»   » ಸೈಕೋ;ಮುಹೂರ್ತದಿಂದ ಬೆಳ್ಳಿತೆರೆವರೆಗಿನ ನೋಟ

ಸೈಕೋ;ಮುಹೂರ್ತದಿಂದ ಬೆಳ್ಳಿತೆರೆವರೆಗಿನ ನೋಟ

Subscribe to Filmibeat Kannada

* ಮಹೇಶ್ ಮಲ್ನಾಡ್

*ನಗರದ ಜೆಎಸ್ಎಸ್ ಆಡಿಟೋರಿಯಂನಲ್ಲಿ ಅಕ್ಷಯ ತದಿಗೆಯಂದು ಚಿತ್ರಕ್ಕೆ ಮಹೂರ್ತ
*ಹಿರಿಯ ಪತ್ರಕರ್ತ ಎಎಸ್ ಮೂರ್ತಿ, ಹಿರಿಯ ಪತ್ರಕರ್ತಪಿಜಿ ವಿಜಯಸಾರಥಿ, ವಿತರಕ ಮಾರ್ಸ್ ಸುರೇಶ್, ಪಿಎಲ್ಎನ್ ಶಾಸ್ತ್ರಿ ಹಾಗೂ ಡಿಫರೇಂಟ್ ಡ್ಯಾನಿ ಸಮ್ಮುಖದಲ್ಲಿ ಚಿತ್ರ ಸೆಟ್ಟೇರಿತು.
*ತಾಯಿ ರಾಜರಾಜೇಶ್ವರಿಗೆ ವಂದಿಸುತ್ತಾ ಮೊದಲ ದೃಶ್ಯಕ್ಕೆ ರಾಮಣ್ಣ ಕ್ಯಾಮೆರಾ ಸ್ವಿಚ್ಆನ್ ಮಾಡಿದರು. ಟಿ ವೆಂಕಟರಮಣ ಶೆಟ್ಟಿ ಚಿತ್ರಕ್ಕೆ ಕ್ಲಾಪ್ ಮಾಡಿದರು. ಮೊದಲ ದೃಶ್ಯದಲ್ಲಿ ಕನ್ನಡ ನಾಡು ನುಡಿಯನ್ನು ಹೊಗಳುವ 'ಪ್ರೀತಿಯ ಮನಶಾಂತಿಯ ಸಿರಿ ಹೊನ್ನಿನ ನಾಡಿದು ಕೇಳಿ ಬಂತು. ಈ ಚಿತ್ರದಲ್ಲಿ ಈ ಹಾಡು 320 ಸೆಂಕಡುಗಳ ಕಾಲ ಮೂಡಿ ಬರಲಿದೆ.
*ಮೇ 18,2007ರಲ್ಲಿ ಚಿತ್ರೀಕರಣಕ್ಕೆ ಚಾಲನೆ ದೊರೆಯಿತು.
*ಸುಮಾರು 150-250 ವರ್ಷಕ್ಕೂ ಹಳೆಯದಾದ ಮನೆಯಲ್ಲಿ ಚಿತ್ರದ ನಾಯಕ ವಾಸಿಸುತ್ತಾನಂತೆ.
*ಮೇ 3,2008 ರಂದು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಚಿತ್ರದ ಧ್ವನಿಸುರಳಿ ಅನಾವರಣಗೊಂಡಿತು. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಶೇಖರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
*ರಾಕ್ ಮತ್ತು ಜನಪದ ಶೈಲಿಯ ಮಿಶ್ರಿತ ಶೈಲಿಯ ಸಂಗೀತ ನೀಡಿ ಜನ ಮೆಚ್ಚುಗೆ ಗಳಿಸಿರುವ ರಘು ದೆಕ್ಷಿತ್ ಗೆ ಸಂಗೀತ ಸಂಯೋಜನೆಯಲ್ಲಿ ರೋಹಿತ್ ಹಾಗೂ ಪ್ರದೀಪ್ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
*ರಘು ಅವರು ಸುಮಾರು 8 ವರ್ಷಗಳಿಂದ ವಿವಿಧ ದೇಶಗಳಲ್ಲಿ ಫೋಕ್ ರಾಕ್ ಕಚೇರಿಗಳನ್ನು ನೀಡಿ ಯಶಸ್ವಿಯಾಗಿದ್ದಾರೆ. ಅಂತರಾಗ್ನಿ ಎಂಬ ಆಲ್ಬಂ ಹೊರತಂದು ಬಾಲಿವುಡ್ ನ ಬಿಗ್ ಬಿ , ಶಾರುಖ್ ನಿಂದ ಹಿಡಿದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸೈಕೋ ಚಿತ್ರಕ್ಕೂ ಮೊದಲು ವಿಜಯ್ ಹಾಗೂ ಶ್ರೀ ಮುರಳಿ ಸೋದರರ ಮಿಂಚಿನ ಓಟ ಚಿತ್ರದಲ್ಲಿ ಒಂದೆರಡು ಹಾಡು ಹಾಡಿದ್ದರು.
*ಸೈಕೋ ಚಿತ್ರದ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಹಾಡಿನಲ್ಲಿ ಅಭಿನಯಿಸಿದ್ದರೆ ಕೂಡಾ. ಚಿತ್ರದ ಪ್ರಚಾರಕ್ಕಾಗಿ ಆರ್ಕ್ಯುಟ್, ಯೂಟೂಬ್ ಮುಂತಾದ ಸಮುದಾಯ ತಾಣಗಳನ್ನು ಬಳಸಿಕೊಳ್ಳಲಾಯಿತು.
*ಕಳೆದ ಜುಲೈನಿಂದ ಈವರೆಗೂ ಸುಮಾರು 1.5 ಲಕ್ಷಕ್ಕೂ ಅಧಿಕ ಮಂದಿ ಚಿತ್ರದ ಹಾಡು ಹಾಗೂ ಟ್ರೈಲರ್ ಗಳನ್ನು ವೀಕ್ಷಿಸಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಇನ್ನು ಫೋರಂಗಳು, ಚರ್ಚಾ ವೇದಿಕೆಗಳಲ್ಲಿ ಈ ಚಿತ್ರದ ಬಗ್ಗೆ ನಡೆದಿರುವ ಮಾತುಕತೆಯ ಪುಟದ ಸಂಖ್ಯೆ ನೂರರ ಹತ್ತಿರವಾಗಿದೆ.
*ಚಿತ್ರ ಅ.31 ರಂದು ವಿಶ್ವದಾದ್ಯಂತ ಬಿಡುಗಡೆ ಯಾಗುತ್ತಿದೆ. ಯುಕೆ, ಯುಎಸ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಮಲೇಶಿಯಾ, ಯುಎಇ, ನ್ಯೂಜಿಲ್ಯಾಂಡ್ ಸೇರಿದಂತೆ ಯುರೋಪ್ ನ ಕೆಲ ದೇಶಗಳಲ್ಲಿ ತೆರೆ ಕಾಣುತ್ತಿದೆ.

ಚಿತ್ರದ ತಾಂತ್ರಿಕ ವರ್ಗ ಹೀಗಿದೆ
*ಸಂಗೀತ ನಿರ್ದೇಶಕ: ರಘು ದೀಕ್ಷಿತ್, ಸಾಹಿತ್ಯ: ದಿ.ಆರ್. ಎನ್. ಜಯಗೋಪಾಲ್, ವಿ.ಮನೋಹರ್, ಜಯಂತ್ ಕಾಯ್ಕಿಣಿ, ದೇವದತ್ತ, ರಘು ದೀಕ್ಷಿತ್, ಸ್ವರ್ಣ ಆಡಿಯೋ ಕಂಪೆನಿ ಹೊರ ತಂದಿರುವ ಧ್ವನಿ ಸುರಳಿ ಬೆಲೆ ಕೇವಲ ರು.45.ಚಿತ್ರದಲ್ಲಿ ಥೀಮ್ ಮ್ಯೂಸಿಕ್ ಸೇರಿ 7 ವೈವಿಧ್ಯಮಯ ಹಾಡುಗಳಿವೆ.
*ನಿರ್ದೇಶನ: ದೇವದತ್ತ ಜೋಶಿ, ನಿರ್ಮಾಪಕ : ಆರ್. ಗುರುದತ್ತ, ಸಹ ನಿರ್ಮಾಪಕ: ರಕ್ಷಿತ್ ಜೆ ಪೆರಿಕಾಲ್,
ಸಹ ನಿರ್ದೇಶಕ:ಬಿ.ಎನ್ .ಪ್ರಸಾದ್, ನೃತ್ಯ: ಬಿ.ಎಸ್. ವಿನ್ಸೆಂಟ್, ಸಂಕಲನ: ಬಿ.ಎಸ್. ಕೆಂಪರಾಜು, ಛಾಯಾಗ್ರಹಕ ನಿರ್ದೇಶನ: ಸಭಾ ಕುಮಾರ್, ಸ್ಟಂಟ್: ರವಿವರ್ಮ, ಕಲೆ: ಇಸ್ಮಾಯಿಲ್, ಕಲೆ; ಬಾಲು
*ರಾಕ್ ಬ್ಯಾಂಡ್ ಜತೆ ಷೊಗೆಂದು ಮೇ 12 ರಂದು ರಘು ದೀಕ್ಷಿತ್ ಅವರು ನಾಗಲ್ಯಾಂಡ್ ನಿಂದ ಅರುಣಾಚಲ ಪ್ರದೇಶಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತು. 30 ಅಡಿ ಆಳದ ಕಂದಕಕ್ಕೆ ಕಾರು ಉರುಳಿತು. ರಘು ಅವರಿಗೆ ತಲೆಗೆ ಪೆಟ್ಟಿ ಬಿತ್ತು. ಕೈ ಮೂಳೆ ಮುರಿಯಿತು. ಆದರೂ ಸ್ವಲ್ಪ ವಿಶ್ರಾಂತಿಯ ನಂತರ ಚಿತ್ರತಂಡದೊಡನೆ ಪ್ರಚಾರಕ್ಕಾಗಿ ಕೈ ಜೋಡಿಸಿದರು.
*ಇದು ರೌಡಿಸಂ ಚಿತ್ರವಲ್ಲ, ಸೆಕ್ಸ್ ಚಿತ್ರವಲ್ಲ. ಸುಂದರ ಕೌಟುಂಬಿಕ ಚಿತ್ರ. . ನಾಯಕಿಯನ್ನು ಕಾಣದೆ ನಾಯಕ ಪರದಾಡುವುದು ನಿಮ್ಮನ್ನು ತುದಿಗಾಲಲ್ಲಿ ನಿಲ್ಲಿಸಲಿದೆ ಎನ್ನುತ್ತಾರೆ ನಿರ್ದೇಶಕ ದೇವದತ್ತ.
*ಚಿತ್ರದ ಶೀರ್ಷಿಕೆ ಹಾಗೂ ಕೆಲ ಆಕ್ಷೇಪರ್ಹ ಸನ್ನಿವೇಶಗಳನ್ನೂ ಹೊರತು ಪಡಿಸಿದರೆ ಚಿತ್ರ ಎಲ್ಲರು ನೋಡಲು ಅರ್ಹ ಎಂದು ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.
*ದೇವದತ್ತ ಅವರು 1.5 ವರ್ಷ ರವಿಚಂದ್ರನ್ ಅವರ ಸಹಾಯಕರಾಗಿ, ಗಾಳಿಪಟ ಖ್ಯಾತಿಯ ದಯಾಳ್ ಅವರ ಜತೆ ಸಹ ನಿರ್ದೇಶಕರಾಗಿ ಅನುಭವ ಹೊಂದಿದ್ದಾರೆ. ಮಠ ಚಿತ್ರದ ಚಿತ್ರಕಥೆ ರಚನೆ ಸಂದರ್ಭದಲ್ಲಿ ನಿರ್ದೇಶಕ ಗುರುಪ್ರಸಾದ್ ಅವರೊಡನೆ ಚರ್ಚೆ ಮಾಡಿದ್ದಾರೆ ಕೂಡಾ.
*ನಿರ್ಮಾಪಕ ಗುರುದತ್ತ ಮೈಸೂರಿನವರು, ಸಾಫ್ಟ್ ವೇರ್ ಇಂಜಿನಿಯರ್ ಆಗಿ 1.5 ವರ್ಷ ಅನುಭವ. ವಿಪ್ರೋ ದಲ್ಲಿ ಕೆಲಸ ಮಾಡಿ, ಯುಎಸ್ ಗೂ ಹೋಗಿ ಬಂದಿದ್ದಾರೆ. ದೇವದತ್ತ ಅವರೊಡನೆ 12 ವರ್ಷಕ್ಕೂ ಹೆಚ್ಚಿನ ಆತ್ಮೀಯ ಸ್ನೇಹ ಸಂಬಂಧ.
*ಕಷ್ಟದಲ್ಲಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿ ನಿರ್ದೇಶಕ ದೇವದತ್ತ ಮಾನವೀಯತೆ ಮೆರೆದಿದ್ದಾರೆ.
* ಚಿತ್ರರಂಗಕ್ಕೂ ಬರುವ ಮೊದಲು ದೇವದತ್ತ ರೇಡಿಯೋಲಜಿಸ್ಟ್ ಆಗಿ ಒಂದು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದು ಇದೆ. ನಂತರ ಸಿನಿಮಾಟೋಗ್ರಾಫಿಯಲ್ಲಿ ಡಿಪ್ಲೋಮಾ ಮಾಡಿದರು. ಚಿತ್ರಕಥೆ ರಚನೆ ಬಗ್ಗೆ ಅಧ್ಯಯನ ಅನುಭವ ಪಡೆದರು.
*ಮೈಸೂರಿನವರೇ ಆದ ಧನುಷ್ ಹಾಗೂ ಅನಿತಾ(ನಿಧಿ, SJCE ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ) ಚಿತ್ರದ ನಾಯಕ, ನಾಯಕಿ ಎಂದು ಸುದ್ದಿ ಹಬ್ಬಿದೆ. ಆದರೆ ಅ.31ರ ಮೊದಲ ಪ್ರದರ್ಶನದಲ್ಲೇ ಹೀರೋ, ಹೀರೋಯಿನ್ ಬಿಡುಗಡೆ ಎನ್ನುತ್ತದೆ ಚಿತ್ರ ತಂಡ.
*ಚಿತ್ರವನ್ನು ಸಕಲೇಶಪುರ, ಮಲೈ ಮಾದೇಶ್ವರ ಬೆಟ್ಟ, ಮೇಲುಕೋಟೆ, ಶ್ರೀರಂಗಪಟ್ಟಣ, ಕೆರೆತೊಣ್ಣೂರು(ಪಾಂಡವಪುರ), ಕಾಗಿನಹಾರೆ, ಪಾಂಡಿಚೇರಿಗಳಲ್ಲಿ ಚಿತ್ರಿಸಲಾಗಿದೆ.
* ಚಿತ್ರಕ್ಕೆ ಸುಮಾರು 1.25 ಕೋಟಿ ವೆಚ್ಚ ಮಾಡಲಾಗಿದೆ. ವಿತರಣೆ ಹಕ್ಕು 2.4 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿಯಿದೆ. ಹೀಗಾಗಿ ಚಿತ್ರ ಬಿಡುಗಡೆ ಮುನ್ನ ನಿರ್ಮಾಪಕರು ಸೇಫ್ ಆಗಿದ್ದಾರೆ.

ಪೂರಕ ಓದಿಗೆ
'ಯೂ ಟೂಬ್' ಮಾಯಾತಾಣದಲ್ಲಿ ಕನ್ನಡ ಝಲಕ್!
ಕುತೂಹಲ ಕೆರಳಿಸಿರುವ ಸೈಕೋ ಚಿತ್ರ ಟ್ರೈಲರ್
ಸದಾಶಿವ ಬ್ರಹ್ಮಾವರ ಅವರಿಗೆ ನೆಲೆ ನೀಡಿದ ಸೈಕೊ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada