»   » ಅಕ್ಷಯ್ 'ಟಾಯ್ಲೆಟ್' ಚಿತ್ರದ ಮೊದಲ ಹಾಡು ಹೇಗಿದೆ ನೋಡಿ..

ಅಕ್ಷಯ್ 'ಟಾಯ್ಲೆಟ್' ಚಿತ್ರದ ಮೊದಲ ಹಾಡು ಹೇಗಿದೆ ನೋಡಿ..

Posted By:
Subscribe to Filmibeat Kannada

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡ್ನೆಕರ್ ಅಭಿನಯದ 'ಟಾಯ್ಲೆಟ್; ಏಕ್ ಪ್ರೇಮ್ ಕಥಾ' ಚಿತ್ರ ಭಾರತದಾದ್ಯಂತ ಈಗಾಗಲೇ ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ರವರ 'ಸ್ವಚ್ಛ ಭಾರತ' ಅಭಿಯಾನದ ಪ್ರಚಾರಕ್ಕೆ ಉತ್ತೇಜನ ನೀಡುವ ಚಿತ್ರ ಕಥಾವಸ್ತುವಿನಿಂದಲೇ ಸಿನಿ ಪ್ರಿಯರನ್ನು ಆಕರ್ಷಿಸಿದೆ.[ಅಕ್ಷಯ್ ಚಿತ್ರದ ಟ್ರೈಲರ್‌ಗೆ ಸಿಬಿಎಫ್‌ಸಿ ಅಧ್ಯಕ್ಷ ಹೀಗಾ ಹೇಳೋದು..!]

ಅಂದಹಾಗೆ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದ್ದು, ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡನ್ನು ಶೇರ್ ಮಾಡಿದ್ದಾರೆ. 'ಹ್ಯಾನ್ಸ್ ಮತ್ ಪಗ್ಲಿ' ಹೆಸರಿನ ಈ ಮೊದಲ ಹಾಡು ಕೇಶವ್ ಮತ್ತು ಜಯ ರವರ ಲವ್ ಸ್ಟೋರಿ ಕುರಿತದ್ದಾಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಭೂಮಿ ಪೆಡ್ನೆಕರ್ ಮೇಲೆ ಪ್ರೀತಿಯಾಗಿ ಅವರು ಹಿಂದೆ ಬೀಳುವ ಹಾಸ್ಯಮಯವಾದ ಚಿತ್ರಣ ಈ ಹಾಡಿನಲ್ಲಿದೆ.

Watch Akshay Kumar starrer 'Toilet- Ek Prem Katha' film first song

'ಹ್ಯಾನ್ಸ್ ಮತ್ ಪಗ್ಲಿ' ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಮತ್ತು ಶ್ರೇಯಾ ಘೋಶಲ್ ರವರು ಹಾಡಿದ್ದಾರೆ. ರೊಮ್ಯಾಂಟಿಕ್ ಲವ್ ಸೀನ್ ಗಳನ್ನು ಹೊಂದಿರುವ ಈ ಹಾಡು ಬಹಳ ಸೊಗಸಾಗಿ ಮೂಡಿಬಂದಿದೆ. ಈ ಹಾಡು ಈಗಾಗಲೇ 8.3 ಲಕ್ಷ ಬಾರಿ ವೀಕ್ಷಣೆ ಪಡೆದಿದ್ದು ಉತ್ತಮ ರೆಸ್ಪಾನ್ಸ್ ಪಡೆದಿದೆ.[ಅಕ್ಷಯ್ ಕುಮಾರ್ 'ಟಾಯ್ಲೆಟ್' ಚಿತ್ರದ ಟ್ರೇಲರ್ ಬಿಡುಗಡೆ]

'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರವನ್ನು 'ವಿಯಾಕಾಂ ಮೋಷನ್ ಪಿಕ್ಚರ್' ಬ್ಯಾನರ್ ಅಡಿಯಲ್ಲಿ ಶ್ರೀ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಸನಾ ಖಾನ್ ಮತ್ತು ಇತರರು ಅಭಿನಯಿಸಿದ್ದಾರೆ. ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಕುರಿತು ನೈಜ ಘಟನೆಗಳನ್ನು ಕುರಿತು ನಿರ್ಮಿಸಿರುವ ಈ ಚಿತ್ರ ಆಗಸ್ಟ್ 11 ರಂದು ತೆರೆಗೆ ಬರಲಿದೆ. ಚಿತ್ರದ ಮೊದಲ ಹಾಡು ಈ ಕೆಳಗಿನಂತಿದೆ ನೋಡಿ..

English summary
Akshay Kumar releases new song from his film 'Toilet: Ek Prem Katha' titled 'Hans mat pagli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada