»   » ಅಲ್ರೀ..'ರಾಜು'ಗೂ 'ರಂಗಿತರಂಗ'ಕ್ಕೂ ಏನ್ರೀ ಸಂಬಂಧ..!

ಅಲ್ರೀ..'ರಾಜು'ಗೂ 'ರಂಗಿತರಂಗ'ಕ್ಕೂ ಏನ್ರೀ ಸಂಬಂಧ..!

Posted By:
Subscribe to Filmibeat Kannada

ನಟ ಗುರುನಂದನ್ ಮತ್ತು 'ರಂಗಿತರಂಗ' ನಟಿ ಆವಂತಿಕಾ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ ಹೊಸ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಮಾಡಲಾಗಿದೆ.

'ಶಿವಲಿಂಗ' ಚಿತ್ರದ ನಿರ್ಮಾಪಕ ಕೆ.ಎ ಸುರೇಶ್ ಮತ್ತು 'ಫಸ್ಟ್ ರ್ಯಾಂಕ್ ರಾಜು' ಚಿತ್ರದ ಖ್ಯಾತಿಯ ನಿರ್ದೇಶಕ ನರೇಶ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ 'ರಾಜು ರಂಗಿತರಂಗ' ಎಂದು ಹೆಸರಿಡಲಾಗಿದೆಯಂತೆ.['ರಂಗಿ' ಬೆಡಗಿ ಅವಂತಿಕಾಗೆ ಸಿಕ್ತು ಮತ್ತೊಂದು ಅವಕಾಶ]

Gurunandan and Avantika Shetty starrer new film titled 'Raju Rangitaranga'

'1st ರ್ಯಾಂಕು ಅಲ್ಲ..2nd ರ್ಯಾಂಕು ಅಲ್ಲ..' ಎಂಬ ಅಡಿಬರಹ ಹೊತ್ತು ಮೂಡಿಬರುತ್ತಿರುವ 'ರಾಜು ರಂಗಿತರಂಗ' ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸದ್ಯಕ್ಕೆ ಚಿತ್ರತಂಡ ಊಟಿಯಲ್ಲಿ ಬೀಡು ಬಿಟ್ಟಿದೆ.

ಅಂದಹಾಗೆ ಈ ಚಿತ್ರಕ್ಕಿಡುವ ಟೈಟಲ್ ಗಳ ಲಿಸ್ಟ್ ನಲ್ಲಿ ಹಲವು ಹೆಸರುಗಳಿದ್ದು, ಕೊನೆಗೂ ಅಳೆದು-ತೂಗಿ 'ರಾಜು ರಂಗಿತರಂಗ' ಅಂತ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಅಂದ್ರೆ 'ರಾಜು ರಂಗಿತರಂಗ' ಎಂಬ ಟೈಟಲ್ ಗೂ ಚಿತ್ರದ ನಟ-ನಟಿಗೂ ಏನಾದ್ರೂ ಸಂಬಂಧ ಇರಬಹುದಾ?, ಅಂತ ಸಹಜ ಪ್ರಶ್ನೆಯೊಂದು ಕಾಡುತ್ತದೆ.['ರಾಜು'ಗೆ 'ಶಿವಲಿಂಗ' ಸುರೇಶ್ ಹೊಸ ಸಿನಿಮಾ ಮಾಡ್ತವ್ರೇ]

Gurunandan and Avantika Shetty starrer new film titled 'Raju Rangitaranga'

ಏಕೆಂದರೆ 'ಫಸ್ಟ್ ರ್ಯಾಂಕ್ ರಾಜು' ಎಂಬ ಚಿತ್ರದ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡ ನಟ ಗುರುನಂದನ್ ಅವರು 'ರಾಜು' ಅಂತಲೇ ಫೇಮಸ್ ಆದರು. ನಟಿ ಅವಂತಿಕಾ ಅವರಿಗೆ 'ರಂಗಿತರಂಗ' ಹೆಸರು ತಂದುಕೊಟ್ಟಿತು.

ಇದೀಗ ಇವರಿಬ್ಬರು ಒಂದಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ 'ರಾಜು ರಂಗಿತರಂಗ' ಅಂತ ವಿಭಿನ್ನ ಹೆಸರು ಬೇರೆ ಇಟ್ಟಿದ್ದಾರೆ. ನಿಜವಾಗ್ಲೂ ಯಾಕೋ ಅನುಮಾನ ಕಾಡುತ್ತಿದೆ. ಅಂತೂ ಈ ಅನುಮಾನಕ್ಕೆ ಚಿತ್ರತಂಡವೇ ಉತ್ತರ ಕೊಡಬೇಕಿದೆ.

Gurunandan and Avantika Shetty starrer new film titled 'Raju Rangitaranga'

ಗುರುನಂದನ್ ಮತ್ತು ಅವಂತಿಕಾ ಅವರಿಗೆ ತಮ್ಮ ಮೊದಲ ಸಿನಿಮಾದ ಯಶಸ್ಸಿನ ಪರಿಣಾಮ ಹಲವಾರು ಅವಕಾಶ ಹುಡುಕಿಕೊಂಡು ಬರುತ್ತಿವೆ. ಸದ್ಯಕ್ಕೆ 'ಸ್ಮೈಲ್ ಪ್ಲೀಸ್' ಚಿತ್ರದ ಶೂಟಿಂಗ್ ಮುಗಿಸಿರುವ ನಟ ಗುರುನಂದನ್ ಇದೀಗ 'ರಾಜು ರಂಗಿತರಂಗ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

ನಟಿ ಅವಂತಿಕಾ ಶೆಟ್ಟಿ ಅವರ ಎರಡನೇ ಚಿತ್ರ 'ಕಲ್ಪನಾ 2' ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಅವಂತಿಕಾ ಅವರ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಸದ್ಯಕ್ಕೆ ಅವಂತಿಕಾ ಅವರು ಭಂಡಾರಿ ಸಹೋದರರ ಎರಡನೇ ಪ್ರಾಜೆಕ್ಟ್ 'ರಾಜರಥ' ಏರಿ ಕುಳಿತಿದ್ದಾರೆ.[ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ]

English summary
'1St Rank raju' fame Naresh Kumar directorial new film titled as 'Raju Rangitaranga'. Kannada Actor Gurunandan, Actress Avantika Shetty in the lead role. The movie produced by KA Suresh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada