Sangeetha Sringeri: ಮಲೆನಾಡ ಹೆಣ್ಣ ನಡು ಸಣ್ಣ.. 'ಲಕ್ಕಿ ಮ್ಯಾನ್' ಸುಂದರಿಯ ಛಲ ಬಲು ಚೆನ್ನ

ಬಾಲಿವುಡ್‌ ಸುಂದರಿಯರಿಗೇ ಸಿಕ್ಸ್ ಪ್ಯಾಕ್ ಬಂದರೆ ಹೇಗೆ? ಫಿಟ್ನೆಸ್ ಮಂತ್ರ ಅವರಿಗೆ ಮಾತ್ರ ಗೊತ್ತೇ..? ಕನ್ನಡದ ನಟಿಯರೂ ಫಿಟ್ನೆಸ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದಾರೆ. ಕಸರತ್ತು ಮಾಡಿ, ದೇಹ ದಂಡಿಸಿ ಶೇಪ್‌ಗೆ ತರುತ್ತಿದ್ದಾರೆ.

ಕನ್ನಡದ ನಟಿ ಸಂಗೀತಾ ಶೃಂಗೇರಿ ಕೂಡ ಇದೇ ಹಾದಿಯಲ್ಲಿ ಯಶಸ್ಸು ಕಂಡಿದ್ದಾರೆ. ನಾವ್ಯಾರಿಗೂ ಕಮ್ಮಿಯಿಲ್ಲ ಅಂತ ದೇಹವನ್ನು ತಿಂಗಳುಗಳ ಕಾಲ ದೇಹ ದಂಡಿಸಿದ್ದಾರೆ. ಶ್ರಮ ಪಟ್ಟು ತನ್ನ ದೇಹವನ್ನು ಫಿಟ್ ಅಂಡ್ ಫೈನ್ ಮಾಡಿಕೊಂಡಿದ್ದಾರೆ.

777 Charlie actress Sangeetha Sringeri six pack photos went viral

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಗೀತಾ ಫಿಟ್ನೆಸ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದರು. ಅದಕ್ಕೆ ನೆಟ್ಟಿಗರು ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುತ್ತಲೇ ಇದ್ದರು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂಗೀತಾ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದರು. ಅದಕ್ಕೀಗ ರಿಸಲ್ಟ್ ಸಿಕ್ಕಿದೆ. ನೆಟ್ಟಿಗರೇ ಈಗ ಮಲೆನಾಡ ಹೆಣ್ಣ ನಡು ಸಣ್ಣ ಅನ್ನೋಕೆ ಶುರು ಮಾಡಿದ್ದಾರೆ.

ಕನ್ನಡ ಉದಯೋನ್ಮುಖ ನಟಿ ಸಂಗೀತಾ

ಮಲೆನಾಡಿನ ಶೃಂಗೇರಿ ಮೂಲದ ನಟಿ ಸಂಗೀತಾ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 'ಹರ ಹರ ಮಹಾದೇವ್' ಅನ್ನೋ ಪೌರಾಣಿಕ ಧಾರಾವಾಹಿಯ ಮೂಲಕ ಸಂಗೀತಾ ನಟನೆಗಿಳಿದಿದ್ದರು. ಅಲ್ಲಿಂದ ಆಕೆಯ ಜರ್ನಿಯೀಗ ಸಿನಿಮಾದ ವರೆಗೂ ಬಂದು ನಿಂತಿದೆ. '777 ಚಾರ್ಲಿ'ಯಲ್ಲಿ ನಟಿಸಿದ ಬಳಿಕವಂತೂ ಸಂಗೀತಾ ಶೃಂಗೇರಿ ಕನ್ನಡಿಗರ ಮನದಲ್ಲಿ ಮನೆಮಾತಾಗಿದ್ದಾರೆ. ಹಾಗೇ ಫಿಟ್ನೆಸ್ ಫ್ರೀಕ್ ಆಗಿರೋ ಈ ನಟಿ ತನ್ನ ದೇಹಕ್ಕೆ ಸಂಪೂರ್ಣವಾಗಿ ಹೊಸ ಟಚ್ ಕೊಟ್ಟಿದ್ದಾರೆ.

3 ತಿಂಗಳು.. 26km ಪ್ರಯಾಣ.. ಹೆವೀ ಟ್ರೋಲ್

ಸಂಗೀತಾ ಶೃಂಗೇರಿ ಕಳೆದ ಮೂರು ತಿಂಗಳಿಂದ ತನ್ನ ದೇಹವನ್ನು ದಂಡಿಸುತ್ತಿದ್ದಾರೆ. ಪ್ರತಿ ದಿನ 26 ಕಿ.ಮೀ ಟ್ರಾವೆಲ್ ಮಾಡುತ್ತಿದ್ದರು. ಡಯೆಟ್, ವರ್ಕ್‌ಔಟ್ ಅಂತ ಛಲಬಿಡದೆ ತಾನಂದುಕೊಂಡಿದ್ದನ್ನು ಸಾಧಿಯೇ ಬಿಟ್ಟಿದ್ದಾರೆ. ದೇಹಕ್ಕೊಂದು ಶೇಪ್ ಕೊಟ್ಟಿದ್ದಾರೆ. ಜೀರೋ ಸೈಜ್ ಮಾಡಿ ತನ್ನ ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಸಂಗೀತ ಛಲ ದೇಹ ಸೌಂದರ್ಯದ ಬಗ್ಗೆ ಕಾಳಜಿ ಹೊಂದಿದ ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದೆ.

ಆರೋಗ್ಯದಲ್ಲೂ ಬದಲಾವಣೆಗಳಾಗಿವೆ

3 ತಿಂಗಳು ವರ್ಕ್‌ಔಟ್ ಮಾಡಿದ್ದರಿಂದ ಸಂಗೀತಾ ಶೃಂಗೇರಿ ಸೌಂದರ್ಯ ಅಷ್ಟೇ ವೃದ್ಧಿಯಾಗಿಲ್ಲ. ದೇಹಕ್ಕೆ ಶೇಪ್ ಅಷ್ಟೇ ಸಿಕ್ಕಿಲ್ಲ. ಬದಲಾಗಿ ಆಕೆಯ ಆರೋಗ್ಯದಲ್ಲೂ ಬದಲಾವಣೆಗಳಾಗಿವೆ. ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಿದ್ದು, ಈಗ ಅದು ಹತೋಟಿಗೆ ಬಂದಿದ್ದು, ಮೊದಲಿಗಿಂತಲೂ ಆರೋಗ್ಯವಂತೆ ಹಾಗೂ ಶಕ್ತಿಶಾಲಿಯಾಗಿದ್ದೇನೆಂದು" ಸ್ವತ: ಸಂಗೀತಾ ಶೃಂಗೇರಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

ಸಂಗೀತಾ ಶೃಂಗೇರಿ ನಟಿಯಾಗುವುದಕ್ಕೂ ಮುನ್ನ ರೂಪದರ್ಶಿಯಾಗಿದ್ದರು. ಆ ಬಳಿಕವಷ್ಟೇ ಕಿರುತೆರೆಗೆ ಕಾಲಿಟ್ಟಿದ್ದರು. ಈಗ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. '777 ಚಾರ್ಲಿ', 'A+', 'ಲಕ್ಕಿ ಮ್ಯಾನ್', 'ಶಿವಾಜಿ ಸೂರತ್ಕಲ್ 2' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಫಿಟ್ನೆಸ್ ಕಡೆಗೂ ಹೆಚ್ಚು ಗಮನ ಹರಿಸುತ್ತಿದ್ದಾರೆ.

More from Filmibeat

English summary
Actress Sangeetha Sringeri workout Photos went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X