»   » ಅಕ್ಷಯ್ ಕುಮಾರ್ 'ಟಾಯ್ಲೆಟ್' ಚಿತ್ರದ ಟ್ರೇಲರ್ ಬಿಡುಗಡೆ

ಅಕ್ಷಯ್ ಕುಮಾರ್ 'ಟಾಯ್ಲೆಟ್' ಚಿತ್ರದ ಟ್ರೇಲರ್ ಬಿಡುಗಡೆ

Posted By:
Subscribe to Filmibeat Kannada

ಅಕ್ಷಯ್ ಕುಮಾರ್ ನಟನೆಯ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾದ ಟ್ರೇಲರ್ ನಿನ್ನೆ (ಜೂನ್11)ಕ್ಕೆ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.

ಅಕ್ಷಯ್ ಚಿತ್ರದ ಟ್ರೈಲರ್‌ಗೆ ಸಿಬಿಎಫ್ ಸಿ ಅಧ್ಯಕ್ಷ ಹೀಗಾ ಹೇಳೋದು..!

ಯೂ ಟ್ಯೂಬ್ ನಲ್ಲಿ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಟ್ರೇಲರ್ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡಿದಿದೆ. ಅಲ್ಲದೆ 'ಇಂತಹ ಸಾಮಾಜಿಕ ಸಂದೇಶದ ಸಿನಿಮಾವನ್ನು ಟ್ಯಾಕ್ಸ್ ಫ್ರೀ ಮಾಡಬೇಕು' ಅಂತ ಅನೇಕರು ಹೇಳುತ್ತಿದ್ದಾರೆ. ಮುಂದೆ ಓದಿ..

ಟ್ರೇಲರ್ ರಿಲೀಸ್

'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾದ ಟ್ರೇಲರ್ ರಿಲೀಸ್ ಆಗಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಒಂದು ದಿನದ ಒಳಗೆ ಯೂ ಟ್ಯೂಬ್ ನಲ್ಲಿ 54 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ

ಶೌಚಾಲಯದ ಬಗ್ಗೆ

ಟೈಟಲ್ ಹೇಳುವ ಹಾಗೆ ಈ ಸಿನಿಮಾ ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಇದ್ದು, ನೈಜ ಘಟನೆಗಳನ್ನು ಆಧಾರಿಸಿ ಸಿನಿಮಾ ಮಾಡಲಾಗಿದೆಯಂತೆ.

ದೇಶದ ಗಂಭೀರ ಸಮಸ್ಯೆ ಬಗ್ಗೆ ಅಕ್ಷಯ್ ಕುಮಾರ್ ಟ್ವೀಟ್! ಏನದು?

ಕೇಶವ ಪಾತ್ರದಲ್ಲಿ ಅಕ್ಷಯ್

ಅಕ್ಷಯ್ ಕುಮಾರ್ ಇಲ್ಲಿ ಕೇಶವ ಎನ್ನುವ ಹುಡುಗನ ಪಾತ್ರವನ್ನು ಮಾಡಿದ್ದಾರೆ. ಕೇಶವ ಮತ್ತು ಅವನ ಹೆಂಡತಿ ಜಯಾ ನಡುವೆ ಶೌಚಾಲಯದ ವಿಷಯಕ್ಕೆ ಜಗಳ ಆಗುತ್ತದೆ.

ಸಾಮಾಜಿಕ ಸಂದೇಶ

ಇಂದಿಗೂ ಭಾರತದ ಎಷ್ಟೊ ಹಳ್ಳಿಗಳಲ್ಲಿ ಸರಿಯಾಗಿ ಶೌಚಾಲಯ ಇಲ್ಲ. ಅಲ್ಲದೆ ಮಹಿಳೆಯರು ಬಯಲಿನಲ್ಲಿಯೇ ಮಲವಿಸರ್ಜನೆ ಮಾಡುವ ಸ್ಥಿತಿ ಇವತ್ತಿಗೂ ಇದೆ. ಇಂತಹ ಗಂಭೀರ ವಿಷಯಗಳನ್ನು ಸಿನಿಮಾದಲ್ಲಿ ಹೇಳಿದ್ದಾರೆ.

'ಸ್ವಚ್ಛ ಭಾರತ' ಕಲ್ಪನೆ

ಪ್ರಧಾನಿ ಮೋದಿ ಅವರ 'ಸ್ವಚ್ಛ ಭಾರತ' ಅಭಿಯಾನದಂತೆ ಈ ಸಿನಿಮಾ ಇದ್ದು, ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ಮೋದಿ ಅವರನ್ನು ಭೇಟಿ ಆಗಿದ್ದರು.

ಟ್ಯಾಕ್ಸ್ ಫ್ರೀ

'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾವನ್ನು ವೀಕ್ಷಿಸಿರುವ ಸೆನ್ಸಾರ್ ಬೋರ್ಡ್ ಚಿತ್ರವನ್ನು ತೆರಿಗೆ ಮುಕ್ತ ಮಾಡಿ ಅಂತ 'ಟ್ಯಾಕ್ಸ್ ಫ್ರೀ' ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಒಂದು ಅಭಿಯಾನ ಶುರು ಮಾಡಿದೆ. ಅಲ್ಲದೆ ಇದಕ್ಕೆ ಸಾಕಷ್ಟು ಜನರು ಸಹ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

English summary
Akshay Kumar starrer 'Toilet - Ek Prem Katha' movie trailer is out and it Has A Powerful Social Message.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada