ಪುನೀತ್ ರಾಜಕುಮಾರ್ ಕಂಠಸಿರಿಯಲ್ಲಿ 'ಬಾಡಿ ಗಾಡ್' ಹಾಡು, ಶೀಘ್ರ ಬಿಡುಗಡೆ
ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ, ನಿರ್ಮಾಪಕ ಮಾತ್ರವಲ್ಲ ಬಹಳ ಒಳ್ಳೆಯ ಹಾಡುಗಾರರೂ ಆಗಿದ್ದರು. ಎಳವೆಯಿಂದಲೇ ಅವರು ಹಲವು ಸಿನಿಮಾ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ.
ನಾಯಕ ನಟನಾದ ಬಳಿಕವೂ ಹಲವು ಸಿನಿಮಾ ಹಾಡುಗಳನ್ನು ಪುನೀತ್ ಹಾಡಿದ್ದಾರೆ. ತಮ್ಮ ಸಿನಿಮಾಗಳು ಮಾತ್ರವೇ ಅಲ್ಲದೆ ಇತರರ ಸಿನಿಮಾಗಳಿಗೂ ಹಾಡಿದ್ದಾರೆ. ಹೊಸಬರ. ಹಳಬರ ಸಿನಿಮಾ ಎಂದೆಲ್ಲ ಭೇದ ಮಾಡದೆ ಪುನೀತ್ ತಮ್ಮ ಕಂಠದಾನ ಮಾಡಿದ್ದಾರೆ.
ಪುನೀತ್ ಅಜರಾಮರ: ಆರ್ದ್ರಗೊಳಿಸುತ್ತದೆ ಪಿಆರ್‌ಕೆ ಸಲ್ಲಿಸಿದ ಗೌರವ
ಪುನೀತ್ ರಾಜ್ ಕುಮಾರ್ 'ಬಾಡಿ ಗಾಡ್' ಸಿನಿಮಾಕ್ಕಾಗಿ ವಿಶೇಷ ಹಾಡೊಂದನ್ನು ಹಾಡಿದ್ದು, ಸಿನಿಮಾ ಹಾಗೂ ಹಾಡು ಶೀಘ್ರವೇ ಬಿಡುಗಡೆ ಆಗಲಿದೆ. 'ಆರೇಸ ಡಂಕಣಕ' ಎಂದು ಪ್ರಾರಂಭವಾಗುವ ಬಹಳ ಭಿನ್ನವಾದ ಹಾಡನ್ನು ಪುನೀತ್ ಈ ಸಿನಿಮಾಕ್ಕಾಗಿ ಹಾಡಿದ್ದಾರೆ.

'ಜೇಮ್ಸ್' ಟೀಸರ್ ನೋಡಿ ಮೆಚ್ಚಿದ ಪ್ರಭಾಸ್: ಅಪ್ಪು ಲಕ್ಷಾಂತರ ಅಭಿಮಾನಿಗಳಿಗೆ ಈ ಚಿತ್ರ ವಿಶೇಷ ಎಂದ ಬಾಹುಬಲಿ
'ಜೀವ', 'ಪಾರಿಜಾತ', 'ಗಣಪ', 'ಕರಿಯ 2' ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಭು ಶ್ರೀನಿವಾಸ್ ಇದೀಗ 'ಬಾಡಿ ಗಾಡ್' ಸಿನಿಮಾ ಮೂಲಕ ಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ''ಇದೊಂದು ಬ್ಲಾಕ್ ಹ್ಯೂಮರ್ ಮಾದರಿಯ ಕತೆ ಹೊಂದಿದ್ದು, ಸಿನಿಮಾದಲ್ಲಿ ಹಲವು ಭಿನ್ನ ಪಾತ್ರಗಳು ಇವೆ'' ಎಂದಿದ್ದಾರೆ.

'ಪದ್ಮಜರಾವ್ ರವರು ಮುಖ್ಯಪಾತ್ರ ಒಂದನ್ನು ನಿಭಾಯಿಸಿದ್ದಾರೆ, ಮೊದಲ ಬಾರಿ ದೀಪಿಕಾ ಆರಾಧ್ಯ ಎಂಬ ನವನಟಿ ನಟಿಸಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ 'ಹತ್ರೊ ಯೆಲ್ಲಾ ಬೋರ್ಡ್' ಎಂಬ ಹಾಡು ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. 'ಯೆಲ್ಲೊ ಬೋರ್ಡ್' ಸಿನಿಮಾದ ಹಾಡು ಇದಾಗಿದ್ದು, ಕ್ಯಾಬ್ ಡ್ರೈವರ್‌ಗಳಿಗಾಗಿ ಈ ಹಾಡಿನ ಸಂಭಾವನೆಯನ್ನು ಪುನೀತ್ ನಿರಾಕರಿಸಿದ್ದರಂತೆ.


Click it and Unblock the Notifications











