಅನುಚಿತ ವರ್ತನೆ ಬಗ್ಗೆ ದೂರನ್ನು ನೀಡಿದ್ದರು.

ನಟಿ ವಿನ್ಸಿ ಅಲೋಶಿಯಸ್ ದೂರು ನೀಡುವುದಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಶೈನ್ ಅಸಭ್ಯ ವರ್ತನೆ ಬಗ್ಗೆ ವಿಡಿಯೋವನ್ನು ಶೇರ್ ಮಾಡಿದ್ದರು. ಅದರಲ್ಲಿ "ದೃಶ್ಯವೊಂದನ್ನು ಅಭ್ಯಾಸ ಮಾಡುವ ಸಮಯದಲ್ಲಿ ಏನೋ ಬಿಳಿ ಬಣ್ಣದ ವಸ್ತುವನ್ನು ಟೇಬಲ್ ಮೇಲೆ ಉಗುಳಿದರು. ಆಗ ಅವರು ಶೂಟಿಂಗ್ ಸೆಟ್‌ನಲ್ಲಿ ಡ್ರಗ್ ಅನ್ನು ಬಳಸಿದ್ದಾರೆಂಬುದು ಖಾತ್ರಿಯಾಗಿತ್ತು. ಇದು ಅಲ್ಲಿದ್ದವರಿಗೆ ಇರಿಸು ಮುರಿಸು ಆಗಿತ್ತು. ಡ್ರಗ್ ತೆಗೆದುಕೊಳ್ಳುವುದು ಅವರ ವೈಯಕ್ತಿಕ ವಿಚಾರ. ಆದರೆ, ಶೂಟಿಂಗ್ ಸೆಟ್‌ನಲ್ಲಿ ಡ್ರಗ್ಸ್ ಸೇವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ವಿಡಿಯೋದಲ್ಲಿ ಹೇಳಿದ್ದರು.

More from Filmibeat

English summary
Vincy Aloshious's allegation against Shine Tom Chacko: Actor escapes from hotel room while police raid
Read more about: actor case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X