ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ನಿಧನ!

ಹಿರಿಯ ಗಾಯಕಿ ಸಂಧ್ಯಾ ಮುಖೋಪಾಧ್ಯಾಯ ಎಂದೇ ಚಿರಪರಿಚಿತರಾಗಿರುವ, ಬೆಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ನಿಧನರಾಗಿದ್ದಾರೆ. ಸಂಧ್ಯಾ ಮುಖರ್ಜಿ ಮಂಗಳವಾರ (ಫೆಬ್ರವರಿ 15)ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೋವಿಡ್ -19 ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಹೃದಯದ ಕಾಯಿಲೆ, ಬಹು-ಅಂಗಾಂಗಗಳ ವೈಫಲ್ಯವಾಗಿತ್ತು. ಹೀಗಾಗಿ ಚಿಕಿತ್ಸೆಯನ್ನು ಮುಂದುವರೆಸಿದ್ದರು ಆದರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗಾಯಕಿ ಸಂಧ್ಯಾ ಮುಖರ್ಜಿ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.

ಗಾಯಕಿ ಸಂಧ್ಯಾ ಮುಖರ್ಜಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಸಂಧ್ಯಾ ಮುಖರ್ಜಿ ಜನವರಿ ಕೊನೆಯ ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ (ಫೆಬ್ರವರಿ 15)ರಂದು ಸಂಜೆ 7.30ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಂತರ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಮಾಹಿತಿ ಪ್ರಕಟಿಸಿದ್ದಾರೆ. ಸಂಧ್ಯಾ ಮುಖರ್ಜಿಯವರು 2022-23ರ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು

ಈ ವಯಸ್ಸಿನಲ್ಲಿ ಪ್ರಶಸ್ತಿ ನೀಡಿ ಅವಮಾನಿಸಬೇಡಿ: ಪದ್ಮ ಪ್ರಶಸ್ತಿ ನಿರಾಕರಿಸಿದ ಹಿರಿಯ ಗಾಯಕಿ
ಪದ್ಮಶ್ರೀ ಪ್ರಶಸ್ತಿ ಕಿರಿಯ ಕಲಾವಿದರಿಗೆ ಹೆಚ್ಚು ಅರ್ಹವಾಗಿದೆ ಮತ್ತು ತಮ್ಮಂತವರಿಗೆ ಅಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದ್ದರು. ದೇಶದ ನಾಗರಿಕ ನೀಡುವ ಅತ್ಯುನ್ನತ ಗೌರವವನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಎರಡನೇ ವ್ಯಕ್ತಿಯಾಗಿದ್ದರು ಸಂಧ್ಯಾ ಮುಖರ್ಜಿ. ತನ್ನ ತಾಯಿ ಪದ್ಮಶ್ರೀ ಪುರಸ್ಕ್ರತೆ ಎಂದು ಹೆಸರಿಸಲು ಇಚ್ಛಿಸುವುದಿಲ್ಲ ಮತ್ತು ತನ್ನ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಅವಮಾನ ಅನುಭವಿಸಿದೆ ಎಂದು ಮುಖರ್ಜಿ ಅವರ ಪುತ್ರಿ ಸೌಮಿ ಸೆನ್‍ಗುಪ್ತಾ ಹೇಳಿದ್ದರು.

Veteran Singer Sandhya Mukherjee Passes Away
60 ಮತ್ತು 70ರ ದಶಕದಲ್ಲಿ ಸಂಧ್ಯಾ ಮುಖರ್ಜಿ ಅವರು ಬೆಂಗಾಳಿ ಭಾಷೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಹನ್ನೆರಡು ಇತರ ಭಾಷೆಗಳಲ್ಲೂ ಅವರು ಹಾಡಿದ್ದಾರೆ. ಹೇಮಂತ್​ ಮುಖರ್ಜಿ ಅವರ ಜತೆ ಸೇರಿ ಸಾಕಷ್ಟು ರೊಮ್ಯಾಂಟಿಕ್​​ ಹಾಡುಗಳನ್ನು ಹಾಡಿದ್ದಾರೆ.ಹೇಮಂತ್ ಮುಖರ್ಜಿ ಅವರೊಟ್ಟಿಗಿನ ಅವರ ಯುಗಳ ಗೀತೆಗಳು ಈಗಲೂ ಜನಪ್ರಿಯ. ಪಶ್ಚಿಮ ಬಂಗಾಳ ನೀಡುವ 'ಬಂಗಾ ಬಿಭೂಷಣ' ಪ್ರಶಸ್ತಿಯನ್ನು ಸಂಧ್ಯಾ ಅವರಿಗೆ ನೀಡಿ ಗೌರವಿಸಲಾಗಿದೆ. ಇದು ಪಶ್ಚಿಮ ಬಂಗಾಳ ಸರ್ಕಾರ ನೀಡುವ ಅತ್ಯುತ್ತಮ ಗೌರವ ಆಗಿದೆ. 1970ರಲ್ಲಿ ತೆರೆಗೆ ಬಂದ 'ಜಯ್ ಜಯಂತಿ' ಸಿನಿಮಾದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಖ್ಯಾತ ಸಂಗೀತ ನಿರ್ದೇಶಕ, ಗಾಯಕ 'ಬಪ್ಪಿ ಲಹಿರಿ' ನಿಧನ!
ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವಂತ ತೃಣಮೂಲ ಕಾಂಗ್ರೆಸ್ ನಾಯಕ ಶಂತನು ಸೇನ್ ಹಂಚಿಕೊಂಡಿದ್ದು, ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಅವರ ನಿಧನ ದುಃಖ ತಂದಿದೆ. ಅವರ ನಿಧನದಿಂದ ನನ್ನ ತೀವ್ರ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಹಾಡುಗಳ ಮೂಲಕ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಬದುಕುಳಿದಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

More from Filmibeat

English summary
Legendary Bengali singer Sandhya Mukherjee breathed her last
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X