ದಂಡಂ ದಶಗುಣಂ: ರಮ್ಯಾ ರಾದ್ಧಾಂತ, ಗಣೇಶ್ ವೇದಾಂತ

Ramya
ಚಿತ್ರ(ರಣ)ರಂಗಕ್ಕೆ ಬಂದಾಗಿನಿಂದಲೂ ಆಗಾಗ ವಿವಾದದಲ್ಲಿ ಸಿಕ್ಕಿಕೊಳ್ಳುವ ನಟಿ ರಮ್ಯಾ. ದಂಡಂ ದಶಗುಣಂ ನಿರ್ಮಾಪಕ ಎ. ಗಣೇಶ್, ರಮ್ಯಾ ವಿರುದ್ಧ "ಆಡಿಯೋ ರಿಲೀಸ್ ಗೆ ರಮ್ಯಾ ಕರೆದರೂ ಬರಲಿಲ್ಲ. ಇದು ಮಹಾ ಅವಮಾನ ಹಾಗೂ ಅನ್ಯಾಯ" ಎಂದು ಸಿಡಿದೆದ್ದು ಮಾಧ್ಯಮಕ್ಕೆ ಮೊರೆ ಹೋದರು. ರಮ್ಯಾಗೆ ನಿಷೇಧ ಹೇರಿ ಚಿತ್ರರಂಗ ದೊಡ್ಡ ಸುದ್ದಿಗೆ ಕಾರಣವಾಯ್ತು.

ರಮ್ಯಾ ಮಾಧ್ಯಮದೆದುರು 'ಗೋಳೋ' ಎಂದು ಅತ್ತಿದ್ದಾಯ್ತು. ಆಡಿಯೋ ರಿಲೀಸ್ ವೇಳೆ ಬರದೇ ಶಾಪಿಂಗ್ ಮಾಡುತ್ತಿದ್ದ ರಮ್ಯಾ ಹಾಗೂ ಶೂಟಿಂಗ್ ಗೆ ತೊಂದರೆಯಾಗಿ ರಮ್ಯಾರಿಂದ ತೆಗೆದುಕೊಂಡ ದುಡ್ಡನ್ನು ವಾಪಸ್ ಮಾಡದ ನಿರ್ಮಾಪಕ ಗಣೇಶ್ ಇಬ್ಬರನ್ನೂ ಕೂಡಿಸಿಕೊಂಡು ಹಿರಿಯನಟ ಅಂಬರೀಷ್ ಬುದ್ಧಿ ಹೇಳಿದ್ದು. ಅವರಿಬ್ಬರಿಗೆ ಬುದ್ಧಿ ಬರುವ ಮೊದಲೇ ಪ್ರಮೋಶನ್ ಸರಿಯಾಗಿ ನಡೆಯದೇ ಚಿತ್ರ ತೋಪೆದ್ದು ಹೋಯ್ತು.

ದಂಡಂ ದಶಗುಣಂ ಚಿತ್ರದ ನಿರ್ಮಾಪಕ ಹಾಗೂ ನಟಿ ಮಾತ್ರ ಸುದ್ದಿಯಾಗಿ ನಾಯಕ ನಟ ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಕೆ. ಮಾದೇಶ್ ಸುದ್ದಿಯಿಂದಲೂ ಮರೆಯಾಗಿದ್ದು ಆಶ್ಚರ್ಯ ತರುವಂತಿದೆ. ಆಮೇಲೆ ರಮ್ಯಾಗೆ ಕೊಡಬೇಕಾದದ್ದನ್ನು ಕೊಟ್ಟು, ಮತ್ತೆ ರಮ್ಯಾ ಗಣೇಶ್ ಮೊದಲಿನಂತೆ(?) ಇರುತ್ತೇವೆಂಬಲ್ಲಿಗೆ ಘಟನೆ ಸುಖಾಂತ್ಯವಾಯ್ತು.

ಚಿತ್ರರಂಗದಲ್ಲಿ ನಟಿಗೆ ನಿಷೇಧ ಹೇರಿದ ಘಟನೆ ಎಲ್ಲರೂ ಚರ್ಚಿಸುವಂತಾಯ್ತು. ಒಂದೇ ಕುಟುಂಬ ಎಂದು ಆಗಾಗ ಹೇಳಿಕೊಳ್ಳುವ ಚಿತ್ರರಂಗದಲ್ಲಿ 'ಎಲ್ಲವೂ ಸರಿಯಿಲ್ಲ' ಎಂಬ ಅಂಶ ಆಗಾಗ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ನೆರೆಭಾಷೆಯ ಚಿತ್ರರಂಗದ ಒಗ್ಗಟ್ಟು, ಸಂಭಾವನೆ, ಮೇಕಿಂಗ್ ಹಾಗೂ ಮಾರುಕಟ್ಟೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಚಿತ್ರರಂಗದ ಕರ್ಮಿಗಳು, ಅದ್ಯಾವುದನ್ನು ಅಳವಡಿಸಿಕೊಳ್ಳದೇ ರಿಮೇಕ್ ಸ್ವಮೇಕ್ ಅನ್ನುತ್ತಾ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ಆಗಾಗ ಪೈರಸಿ, ಡಬ್ಬಿಂಗ್ ಅದೂ ಇದೂ ಎಂದು ಕಿತ್ತಾಡುತ್ತಾ ಪ್ರೇಕ್ಷಕರ ಸಹನೆ ಕೆರಳಿಸುತ್ತಿರುವ ಚಿತ್ರರಂಗ, ಸಾದ್ಯವಾದಷ್ಟು ಬೇಗ ಬುದ್ಧಿ ಕಲಿಯದಿದ್ದರೆ, ನಿರ್ಮಾಪಕ, ನಟ, ನಟಿ, ನಿಷೇಧ ಎಂದು ಬೀದಿಗೆ ಬರುತ್ತಿದ್ದರೆ, ಅವರಿಗೇ ತೊಂದರೆ ಕಟ್ಟಿಟ್ಟ ಬುತ್ತಿ. ಆದಷ್ಟು ಬೇಗ ಒಗ್ಗಟ್ಟು ಮೂಡಲಿ. ಉದ್ಯಮದೊಳಗಿನ ಕಿತ್ತಾಟ ನಿಲ್ಲಲಿ. ಜನ ಸಿನಿಮಾ ನಿಷೇಧ ಮಾಡುವ ಹಂತಕ್ಕೆ ಹೋಗುವ ಮೊದಲು ಎಚ್ಚೆತ್ತುಕೊಳ್ಳಲಿ. ಮುಂದಿನ ಪುಟ ನೋಡಿ....

More from Filmibeat

English summary
This is the summary of most discussed, debated film personalities of 2011. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X